ಪುಟ:Kalyaand-asvaami.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ ಬಳಿಕ ಆತನೇ ಮುಖ್ಯಸ್ಥ. ಅಂತಹ ಮುಖ್ಯಸ್ಥ ತನ್ನವನು; ತನ್ನ ಸೊತ್ತು- ತನ್ನೊಬ್ಬಳ ಸೊತ್ತು.

  ಶಾಖ ಏರಿದೆ ಮೈಯ ನರನಾಡಿಗಳು ಧಿಮಿಗುಟ್ಟುದುವು. ಗಹಗಹಿಸಿ

ನಗಬೇಕೆನಿಸಿತು ಆಕೆಗೆ. ಸಂತೋಷದಿಂದ ಅಳಬೇಕೆನಿಸಿತು. ಆತನನ್ನು ಅಗಲಿರುವುದು ಸುಳ್ಳುಮಾತು. ಆತ ಯಾವಾಗಲೂ ತನ್ನ ಬಳಿಯಲ್ಲೇ ಇರುವ-ತನ್ನಲ್ಲೇ,

    "ನನ್ನ ಚಿನ್ನಾ" ಎಂದ ಪುಟ್ಟಬಸವ.
    "ಮಳೆಗಾಲದ ವರೆಗೆ ಇರೋದಿಲ್ಲ ನೀವು," ಎಂದಳು ಗಿರಿಜಾ.
  ಯಾರದೋ ಎನ್ನುವಂತಹ ಸ್ವರ.
     ಆಕೆಯ ಬಿಸಿಯುಸಿರಿನ ಸ್ಪರ್ಶ ಆತನಿಗಾಯಿತು.
     ಗೊಗ್ಗರಧ್ವನಿಯಲ್ಲಿ ಪುಟ್ಟಬಸವನೆಂದ:
     "ಚಿನ್ನಾ!"