ಪುಟ:Kalyaand-asvaami.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಸೈನ್ಯ ಚಲಿಸಲಿ!"

ಜಯಕಾರ ಹರ್ಷೋದ್ವಾರಗಳಾದುವು, ಕಂಬನಿಯ ಒತ್ತಡವನ್ನೂ ಲೆಕ್ಕಿಸದೆ ಹೆಂಗಸರು ಮಕ್ಕಳು ಮುದುಕರು ಆ ಘೋಷಗಳೊಡನೆ ತಾವೂ ಧ್ವನಿಗೂಡಿಸಿದರು.

ಸೈನ್ಯದ ಸಾಲಿನ ಕೊನೆಯಲ್ಲಿದ್ದ ಕುಡಿಯ ಸೋದರರು ಅಕಾಶದ ಕಡೆಗೆ ಏಕಕಾಲದಲ್ಲೆ ಗುಂಡು ಹಾರಿಸಿದರು.

ಸ್ವಾತಂತ್ರಸೇನೆ ಮುಂದಕ್ಕೆ ಹೆಜ್ಜೆ ಇಟ್ಟಿತು.