ಪುಟ:Kadaliya Karpoora.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪

ಕದಳಿಯ ಕರ್ಪೂರ

``ನಿಮಗೆ ಅದು ಅಗತ್ಯವಿಲ್ಲದಿರಬಹುದು, ಶೆಟ್ಟರೇ... ಆದರೆ ನಮಗೆ ಅಗತ್ಯ, ಅವುಗಳನ್ನು ಕೊಡುವುದು ಎನ್ನುತ್ತಾ ತಾನೇ ಮೇಲೆದ್ದು ಸ್ತ್ರೀಯರಲ್ಲಿ ತಟ್ಟೆಗಳನ್ನು ತೆಗೆದುಕೊಂಡು ತಾನು ಕುಳಿತಿದ್ದ ದಿಂಬಿನ ಸಮೀಪದಲ್ಲಿಡತೊಡಗಿದ. ಅವನ ಜೊತೆಗೆ ಬಂದಿದ್ದ ಸಹಾಯಕರಿಬ್ಬರು ಈ ಕೆಲಸದಲ್ಲಿ ಆತನಿಗೆ ನೆರವಾದರು. ಅಸಹನೆಯಿಂದ ಓಂಕಾರ ಅದನ್ನು ನೋಡುತ್ತಿದ್ದ. ಕೊನೆಗೆ ವಸಂತಕ ಹೇಳಿದ:

``ಓಂಕಾರಶೆಟ್ಟರೇ... ನೀವು ಲೋಕಾನುಭವವನ್ನು ಬಲ್ಲವರು. ದುಡುಕಬೇಡಿ. ಏನೂ ಅರಿಯದ ನಿಮಗೆ ಮಗಳಿಗೆ ಬುದ್ಧಿ ಹೇಳಿ. ಚೆನ್ನಾಗಿ ಆಲೋಚಿಸಿ ; ನಿಮ್ಮ ಅಭಿಪ್ರಾಯವನ್ನು ಹೇಳಿ. ಆಮೇಲೆ ಮತ್ತೆ ಬರುತ್ತೇನೆ ಎಂದು ಹೊರಗೆ ಹೊರಟ. ಪರಿವಾರದವರು ಅವನನ್ನು ಹಿಂಬಾಲಿಸಿದರು.

ಓಂಕಾರ ನಿಸ್ಸಹಾಯಕನಾಗಿ ಉಪಾಯನಗಳನ್ನೊಮ್ಮೆ, ವಸಂತಕನನ್ನೊಮ್ಮೆ ನೋಡುತ್ತಿದ್ದ.

ಈ ವೇಳೆಗೆ ಓಂಕಾರನ ಮನೆಯ ಮುಂದೆ ಒಂದು ಸಣ್ಣ ಗುಂಪೇ ಸೇರಿ ಗುಜು ಗುಜು ಪ್ರಾರಂಭಿಸಿತ್ತು. ಆತನಿಗೆ ತೀರಾ ಆಪ್ತರಾದ ಒಬ್ಬಿಬ್ಬರು ಒಳಗೆ ಪ್ರವೇಶಿಸಿದರು. ಅದರಲ್ಲಿ ಪಕ್ಕದ ಮನೆಯ ನಾಗಭೂಷಣಶರ್ಮರು ಇದ್ದರು. ಓಂಕಾರ ಅವರಿಗೆ ವಿಷಯವನ್ನೆಲ್ಲಾ ಹೇಳತೊಡಗಿದ.

4

ಇತ್ತ ಒಳಗೆ ಆಗಲೇ ಶರ್ಮರ ಪತ್ನಿ ಮತ್ತು ಮಗಳು ಶಂಕರಿ, ಹಿತ್ತಲ ಬಾಗಿಲಿನಿಂದ ಬಂದಿದ್ದರು. ಲಿಂಗಮ್ಮ ಅವಳಿಗೆ ನಡೆದ ಕಥೆಯನ್ನೆಲ್ಲಾ ಹೇಳುತ್ತಿದ್ದಳು. ಮಹಾದೇವಿ ಮಾತನಾಡುವುದನ್ನೇ ಮರೆತಂತಹ ಮೌನದಿಂದ ಒಂದು ಕಡೆ ಕುಳಿತಿದ್ದಳು. ಕೊನೆಗೊಮ್ಮೆ ಹೇಳಿದಳು :

``ಅವ್ವಾ, ನಾನು ಗುರುಗಳ ಹತ್ತಿರ ಹೋಗಿಬರುತ್ತೇನೆ.

``ಆಗಲಿ ಮಹಾದೇವಿ, ಈಗ ನಮಗೆ ಅವರೇ ಮಾರ್ಗದರ್ಶಕರು. ಹೋಗಿ ಬಾ ಎಂದಳು ಲಿಂಗಮ್ಮ. ಓಂಕಾರನೂ ಅದನ್ನು ಅನುಮೋದಿಸಿದ.

``ನಿಜ ಮಗಳೇ, ಈ ಕತ್ತಲೆಯಿಂದ ಅವರೇ ನನ್ನನ್ನು ಪಾರುಮಾಡಬೇಕು. ನಮಗೆ ಏಕೈಕನಿಷ್ಠೆಯನ್ನು ಕೊಡಬೇಕು. ಇನ್ನು ಸ್ವಲ್ಪ ಹೊತ್ತು ಬಿಟ್ಟು ನಾನೂ ಬರುತ್ತೇನೆ ; ನೀನು ಹೋಗು ಎಂದು ಹೇಳಿದ.

ಸ್ವಲ್ಪ ದೂರದವರೆಗೆ ಮಹಾದೇವಿಯನ್ನು ಶಂಕರಿಯು ಹಿಂಬಾಲಿಸಿದಳು.

``ನನಗೆ ನೆನ್ನೆಯೇ ಅನಿಸಿತು ಮಹಾದೇವಿ. ರಾಜನ ಆ ದೃಷ್ಟಿಯನ್ನು