ಪುಟ:Kadaliya Karpoora.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬರೆ

೬೯

ಅಷ್ಟರಲ್ಲಿ ದಾಕ್ಷಾಯಿಣಿ, ಕಾತ್ಯಾಯಿನಿಯರೂ ಅಲ್ಲಿಗೆ ಬಂದರು. ಚರ್ಚಿಸಿ ಕೊನೆಗೆ : ``ರಾಜರು ಆನೆಯ ಮೇಲೆ ಕುಳಿತು ಉತ್ಸವದಿಂದ ಅರಮನೆಯತ್ತ ತೆರಳುವಾಗ ಇಲ್ಲೇ ನಿಂತು ಅವರನ್ನು ನೋಡಿದರೆ ಸಾಕು ಎಂಬ ನಿರ್ಧಾರಕ್ಕೆ ಬಂದರು.

ಈ ವೇಳೆಗೆ ಮುಚ್ಚಿದ ಕುದುರೆಗಾಡಿಯಲ್ಲಿ ರಾಜರ ಸವಾರಿ ರಸ್ತೆಯ ಮೇಲೆ ಹೊರಟಿತ್ತು. ಹಿಂದೆ ಮುಂದೆ ಕುದುರೆ ಸವಾರರ ತಂಡ ; ಮಧ್ಯದಲ್ಲಿ ಬೃಹದ್ದೇಹದ ನಾಲ್ಕು ಕುದುರೆಗಳನ್ನು ಕಟ್ಟಿದ ಗಾಡಿ ವೇಗವಾಗಿ ಸಾಗುತ್ತಿತ್ತು. ಗಾಡಿಯಲ್ಲಿರುವ ಕಿಟಕಿಗಳ ಮೂಲಕ ರಾಜನನ್ನು ಸ್ವಲ್ಪಮಟ್ಟಿಗೆ ಕಾಣಬಹುದಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿಯೂ ನಿಂತು ಜನ ರಾಜನನ್ನು ನೋಡುವ ಕುತೂಹಲವನ್ನು ತೀರಿಸಿಕೊಳ್ಳುತ್ತಿದ್ದರು.

ಓಂಕಾರನ ಮನೆಯ ಮುಂದೆ ಹಾದುಹೋಯಿತು ಗಾಡಿ.

``ಸರಿಯಾಗಿ ಕಾಣಲೇ ಇಲ್ಲ, ಕಣೆ. ದಾಕ್ಷಾಯಿಣಿ ಹೇಳಿದಳು.

``ನಾನೇನೋ ನೋಡಿದೆನಮ್ಮ ಅವಳಿಗಿಲ್ಲದ ಭಾಗ್ಯ ತನಗೆ ಸಿಕ್ಕಿತೆಂಬ ಸಂತೋಷವಿತ್ತು ಕಾತ್ಯಾಯಿನಿಯ ಧ್ವನಿಯಲ್ಲಿ.

``ಧನ್ಯಳಾದೆ ಬಿಡು ನಕ್ಕಳು ಮಹಾದೇವಿ. ಅವಳಿಗೇನೂ ಕುತೂಹಲ ಇರಲಿಲ್ಲ.

``ಹೋಗಲಿ ಬಿಡು, ಹಿಂದಿರುಗಿ ಬರುವಾಗ ಚೆನ್ನಾಗಿ ನೋಡಿದರಾಯಿತು. ಆಗ ಆನೆಯ ಮೇಲೆ ಬರುತ್ತಾರೆ. ಎಲ್ಲರೂ ಬೇಕಾದಷ್ಟು ಹೊತ್ತು ನೋಡಬಹುದು. ಸಮಾಧಾನ ಮಾಡಿದಳು ಕಾತ್ಯಾಯಿನಿ.

``ನೋಡಿ, ನೋಡಿ... ಚೆನ್ನಾಗಿ ನೋಡಿ ; ಏನು ಹುಚ್ಚೋ ನಿಮಗೆ ನಗುತ್ತಾ ಹೇಳಿದಳು ಮಹಾದೇವಿ.

``ಸಾಕು ಬಿಡೇ, ಮಹಾದೇವಿ. ರಾಜರನ್ನು ನೋಡುವುದೆಂದರೆ ಕುತೂಹಲವಲ್ಲವೇ ? ನಿನಗಂತೂ ಏನೂ ಬೇಡ. ಹೇಳಿದಳು ಕಾತ್ಯಾಯಿನಿ.

ಉತ್ಸವವನ್ನು ನೋಡುವುದಕ್ಕೆ ಮಹಾದೇವಿಯ ಮನೆಯೇ ಪ್ರಶಸ್ತವಾದ ಸ್ಥಳವೆಂದು ನಿರ್ಧರಿಸಿದ್ದರು. ಓಂಕಾರನ ಮನೆಯ ಮುಂದೆ ಚಾಚಿದ್ದ ಬಿಸಿಲು ಮಚ್ಚು, ರಸ್ತೆಯಲ್ಲಿ ಹೋಗುವ ಉತ್ಸವವನ್ನು ನೋಡುವುದಕ್ಕೆ ತುಂಬಾ ಅನುಕೂಲಕರವಾಗಿತ್ತು. ಅಲ್ಲದೆ ಊರಿನ ಶ್ರೀಮಂತ ವರ್ತಕರೆಲ್ಲ ರಾಜನಿಗೆ ಗೌರವ ಕಾಣಿಕೆಯನ್ನು ಅರ್ಪಿಸುವ ಏರ್ಪಾಡು ಅಲ್ಲಿದ್ದುದರಿಂದ ಉತ್ಸವ ಸ್ವಲ್ಪ ಹೊತ್ತು ಅಲ್ಲಿ ನಿಲ್ಲುವ ನಿರೀಕ್ಷೆಯಿತ್ತು. ಗೆಳತಿಯರೆಲ್ಲಾ ಸಂಜೆಯ ವೇಳೆಗೆ ಅಲ್ಲಿ