ಪುಟ:Kalyaand-asvaami.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಯದಲ್ಲಿ ಕ್ಷೋಭೆಯ ಕಿಡಿ "ಓ!" "ಆಮೇಲೆ ಏನಾಗ್ತೇತೆ ಹೇಳು?" ಗಿರಿಜಾ ಸಣ್ನನೆ ನಕ್ಕು ನುಡಿದಳು: "ರಾಜರು ನಿಮಗೆ ಸನ್ಮಾನ ಮಾಡ್ತಾರೆ." "ನನಗೊಬ್ಬನಿಗೆ ಅಲ್ವೇ. ನಮಗೆ ಅನ್ನು. ನಮ್ಮಿಬ್ಬರಿಗೂ." "ಹೂ೦." ಆದರೆ, ಆ ಸನ್ಮಾನಕ್ಕಿ೦ತಲೂ ಹಿರಿದಾದ ಆಸೆಯಿತ್ತು ಗಿರಿಜೆಗೆ. ಅವಳೆ೦ದಳು: "ಅದು ಮುಗಿಸ್ಕೊಂಡು ಇಲ್ಲಿಗೆ ಬಂದೋರು ಮುಂದೆ ಯಾವಾಗಲೂ ಇಲ್ಲೇ ಇರ್ತೀರಿ, ಅಲ್ವಾ ?" ಬಳಸಿದ ಬಾಹುವನ್ನು ಬಿಗಿಗೊಳಿಸುತ್ತಾ ಪುಟ್ಟಬಸವನೆಂದ: "ಇರ್ತೀನಿ ಚಿನ್ನಾ." ಗಿರಿಜವ್ವನಿಗೆ ಒಮ್ಮೆಲೆ ಉಸಿರುಕಟ್ಟಿದಂತಾಯಿತು. ಮೈಗೆ ನೋವಾಯಿತೆಂದು ಕಂಡರೂ ಪ್ರಿಯವಾಗಿದ್ದ ಅಪ್ಪುಗೆ, ಸುಧಾರಿಸಿಕೊಳ್ಳುತ್ತ ಆಕೆ ಅಂದಳು: "ಈಗೋದೋರು ಎಷ್ಟು ದಿವಸದೊಳಗೆ ಬರ್ತೀರಾ?" ದಿವಸಗಳೆ? ಶ್ರೀಮಂಗಲನಾಡಿನ ಗಿರಿಜಾ, ಕೊಡಗಿನ ವಿಸ್ತಾರವನ್ನು ತಿಳಿತಯುವಳಲ್ಲ. ಕನ್ನಡ ಜಿಲ್ಲೆ ಅದಕ್ಕಿಂತಲೂ ದೊಡ್ದದೆಂಬುದನ್ನೂ ಆಕೆ ಬಲ್ಲಳು. ಅಷ್ಟಿದ್ದೂ- "ಮಳೆಗಾಲದೊಳಗೇ ಎಲ್ಲಾ ಮುಗಿಸ್ಬೇಕೊಂತಿದೀವಿ ಗಿರಿಜಾ ಮಿಂಚಿನ ಹಾಗೆ ಅವರ ಮೇಲೆ ಬೀಳ್ಬೇಕು. ಕೂತೋರು ಎದ್ದು ನಿಲ್ಲೋದಕ್ಕೂ ಅವಕಾಶ ಕೊಡಬಾರ್ದ ." ಯುದ್ದಭೂಮಿಯ ಭಯ ಗಿರಿಜೆಗಿದ್ದೇ ಇತ್ತು. ಆದರೂ ಎಷ್ಟೋ ಯುದ್ದಗಳನ್ನು ಜಯಿಸಿಬಂದ ವೀರ ಆಕೆಯ ಗಂಡ. ಅವನೆದುರು ತನ್ನೊಳಗಿನ ಅಳುಕಿನ ಪ್ರಸ್ತಾಪ ಮಾಡುವುದು ಯೋಗ್ಯವಾಗಿರಲಿಲ್ಲ. ಆದರೂ ವ್ಯಕ್ತಪಡಿಸಲಾಗದ ಭಾವನೆಗಳ ಒತ್ತಡಕ್ಕೆ ಸಿಲುಕಿ ತನ್ನ ಗಂಡನಿಗೆ ಬಲವಾಗಿ ಆತುಕೊಂಡಳು ಗಿರಿಜಾ. ಎಲ್ಲರಿಗೂ ನಾಯಕನಾದ ಧೀರನಾದ ಸರ್ವಶಕ್ತನಾದ ಪತಿ. ರಾಜರ