ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮದುವೆಯ ಚಪ್ಪರ ಸೈನ್ಯದ ಶಿಬಿರವಾಗಿ ಮಾರ್ಪಟ್ಟಿತ್ತು. ಹೊರಗೆ ಹಾರಾಡುತ್ತಿದ್ದ ಬಾವುಟ, ಉರಿಯುತ್ತಿದ್ದ ಪಂಜು; ಸುತ್ತಲೂ ಸಶಸ್ತ್ರ ಕಾವಲುಗಾರರು. ಕೋಳಿಯ ಮೊದಲ ಕೂಗಿನೊಡನೆ 'ಕೋ೦ಬು' ಮೊಳಗಿತು. ಮಲಗಿದ್ದವರು ಎದ್ದರು. ಮನೆಗಳಿಗೆ ಹೋಗಿದ್ದವರು ಎದು బంದರು. ಮುಖನೂರ್ಜನಾದಿ ಪ್ರಾತವ್ರಿಧಿಗಳಾದುವು. ದೀಪದ ಬೆಳಕಿನಲ್ಲಿ, ಚಿಂತಾಕ್ರಾಂತವಾಗಿದ್ದ ರಮಗೌಡ ಮುಖವನ್ನು ದಿಟ್ಟಿಸಿ ಕೆಳಿದ: "ಗೌಡರೆ ಏನು ವಿಷಯ?” ಉತ್ತರ ತಡವಾಗಲಿಲ್ಲ.

"ನನ್ನ ಮಗನೂ ನಮ್ಮ ಜತೆಯಲ್ಲೆ ಬರ್ರತಾನ೦ತೆ, ಸ್ವಾಮಿಯವರೆ.”
"ಯಾರು? ಮದುವೆಯ ಗಂಡು?”
"ಅವನೇ!"
" ನಿಮಗಿಷ್ಟ ఇల్లವೋ ?”
"ನನಗಿದೆ! ಆದರೆ ಅವನ ಅಜ್ಜಿ ಮತ್ತು ತಾಯಿ---"
"ಸರಿ, ಸರಿ! ನಿನ್ನೆಯೇ ಒ೦ದು ಮಾತ್ತು ಹೇಳಲು ಮರೆತೆ, ఎల్లి, ನಿಮ್ಮ ಚಿರಂಜೀವನನ್ನು ಕರೀರಿ." -
ಹದಿನಾರು ಹದಿನೇಳರ ಕೃಷ್ಣಗೌಡ, ಕಲ್ಯಾಣಸಾಮಿಯ ಎದುರು బంದು ನಿ೦ತು, 

ವಿನಯದಿ೦ದ ನಮಿಸಿದ, ತ೦ದೆಯ ಅಚ್ಚಿನಲ್ಲೇ ಎರಕ ಹೊಯ್ದಿದ್ದ ఎಳೆಯ ಜೀವ, ఆ ಸಿ೦ಹದ ಮರಿಯೇ.” ಕಲ್ಯಾಣಸ್ವಾಮಿ ನಸುನಕ್ಕು ನುಡಿದ:

" ತಮಾ, ನಿನ್ನ ಮನಸಿನ ಬಯಕೆ ತಿಳಿದು ಸಂತೋಷವಾಯ್ತು.”

ಕೃಷ್ಣಗೌಡನ ಮುಖವರಳಿತು. ಕೃತಜ್ಞತೆ ಸೂಚಿಸಲೆಂದು ತುಟಿ ಗಳು ಅಲುಗಿದುವು. ಅಷ್ಟರಲ್ಲೆ, ಬೆರಳೆತ್ತಿ ಮೌನವಾಗಿರಲು ಸೂಚಿಸುತ್ತ ಕಲ್ಯಾಣಸ್ವಾಮಿಯೇ೦ದ :

" ಆದರೆ ನಮ್ಮ ಸೈನ್ಯದ ನಿಯಮದ ಪ್ರಕಾರ ಆದಕ್ಕೆ ಅವಕಾಶವಿಲ್ಲ.