ಪುಟ:Kalyaand-asvaami.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾತ್ರ೦ತ್ಯ ದೀವಟಗೆ ಸರಿ-ಎಂದು ಹಲವರು ಯೋಚಿಸಿದರು. ಕೆಟ್ಟವನೂ ವಿದೇಶಿಯನ್ನು ಆದ ಬಿಳಿಯನನ್ನು ಸೋಲಿಸಿ ಹೊಡೆದೊಡಿಸುವುದು, ಮನುಷ್ಯನಾದವನು ಸಾಹಸಕಾರ್ಯವಾಗಿ ಅವರಿಗೆ ತೊರುತಿತು , ಮುಸಲಾ ನರಂತೂ జిడియు ದಂಡನ್ನು ಮುಸಲ್ಮಾನರ೦ತೂ ಹೆಗ್ಗಡೆಯ ದ೦ಡವನ್ನು ಹಿ೦ಜರಿಯಲ್ಲಿల్ల. ವಿರಪುಟ್ಟ ವಿನ ಮರಣಕ್ಕೆ ಕಾರಣರಾಗಿದ್ದ ಇಂಗ್ಲಿಷರ ವಿಷಯದಲ್ಲಿ ಸಹಾನುಭೂತಿಯೇ ಇರಲಿಲ್ಲ ಅವರಿಗೆ ಅಲ್ಲದೆ, ಕಲ್ಯಾಣಸಾಮಿಯ ಸೇನೆಯಲ್ಲ ಎಷ್ಟೋ ಜನ ಮಹಮ್ಮದೀಯರಿರುವರೆಂದು ದೂತ ತಂದಿದ್ದ ವರ್ತೆ, అವರ ನಿರ್ಧರವನ್ನು, ದೃಢಪಡಿಸಿತು. ಸುಬ್ರಾಯ ಹೆಗ್ಗಡೆಯ ಸುತ್ತಲೂ ನೆರೆದ ಎಲ್ಲರಲ್ಲಾ ಆಯುಧಗಳಿರ లీల్ల, “ ಪರವಾ ಇಲ್ಲ, ಮಂಗಳೂರಲ್ಲಿ ಕೊಡಿಸ್ತೆನೆ,” ಎಂದ ಹೆಗ್ಗಡೆ. ಕುದುರೆಗಳ೦ತು ಮೂರೆ ಇದ್ದುವು. "ನದಿ ದಾಟ್ಟುವಾಗ ಕುದುರೆಗಳಿದ್ದರೆ ತೊಂದರೆಯೇ, ಕುದುರೆ ಬೇಕಾದವರಿಗೆಲ್ಲ ಮಂಗಳೂರಲ್ಲಿ ಕೊಡಿಸ್ತೇನೆ, ಎಂದೂ ಆತ ಆಶ್ವಾಸನೆ నిಡಿದ, ಕುಲ ದೈವವನ್ನು ಪ್ರಾರ್ಥಿಸಿ, ಹಿರಿಯರನ್ನು ನಮಿಸಿ, ಹೆಗ್ಗಡೆಕಾಲ್ನಡಿ ಗೆಯಲ್ಲೆ ಹೊರಬಿದ್ದ. ಆ ದಳಪತಿಯನ್ನು ಉಳಿದವರು ಹಿಂಬಾಲಿಸಿದರು. ಯಾರೂ ಮೀರಿಸುವುದು ಸಾಧ್ಯವಿಲ್ಲದಂತಹ ಮಾತುಗಾರ ಹೆಗ್ಗಡೆ. ಆತ ಕಾಣದ ಊರಿಲ್ಲ, ನೋಡದ ದೇಶವಿಲ್ಲ, ತಿಳಿಯದ ಜನರಿಲ್ಲ. “ ಹಿ೦ದೆ ಒ೦ದು ಸಾರಿ ನಾವು ಕೊಡಗಿಗೆ ಹೋಗಿದ್ದಾಗ ನಮಗೆ ಈ ಕಲ್ಯಾಣಸಾಮಿಯವರ ಪರಿಚಯವಾಯ್ತು, ಬಹಳ ದೊಡ್ಡ ಮನುಷ್ಯ; ಸಮುದ್ರವಿದ್ದ ಹಾಗೆ. ಅವರದು, ರಾಜಮನೆತನಕ್ಕೆ ಸ೦ಬ೦ಸಿದ್ದ ದೊಡ್ಡ ಶ್ರಿಮ೦ತ ಕುಟು೦బ. ఆ ದ್ರ್ಪವೆನು ! ವೈಖರಿಯೇನು !” ಕಲ್ಯಾಣ ಸ್ವಾಮಿಯನ್ನು ನೋಡಲು ತಾನು ಹೋದಾಗ ಹೆಗ್ಗಡೆ ಈ: ವಿಷಯ ತನಗೆ ಹೇಳಿಯೇ ಇರಲಿಲ್ಲವಲ್ಲಿ - ಎಂದು ದೂತನಿಗೆ ಆಶ್ಚರ್ಯ ವೆನಿಸಿತು. ಆದರೆ ಕಲ್ಯಾಣಸ್ವಾಮಿಯೇನೂ 'ಹೆಗ್ಗಡೆ ತನಗೆ ಅಪರಿಚಿತ,' ಎಂದಿರಲಿಲ್ಲ. ಸರಿ. ಇವರಿಬ್ಬರು ಸ್ನೇಹಿತರಿದ್ದರೂ ಇರಬಹುದು' ಎಂದು ಸ್ವತಃ దానితేనే సోంబకేగిడ్గిది.