ಪುಟ:Kalyaand-asvaami.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಗಲೆ ಬಯಲಾಗಿಬಿಟ್ಟಿತ್ತು. ಅದರ ಸುಳಿವು ಸಿಕ್ಕಿದ ರಾಮಪ್ಪಯ್ಯ ಓಲೆ ಕಾರರನ್ನು ಮಂಗಳೂರಿಗೂ ಮಡಿಕೇರಿಗೂ ಅಟ್ಟಿದ್ಬ . ಆದರೆ ಅಣ್ಣೆಗೌಡನ ಸಾಹಸದಿಂದ ಇಬ್ಬರು ಓಲೆಕಾರರೂ ರಾಮಗೌಡನ ಜನರ ಕೈಗೆ ಬಿದ್ದರು. ಅದನ್ನು ತಿಳಿದು ಕಿಡಿಕಿಡಿಯಾದ ರಾಮಪ್ಪಯ್ಯ, ಕುದುರೆ ಏರಿ ಸುಳ್ಯಕ್ಕೆ ಬಂದು ಹೂಂಕರಿಸಿ ಗರ್ಜಿಸಿದ. ತನಗಿದಿರು, ಇಲ್ಲವೆ ಕುಂಸಣಿ ಸರಕಾರ ಕ್ಕಿದಿರು, ಯಾವನಾದರೂ ಉಸಿರೆತ್ತಿದರೆ ಅಲ್ಲೇ ಕತ್ತರಿಸಿ ನರಿನಾಯಿಗಳಿಗೆ ಎಸೆಯುವುದಾಗಿ ಬೆದರಿಸಿದ. ರಾಮಗೌಡನ ಮನೆಗೆ ಬರಲಿಲ್ಲನಾದರೂ ದೂರದಲ್ಲಿ ನಿಂತು 'ಮದುವೆಗೋಸ್ಕರ' ಸಿದ್ಧನಾಗುತಿದ್ದ ಚಪ್ಪರವನ್ನು ನೋಡಿದ. ಯೋಜನೆ ಮೂರ್ತಸ್ವರೂಸಕ್ಕೆ ಬರುವುದಕ್ಕೆ ಮುಂಚೆಯೇ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದೆಂದು , ರಾಮಗೌಡ ಆತನನ್ನು ಕೆಣಕಲಿಲ್ಲ . ಅಣ್ಣೆಗೌಡನೂ ಇದರು ಬರಲಿಲ್ಲ . ರಾಮಪ್ಪಯ್ಯ ಯಾವುದೊಂದೂ ಸ್ಪಷ್ಟವಾಗದೆ , ಗೊಂದಲಕ್ಕೀಡಾಗಿಯೆ, ಅಟ್ಲೂರಿಗೆ ಹಿಂತಿರುಗಿದ. ಆದರೆ ಆತ ಸುಮ್ಮನಿರದೆ , ಮಂಗಳೂರಿನ ಕಲೆಕ್ಟರ್ ದೊರೆಗೆ ಮತ್ತೊಮ್ಮೆ ಎಚ್ಚರಿಕೆಯ ಸುದ್ದಿ ಕಳುಹಿದನೆಂದು ಭಾನಿಸಲು ಆಧಾರಗಳಿದ್ದವು . ಅದೆಲ್ಲವನ್ನೂ ಕೇಳಿ , ಅಣ್ಣೆಗೌಡನ ಕೆಲ ಮಾತುಗಳಿಗೂ ಕಿವಿಗೊಟ್ಟು , ಕಲ್ಯಾಣಸ್ವಾಮಿ ನುಡಿದ: ' ಇದು ದೊಡ್ಡ ವಿಷಯವಲ್ಲ, ರಾಮಗೌಡರೆ . ಯುಗಾದಿಗಿಂತ ಮುಂಚೆಯೇ ನಾವು ಕಣಕ್ಕಿಳಿಯಬೇಕು ಅನ್ನೋದು ದೈವೇಚ್ಛೆಯಾದರೆ ಹಾಗೇ ಆಗಲಿ.' ' ಶುಭಸ್ಯ ಶೀಘ್ರಂ- ಅಂತಲೋ ಏನೋ ಹೇಳ್ತಾರಲ್ಲ ಹಾಗಾಯ್ತು." "ನಮ್ಮ ತಯಾರಿ ಪೂರ್ಣವಾಗಿದೆಯೇನು?" "ಆಗಿದೆ" "ಒಳ್ಳೇದು," ಎನ್ನುತ್ತ , ನಂಜಯ್ಯನೆಡೆಗೂ ಇತರ ಆಸ್ತರ ಕಡೆಗೂ ನೋಡಿ ಕಲ್ಯಾಣಸ್ವಾಮೆ ಕೀಳಿದ: "ಏನು ಹೇಳ್ತೀರಿ ?" "ತಡಮಾಡದೆ ದಂಡಯಾತ್ರೆ ಹೊರಡ್ಬೇಕೂಂತ ಗೌಡರ ಅಭಿಪ್ರಾಯವೊ?" ಎಂದು ಪ್ರಶ್ನಿಸಿದ ನಂಜಯ್ಯ.