ಪುಟ:Kalyaand-asvaami.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡು ದಿನಗಳ ಎಡೆಬಿಡದ ಪ್ರಯಾಣದಿಂದ ಕುದುರೆಗಳು ಬಳಲಿ ದ್ದುವು.

"ಇವತ್ತು ರಾತ್ರೆ ವತ್ತಿ ఎల్లి ಸೋಮಯ್ಯನವರೆ"? ಎಂದು ಕಲ್ಯಾಣ ಸ್ವಾಮಿ ಕೇಳಿದ.

ఆ ಹಾದಿಯಾಗಿ ಹಿಂದೊಮ್ಮೆ ಬಂದಿದ್ದ ಸೋಮಯ್ಯನೆಂದ;

"ಸುಳ್ಯದಲ್ಲೇ!”

“ಹತ್ತಿರ ಬಂದೆವೇನು ಹಾಗಾದರೆ?”

  • ಓಹೋ. ಇನ್ನು ಮೂರೇ ಹರದಾರಿ ಹಾದಿ.”

ಸೋಮಯ್ಯನ ಆ ಮಾತು ಕೇಳಿ ಉಳಿದವರಿಗೆಲ್ಲ ಸಂತೋಷವಾ ಯಿತು. ತಮಗೂ ಅದು ಅರ್ಥವಾಯಿತೆನ್ನುವಂತೆ ಕುದುರೆಗಳೂ ಉತ್ಸಾಹ ತೋರಿದುವು.

ಸೂರ್ಯನಾಗಲೆ ಪಡುವಣಕ್ಕೆ ಇಳಿದಿದ್ದ, ಮಾರ್ಗ ಕ್ರಮಿಸಿದಂತೆ ಹಾದಿಯೂ ಅಗಲವಾಯಿಯತು. ಬಿಸಿಲೆಘಾಟಯ ದಾರಿಯಾಗಿಯೆ ಅವರು ಬಂದುದು. ಒಂದೆರಡು ಕಡೆ ಉಪಾಹಾರಕ್ಕೋಸ್ಕ ನಿಂತುದು ಎಷ್ಟೋ ಅಷ್ಟೆ.

ಉಳಿದ ಊರುಗಳನ್ನೆಲ್ಲ, ಯಾರ ದೃಷ್ಟಿಗೂ ಬೀಳಬಾರದೆಂದು, ಅವರು ಬಳಸಿಯೇ ಬಂದಿದ್ದರು.

ಎತ್ತರತಗಾದ ಹಾದಿ. ಕೆಮ್ಮಣ್ಣ. ಕುಯಿಲು ಮುಗಿದು బరి ದಾಗಿ ಒಣಗಿದ್ದ ಹೊಲಗಳು.

ಕಾಡು, ನಡು ನಡುವೆ, ಬೆಂಕಿ ಬಿದ್ದು ಮುಳಿ' ಹುಲ್ಲೆಲ್ಲ ಸುಟ್ಟುಹೋಗಿದ್ದ ಬೋಳು ಗುಡ್ಡಗಳು, ಒಮ್ಮೊಮ್ಮೆ ಕಾಲ್ಲು ಹಾದಿಗೆ ಸಮೀಪವಾಗಿಯೆ ಹರಿಯುತಿದ್ದ ನೀರು...

ಮುಂದು ಮುಂದಕ್ಕೆ ಸಾಗಿದಂತೆ ಹಾದಿ ನುಣ್ಣ ಗಾಗುತ್ತ ಬಂತು. ಜನ ಹೆಚ್ಚು ಹೆಚ್ಚಾಗಿ ಓಡಾಡುವ ದಾರಿ ಅದೆಂಬುದಕ್ಕೆ ಸಾಕ್ಷ್ಯ.

ಸಾರ್ಯ ಪಶ್ಚಿಮದಲ್ಲಿ ಅದೆಲ್ಲಿ ಮರೆಯಾದನೋ, ಮಳೆ ಮೋಡಗಳು ಒಮ್ಮಿಂದೊ ಮೈಲೆ ಮುಸುಕಿದ ಹಾಗೆ ಕತ್ತಲು ಕವಿಯತೊಡಗಿತು.

  • ಕತ್ತಲಾಗ್ಸಾ ಬಂತಲ್ಲಾ,” ಎಂದು ನಂಜಯ್ಯ."