ಪುಟ:Kalyaand-asvaami.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆಳಗಿನ ಜಾವ ಹೊರಟು ನಿಂತ ರಾಮಗೌಡ-ಮಾಚಯ್ಯರಿಗೋಸ್ಕರ ಬುತ್ತಿಗಳು ಸಿದ್ಧವಾಗಿದ್ದುವು. ಸವಾರಿ ಮಾಡುವವರು ಬೇರೆ ಜನರೆಂದು ತಿಳಿದರೂ ಕುದುರೆಗಳು ಸನ್ನದ್ಧವಾದುವು. ಇಬ್ಬರದೇ ಪ್ರಯಾಣ ಎಂಬುದು ಸ್ಪಷ್ಟವಾದಾಗ ಆ ಕುದುರೆಗಳು, ಉಳಿದ ಎರಡರೊಡನೆ ಬೀಳ್ಕೊಡುಗೆಯ ಮಾತನಾಡಿದುವು.

ಮನುಷ್ಯರು ಸಹಜವಾಗಿ ಪ್ರಾಣಿಗಳನ್ನು ಮೀರಿಸಿದರು.

ಗಂಗವ್ವ ರಾಮಗೌಡನನ್ನು ಉದ್ದೇಶಿಸಿ ಹೇಳಿದಳು:

"ಅವಸರದಲ್ಲಿ ಬಂದು ಅವಸದಲ್ಲೆ ಹೊರಟಿದೀರಿ. ನಾಲ್ಕು ದಿವಸ ಇರಲಿಲ್ಲ ಮಾಡಲಿಲ್ಲ." ಗೌಡನೆಂದ:

"ಇನ್ನೊದ್ಸಲ ಪುರಸೊತ್ತು ಮಾಡ್ಕೊಂಡು ಬರ್ತೀನಿ ತಾಯಿ.ನೀವು ಕಟ್ಟಿಕೊಟ್ಟ ಬುತ್ತಿ ಮುಗಿದರೂ ನಿಮ್ಮ ನೆನಪಿನ ಬುತ್ತಿ ನಾನು ಸಾಯೋವರೆಗೂ ಇರ್ತದೆ.”

"ಶಿವ ನಿಮ್ಮನ್ನು ಚೆನಾಗಿಡಲಪ್ಪಾ.”

"ಈ ವಾರದಲ್ಲೆ ನಿಮ್ಮ ಮಗನನ್ನು ನಮ್ಮೂರಿಗೆ ಕಳಿಸ್ಕೊಡಿ ತಾಯಿ.'

"ನನ್ಕೈಲೇನಪ್ಪಾ ಇದೆ? ನಾನೇನು ಹೊಟ್ಟೆಯೊಳಗೆ ಬಚ್ಚಿಟ್ಕೊಳ್ಳೋ ಕಾಗ್ತದ ಮಗನನ್ನ? ಹೊರಟ ಅಂದರೆ ಹೊರಟ್ನೇ!”

ಮಾಚಯ್ಯನೂ ಹೇಳಿದ:"

ಓಗ್ಬರ್ತೀನಿ ತಾಯಿ.”

"ಆಗಲಪ್ಪಾ..”

ಗಿರಿಜಾ ಹಿಂಬದಿಯಲ್ಲಿ ನೆರಳಿನ ಮರೆಯಲ್ಲೇ ನಿಂತಳು. ಆಕೆಯ ದೃಷ್ಟಿಯಲ್ಲಿ ಮಾಚಯ್ಯ ರಾಮಗೌಡರು ಬರಿಯ ಪರಿಚಿತರಲ್ಲ, ಸ್ನೇಹಿತರಲ್ಲ. ಗೌಡನಂತೂ ದಂಡನಾಯಕ. ನಾಳೆಯ ದಿನ ತನ್ನ ಪತಿದೇವನ ಜತೆ ಭುಜಕ್ಕೆ ಭುಜ ಕೊಟ್ಟ ಕಾದುವ ವೀರ.

ಗಿರಿಜೆ ಆ ಇಬ್ಬರನ್ನೂ ನೋಡಿದಳು. ಕಳುಹಿಕೊಡಲೆಂದು ನಿ೦ತಿದ್ದ