ಪುಟ:Kadaliya Karpoora Preliminary pages.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xii

ಒಂದು ಸೂಚನೆಯನ್ನು ಕೊಟ್ಟರು. ಕದಳಿಯ ಪ್ರವಾಸದ ಈ ಅನುಭವದ ಹಿನ್ನೆಲೆಯನ್ನು ಉಪಯೋಗಿಸಿಕೊಂಡು ಅಕ್ಕಮಹಾದೇವಿಯ ಜೀವನವನ್ನು ಕಾದಂಬರಿ ರೂಪದಲ್ಲೇಕೆ ರಚಿಸಬಾರದು?-ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅ ಮಾತು ನನಗೆ ಹಿಡಿಸಿತು. ಅವರ ಆಶಯವೇ ಆಶೀರ್ವಾದವಾಗಿ ಪರಿಣಮಿಸಿತು. ಅದರ ಫಲವೇ ಈ ಕೃತಿ. ಇಲ್ಲಿ ಬರುವ ಶ್ರೀಶೈಲಪರ್ವತದ ಮತ್ತು ಕದಳಿಯ ವನದ ವರ್ಣನೆಯೆಲ್ಲಾ ಅವರ ಸಾಹಸದ ಯಾತ್ರೆಯಿಂದ ನಾನು ಪಡೆದ ಅನುಭವದ ಪರಿಣಾಮ. ಪೂಜ್ಯ ಶ್ರೀಗಳವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.

ನಮ್ಮ ಕದಳಿಯ ಪ್ರವಾಸದಲ್ಲಿ ಜೊತೆಗಿದ್ದು ಆಧ್ಯಾತ್ಮಿಕ ಅನುಭವಕ್ಕೆ ಸಹಾಯಕರಾದವರು ಮತ್ತು ಈ ಕೃತಿಯ ರಚನೆ ಪ್ರಾರಂಭವಾದಂದಿನಿಂದ ವಿಶೇಷವಾದ ಆಸಕ್ತಿಯನ್ನು ವಹಿಸಿ ಪ್ರೋತ್ಸಾಹವನ್ನಿತ್ತವರು ಶ್ರೀ ಲಿಂಗಾನಂದ ಸ್ವಾಮಿಗಳವರು. ಅವರನ್ನು ಸ್ಮರಿಸಿಕೊಳ್ಳುವುದು ಸಂತೋಷಪ್ರದವಾದ ಕರ್ತವ್ಯವಾಗಿದೆ, ಅಂತೆಯೇ ಇದನ್ನು ಬರೆಯುತ್ತಿರುವಾಗ ತಮ್ಮ ಸದಾಶಯದ ಕುತೂಹಲದಿಂದ ಸದಾ ಪ್ರೋತ್ಸಾಹವನ್ನು ಕೊಡುತ್ತಿದ್ದ ಶ್ರೀಮಾನ್ ಎಚ್. ದೇವೀರಪ್ಪನವರು ವಿಶ್ವಾಸವನ್ನು ಮರೆಯಲಾರೆ.

ಮಿತ್ರರಾದ ಶ್ರೀ ಕೆ.ಬಿ. ಪ್ರಭುಪ್ರಸಾದರವರು, ಇದು ಹಸ್ತಪ್ರತಿಯಲ್ಲಿ ಇರುವಾಗಲೇ ಅಮೂಲಾಗ್ರವಾಗಿ ಓದಿ ಕೆಲವು ಅಮೂಲ್ಯವಾದ ಸಲಹೆಗಳನ್ನು ಕೊಟ್ಟು ಉಪಕರಿಸಿದ್ದಾರೆ ಮತ್ತು ಮಿತ್ರರಾದ ಎಲ್. ಬಸವರಾಜು ಅವರು ಇದರ ಸ್ವಲ್ಪ ಭಾಗವನ್ನು ಓದಿಸಿ ಕೇಳಿ ಉತ್ತಮವಾದ ಸೂಚನೆಯನ್ನು ಕೊಟ್ಟಿದ್ದಾರೆ. ಈ ಮಿತ್ರರ ವಿಶ್ವಾಸವನ್ನು ಕೃತಜ್ಞತೆಯಿಮದ ಸ್ಮರಿಸಿಕೊಳ್ಳುತ್ತೇನೆ.

ಈ ಕೃತಿಯನ್ನು ಪ್ರಕಟಿಸಲು ಮುಂದೆ ಬಂದ ಮಿತ್ರರಾದ ಶ್ರೀ ಡಿ.ವಿ.ಕೆ.ಮೂರ್ತಿ ಅವರ ವಿಶ್ವಾಸವನ್ನಂತೂ ನಾನೆಂದು ಮರೆಯಲಾರೆ. ಅವರ ಉತ್ಸಾಹದ ಫಲದಿಂದ ಇದು ಇಷ್ಟು ಜಾಗ್ರತೆಯಾಗಿ ಹೊರಬರುತ್ತಿದೆ. ಇದನ್ನು ಅತಿ ಶೀಘ್ರವಾಗಿ ಮತ್ತು ಇಷ್ಟೊಂದು ಅಂದವಾಗಿ ಮುದ್ರಿಸಿಕೊಟ್ಟವರು `ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್'ನ ಶ್ರೀಮಾನ್ ಜಿ.ಹೆಚ್. ರಾಮರಾಯರು. ಅವರನ್ನೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವಾದ ಎಲ್ಲರನ್ನೂ ಮತ್ತೊಮ್ಮೆ ಸ್ಮರಿಸಿಕೊಂಡು ಇದನ್ನು ಸಹೃದಯರ ಮುಂದೆ ಇಡುತ್ತಿದ್ದೇನೆ.

ಸರಸ್ವತಿಪುರಂ, ಮೈಸೂರು

೬-೮-೬೨

ಎಚ್. ತಿಪ್ಪೇರುದ್ರಸ್ವಾಮಿ