ಪುಟ:Kalyaand-asvaami.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸಾಮಿ

"ಹಾದೀಲಿ ತಣ್ಣೀರು ಕುಡಿಬೇಡಿ”

“ ಇಲ್ಲ”

"ನೆಗಡಿ ಜ್ವರ ಆದರೆ ನೋಡ್ಕೋಳ್ಳೋರು ಯಾರು ?'

"ಹೆದರ ಬೇಡ್ವೆ, ಕಾಹಿಲೆ ಬರಿಸ್ಕೊಳ್ಳೋಕೆ ಪುರುಸೊತ್ತೆಲ್ಲಿರುತ್ತೆ ನಂಗೆ ?

"ನೀವೊಬ್ಬರು."

ಮಾತು ಕರಗಿ ಮೌನದ ದ್ರವವಾಯಿತು. ಅದ್ರವ ಅರಿ ನಿದ್ದೆಯ ಉಗಿಯಾಯಿತು..

ಪುಟ್ಟಬಸವನ ಶಾಸೋಚ್ಚಾವ್ಸ ಒಂದೇ ಸಮನಾದೋಡನೆ ಮಲಗಿದ್ದ ಗಂಡನ ಮಗುಮುಖದ ರೂಪು ರೇಖೆ ಅತನಿಗೆ ನಿದ್ದೆ ಬಂತೆಂದು ಊಹಿಸಿ, ಗಿರಿಜಾ ಮೆಲ್ಲನೆ ಕಣ್ಣು ತೆರೆದಳು.

ಮಲಗಿದ್ದ ಗಂಡನ ಮಗುಮುಖದ ರೊಪು ರೇಖೆಗಳನ್ನು ಅ ಕತ್ತಲೆಯಲೋ ಅಕೆ ಎವೆ ಇಕ್ಕದೆ ನೋಡಿದಳು.

ಇದ್ದೊ ಇಲ್ಲದಂತೆ ಮೇಲಕ್ಕೆ ಏರಿ ಗಾಳಿಯೊಡನೆ ಬೆರೆತಿತ್ತು ನಿದ್ದೆಯ ಉಗಿ.

ಗಟ್ಟಯಾಗಿ ಒಮ್ಮೆ ಉಸಿರು ಬಿಟ್ಟು ಪುಟ್ಟಬಸವ ಕಣ್ಣೆರೆದು ನೋಡಿದ.

"ನಿದ್ದೆ ಬಂದಿಲ್ವಾ ಗಿರಿಜಾ?"

"ಇಲ್ಲ..."

"ಎಷ್ಟು ಹೊತ್ತಾಯ್ತೊ?"

"ಇನ್ನೇನು ಮೊದಲ ಕೋಳಿ ಕೊಗೋ ಸಮಯ"

"ಹೌದಾ"?

"ಹೊಂ"

ಒಳಗಿನಿಂದ ಗಂಗವ್ವನ ಸ್ವರ ಕೇಳಿಸಿತು:

“గిరిజా, ಏಳು ಮಗೊ. ಬಿಸಿಯಾಗಿ ಏರಡೆರಡು ರೊಟ್ಟಿ ತಟ್ಟನ,” .ಉಪಾಹಾರ ಮುಗಿಸಿ, ಉಡುಪು ಧರಿಸಿ ಖಡ್ಡಗಳನ್ನು ಸೊಂಟಕ್ಕೆ ಬಿಗಿದು, ಬಂದೊಕಗಳನ್ನು ಭುಜಕ್ಕೇರಿಸಿ, ಪುಟ್ಟಬಸವನೂ ಸಂಗಡಿಗರೊ ಹೊರಟ್ಟು ನಿಂತರು. ಹುಲ್ಲು ನೀರು ಇನ್ನು ಬೇಡವೆಂದು ಕುದುರೆಗಳು ತಮ್ಮ ಸಿದ್ಧತೆಯನ್ನೂ ಸೊಚಿಸಿದುವು.


ಗಿರಿಜಾ, ಸೆರಗನ್ನು ನಡುವಿಗೆ ಬಿಗಿದು ಕಂಚಿನ ತಟ್ಟೆಯಲ್ಲಿ ಅರತಿ ತಂದಳು. ಅರುಣೋದಯದ ಹೊಂಬಣ್ಣ ದೊಡನೆ ಬತ್ತಿಯ ಬೆಳಕು