ಪುಟ:Kadaliya Karpoora.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭

ಬೆಳೆಯುವ ಬೆಳಕು

6

ಮಹಾದೇವಿ ಮನೆಗೆ ಬಂದು ತನ್ನ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಊಟ ಮಾಡಿ ಸಿದ್ಧಳಾಗುವ ವೇಳೆಗೆ ಶಂಕರಿಯು ಬಂದಳು. ಇಬ್ಬರೂ ಶಾಲೆಗಾಗಿ ಮಠದ ಕಡೆಗೆ ನಡೆಯತೊಡಗಿದರು.

ಹೆಣ್ಣು ಮಕ್ಕಳು ಶಾಲೆಗೆ ಹೋಗವುದೆಂದರೆ ಜನಗಳಿಗೆ ಅದೊಂದು ಟೀಕೆಗೆ ಗುರಿಯಾಗುವ ಆಶ್ಚರ್ಯದ ವಿಷಯವೇ ಆಗಿತ್ತು. ಗುರುಲಿಂಗದೇವರು ತಮ್ಮ ಮಠದಲ್ಲಿ ಶಾಲೆಯನ್ನು ಪ್ರಾರಂಭಿಸಿದಾಗ ಹೆಣ್ಣು ಮಕ್ಕಳನ್ನೂ ಅಲ್ಲಿಗೆ ಕಳುಹಿಸಿ ಕೊಡುವಂತೆ ಜನರಿಗೆ ಹೇಳಿದ್ದರು. ಇದರಿಂದ ಎಲ್ಲರಿಗೂ ಆಶ್ಚರ್ಯವೇ ಆಗಿತ್ತು. ಅವರ ಭಕ್ತರಲ್ಲಿ ಕೂಡ ಅನೇಕರು ಅದಕ್ಕೆ ಸಮ್ಮತಿಸಿರಲಿಲ್ಲ.

“ಎಲ್ಲಿಯಾದರೂ ಉಂಟೇ, ಗುರುಗಳೇ? ಹೆಣ್ಣು ಮಕ್ಕಳಿಗೇಕೆ ಈ ವಿದ್ಯೆ? ಅದರಲ್ಲೂ ಹುಡುಗರ ಜೊತೆಗೆ” ಎಂದಿದ್ದರು.

“ವಿದ್ಯೆಗೆ ಹೆಣ್ಣು ಗಂಡು ಎಂಬ ಭೇದವಿಲ್ಲ. ಧರ್ಮದ ಮುಂದೆ, ವಿದ್ಯೆಯ ಮುಂದೆ ಎಲ್ಲರೂ ಸಮಾನರು. ಆ ಎಳೆಯ ಮಕ್ಕಳಲ್ಲಿ ಹೆಣ್ಣು ಗಂಡು ಎಂಬ ಭೇದಗಳನ್ನೇಕೆ ಕಲ್ಪಿಸುತ್ತೀರಿ. ಬೆಳೆದು ಪ್ರೌಢವಯಸ್ಸಿನವರಾದಾಗ ಆ ಮಾತು ಬೇರೆ. ಅವರವರ ಕರ್ತವ್ಯ ನಿರ್ವಹಣೆಗೆ ಮತ್ತು ಮನೋಧರ್ಮಕ್ಕೆ ಅನುಗುಣವಾದ ವಿದ್ಯೆ ಆಗ ಅವಶ್ಯಕ. ಆದರೆ ಪ್ರಾರಂಭದಲ್ಲಿ ಹೆಣ್ಣುಗಂಡೆಂಬ ಭೇದವಿಲ್ಲದೆ, ಎಲ್ಲರಿಗೂ ಅವಶ್ಯಕವಾದ ಮೂಲಭೂತವಾದ ಅಂಶಗಳನ್ನು ಅರಿಯಲು ಈ ಭೇದವೇ?”

ಎಂದು ಮುಂತಾಗಿ ಹೇಳಿದ್ದರು ಗುರುಲಿಂಗರು. ಅದು ಎಲ್ಲರಿಗೂ ಅಷ್ಟಾಗಿ ಹಿಡಿಯದಿದ್ದರೂ ಕೆಲವರು ಮಾತ್ರ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವ ಮನಸ್ಸು ಮಾಡಿದ್ದರು. ಅದು ಊರಿನ ಜನರ ಕುತೂಹಲಕರವಾದ ಚರ್ಚೆಯ ವಿಷಯವೂ ಆಗಿತ್ತು ಕೆಲವು ದಿನ.

ಓಂಕಾರನೇ ಒತ್ತಾಯಪೂರ್ವಕವಗಿ ಹೇಳಿ ನಾಗಭೂಷಣ ಶರ್ಮರನ್ನು ಒಪ್ಪಿಸಬೇಕಾಗಿ ಬಂದಿತ್ತು, ಅವರ ಮಗಳನ್ನು ಶಾಲೆಗೆ ಕಳುಹಿಸಲು. ಹೀಗಾಗಿ ಮಹಾದೇವಿಗೆ ಶಂಕರಿಯ ಜೊತೆ ದೊರೆತಿತ್ತು.

ಆದರೆ ಮಹಾದೇವಿಯ ಶಿಕ್ಷಣವು ಶಾಲೆಯ ಪಾಠದಿಂದ ಮಾತ್ರವೇ ಮುಕ್ತಾಯವಾಗಿರಲಿಲ್ಲ. ಗುರುಲಿಂಗರ ಸಾಕ್ಷಾತ್ ಶಿಕ್ಷಣಕ್ಕೆ ಆಕೆ ಒಳಪಟ್ಟಿದ್ದಳು. ಶಲೆಯಲ್ಲಿ ಪಾಠ ಮುಗಿದ ಮೇಲೆ ಗುರುಗಳ ಬಳಿಗೆ ಹೋಗುತ್ತಿದ್ದಳು. ಶಾಲೆಯಲ್ಲಿ ಕಲಿತುದನ್ನೆಲ್ಲಾ ಅಲ್ಲಿ ಹೇಳುತ್ತಿದ್ದಳು. ಅದಕ್ಕಿಂತ ಹೆಚ್ಚಾಗಿ ಆಕೆಯ ಅಂತರಂಗದ