ದೊಡ್ಡ ತಂಡವೇ ಅಡುಗೆಗೆ ಬಡಿಸಿತು.
ತನ್ನ ಹಿಂಬಾಲಕರನ್ನುದ್ದೇಶಿಸಿ ಹೆಗ್ಗಡೆ ಹೇಳಿದ:
" ಚೆನ್ನಾಗಿ ತಿನ್ನಿ! ದಾಕ್ಷಿಣ್ಯ ಮಾಡ್ಬೇಡಿ !”
ಸ್ವತಃ ತಾನು, ಇಬ್ಬರು ಭಟತೊಡನೆ ಶಾನುಭಾಗನ ಮನೆಗೆ ಹೋಗಿ ಅಲ್ಲಿಯೇ ಊಟಮಾಡಿದ.
ಊರ ವರ್ತಕರ ಪರವಾಗಿ ಅಲ್ಲಿಯೇ ಕಾಣಿಕೆ ಸ್ವೀಕರಿಸಿದ: ಬೆಳ್ಳಿಯ ತಟ್ಟೆಯಲ್ಲಿದ್ದ ಒಂದು ಸಾವಿರ ವರಹ, ಬೆಲೆಬಾಳುವ ಕಲ್ಲುಗಳು, ಪಟ್ಟೆ ಪೀತಾಂಬರಗಳು, ಹೆಗ್ಗಡೆ ಸಂತೋಷವನ್ನೂ ವ್ಯಕ್ತಪಡಿಸಲಿಲ್ಲ;
ಬೇಸರವನ್ನೂ ತೋರಿಸಿಕೊಳ್ಳಲಿಲ್ಲ.
ಆ ಇಬ್ಬರು ಭಟರಲ್ಲಿ ಅತ್ಯಂತ ಆಪ್ತನಾದ ಒಬ್ಬನೊಡನೆ, ಆ ರಾತ್ರೆಯೆ ಮಂಜೇಶ್ವರದ ಕಾಣಿಕೆಯನ್ನು ತೆಂಕುಂಬಳೆಯ ತನ್ನ ಮನೆಗೆ ಅತ ಕಳುಹಿದ.
ಬೆಳಗ್ಗೆ ಎಲ್ಲರೊ ಎದ್ದರು. ಕತ್ತಲಾಗುವ ಹೊತ್ತಿಗೆ ಉಳ್ಳಾಲ ಸೇರಿದರಾಯಿತೆಂದು ಬಿಸಿಲೇರಿದ ಮೇಲೆಯೆ ಅವರು ಹೊರಟರು.
ಉತ್ತರಾಭಿಮುಖವಾಗಿ ಕರಾವಳಿಯುದ್ದಕ್ಕೂ ಮಾರ್ಗ, ಅನು ಕೂಲವಾಗಿದ್ದೋಂದು ಕಡೆ ಸಮುದ್ರಸ್ಥಾನ. ತೆಂಗಿನ ತೋಟಗಳ ಸೂರೆ ಎಳನೀರಿಗಾಗಿ.
ಅವರು ಪುಂಡಾಟಕೆಯವರೆಂದೇ ಬಗೆದರು, ಜನ. ಆ ತಂಡ ಬರು ತಿದ್ದಂತೆಯ ರಕ್ಷಣೆಗೆಂದು ದೊರದೊರ ಓಡಿದರು.
ಉಳ್ಳಾಲ ಬಂತು.
ಅದರಾಚೆಗೆ ಸ್ವಲ್ಪ ದೂರದ ಹಾದಿ. ಬಳಿಕ ವಿಸ್ತಾರವಾದ ನತಾವತಿ ನದಿ, ನದಿ ದಾಟಿದ ಮೇಲೆ ಮಂಗಳೂರು.....
ಸುತ್ತಮುತ್ತಲಿದ್ದವರೊಡನೆ ಹೆಗ್ಗಡೆ ಹೇಳಿದ:
- ಕಲ್ಯಾಣಸಾಮಿಯ ಸೈನ್ಯ ಇವತ್ತು ಬಂಟವಾಳದಿಂದ ಹೊರಟರ ಬಹುದು. ನಾಳೆ ಅವರೆಲ್ಲ ಮಂಗಳೂರು ಸೇರಾರೆ.
ನಾವೂ ಅಷ್ಟು ಹೊತ್ತಿಗೆ...”