ಪುಟ:Kadaliya Karpoora.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬಲೆ

೮೭

ಹಾಗೆ ಭಾವಿಸಿ ಎದುರಿಸುವುದೇ ಜೀವನದ ರಹಸ್ಯವೆಂಬುದಂತೂ ಸತ್ಯವಾದ ಮಾತು.

``ಇದನ್ನು ನಾನು ಹೇಗೆ ಎದುರಿಸಬೇಕು, ಗುರುಗಳೇ. ನನಗಂತೂ ಏನೂ ತೋಚದಂತಾಗಿದೆ. ಮತ್ತೆ ಬರುತ್ತೇನೆಂದು ಹೇಳಿ ಹೋಗಿದ್ದಾನೆ ರಾಜನ ಗೆಳೆಯ. ಬಹುಶಃ ಇಂದೇ ಬಂದರೂ ಬರಬಹುದು. ಈಗಲೇನೋ ಅವನಿಗೆ ಛೀಮಾರಿಹಾಗಿ ಕಳುಹಿಸಿದ್ದೇವೆ. ಆದರೆ ಅದು ಅಷ್ಟರಲ್ಲಿಯೇ ಪರ್ಯವಸಾನವಾಗಲಾರದು. ಅದರ ಫಲವನ್ನು ನನ್ನ ತಂದೆ ತಾಯಿಗಳು ಅನುಭವಿಸಬೇಕಾದೀತೆಂಬ ಸ್ಮರಣೆ ಬಂದಾಗಲಂತೂ ನಾನು ಮುಂಗಾಣ ದವಳಾಗುತ್ತೇನೆ. ಈ ಧರ್ಮಸಂಕಟದಿಂದ ನನ್ನನ್ನು ಪಾರುಮಾಡಿ, ಗುರುಗಳೇ.

ದೈನ್ಯತೆಯೇ ಮೂರ್ತಿವೆತ್ತಂತಿತ್ತು ಮಹಾದೇವಿಯ ಸ್ಥಿತಿ.

ಗುರುಗಳು ದೀರ್ಘವಾದ ಆಲೋಚನೆಗೆ ತೊಡಗಿದಂತೆ ತೋರಿತು. ಕಣ್ಣುಮುಚ್ಚಿ ಮೌನವನ್ನು ಧರಿಸಿದರು, ಸ್ವಲ್ಪ ಕಾಲ ಮೌನದಲ್ಲಿಯೇ ಉರುಳಿತು. ನಿಧಾನವಾಗಿ ಕಣ್ದರೆದರು. ಮುಖದಲ್ಲಿ ಏನೋ ಹೊಳೆದಂತಾಯಿತು. ಹೇಳಿದರು:

``ಇದೇನು ಮಹಾದೇವಿ, ನೀನು ಇಷ್ಟೊಂದು ದೀನಳಾಗುವುದೇ ! ಬೇಕೆಂತಲೇ ಇಂತಹ ಒಂದು ಸಮಸ್ಯೆ ನಿನ್ನೆದುರು ಬಂದಿದೆ. ಸಾಮಾನ್ಯರಾಗಿದ್ದರೆ ಅವರಿಗೆ ಇದೊಂದು ಸಮಸ್ಯೆಯೇ ಆಗುತ್ತಿರಲಿಲ್ಲ ; ಅದಕ್ಕೆ ಬದಲಾಗಿ ಇದೊಂದು ಸುಯೋಗವಾಗುತ್ತಿತ್ತು. ತರುಣ ರಾಜನ ಕೈಯನ್ನು ಹಿಡಿಯಲು ಬಯಸದ ತರುಣಿ ಯಾರು ? ರಾಜನಿಗೆ ಮಗಳನ್ನು ಕೊಡಲೊಪ್ಪದ ತಂದೆ ತಾಯಿಗಳಾರು ? ಆದರೆ ನಿನ್ನ ತಂದೆತಾಯಿಗಳು ಎಂತಹ ವಿಪತ್ತನ್ನು ಬೇಕಾದರೂ ಎದುರಿಸಿಯಾರು ; ನಿನ್ನನ್ನು ಆತನಿಗೆ ಕೊಡಲು ಒಪ್ಪಲಾರರು. ಆದರೆ ಈಗ ಅಂತಹ ಹಟದಿಂದಲೂ ಫಲವಿಲ್ಲ. ಪಾಶವೀ ಶಕ್ತಿಯ ಬಲ ಆತನಿಗಿದೆ. ಅದರಿಂದ ಆತ ಅವರನ್ನು ಹಿಂಸಿಸಬಲ್ಲ. ಆದರೆ ನಿನ್ನನ್ನು ಆತ ಬಲಾತ್ಕರಿಸಲಾರ. ಬಲಾತ್ಕರಿಸಿದರೂ ನಿನ್ನ ಸತ್ವಶಕ್ತಿ ನಿನ್ನನ್ನು ಕಾಯಬಲ್ಲುದು. ಆ ನಂಬಿಕೆ ನನಗಿದೆ.

``ನಿಜ, ಗುರುಗಳೇ. ನನ್ನ ಯೋಚನೆ ನನಗಿಲ್ಲ ; ತಂದೆತಾಯಿಗಳದೇ ಯೋಚನೆ ನನಗೆ.

``ಹಾಗಾದರೆ ಒಂದು ಕೆಲಸ ಮಾಡು, ನಿನ್ನ ತಂದೆತಾಯಿಗಳ ಜವಾಬ್ದಾರಿಯಿಂದ ನಿನ್ನನ್ನು ತಪ್ಪಿಸಿಕೊಂಡು, ನಿನ್ನ ಹೊಣೆಯನ್ನು ನೀನೇ ಹೊತ್ತುಕೋ

ಗುರುಗಳ ಈ ಮಾತು ಮಹಾದೇವಿಗೆ ಸ್ಪಷ್ಟವಾಗಲಿಲ್ಲ. ಕೇಳಿದಳು :