ಪುಟ:Kalyaand-asvaami.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಡಲು ಸೇರುವ ನದಿಯ೦ತೆ ನಿಧಾನವಾಯಿತು ಸೇನೆಯ ಮುನ್ನಡೆ.ಹಾದಿಯೂ ಅಗಲವಾಗಿತ್ತು, ಎತ್ತಿನ ಬ೦ಡಿ ಹೋಗುವಷ್ಟು. ದಟ್ಟವಾ ಗಿದ್ದ ಸೈನಿಕ ಸ೦ದಣಿ ತಮ್ಮ ಸಾಮರ್ಥ್ಯದ ವಿಷಯದಲ್ಲಿ ಆಚಲ ವಿಶ್ವಾಸ ವಿದ್ದ ಮುಖ ಮುದ್ರೆಗಳು.


ಹೀಗೆ ಸೇನೆ ಮು೦ದೆ ಸಾಗಿದ್ದರೂ ಕಲ್ಯಾಣಸಾಮಿಗೆ, ದಂಡನಾಯು ಕರಿಗೆ, ಬ೦ಗರಾಜ-ಆಣಿ ಗೌಡರಿಗೆ, ದಳಪತಿಗಳಾಗಿದ್ದ ಕುಡಿಯ ಸೋದರರಿಗೆ ಒಳಗಿ೦ದೊಳಗೆ ಕಾತರವಿದ್ದೇ ಇತ್ತು. ದೊಡ್ಡ ಪ್ರಮಾಣದಲ್ಲಿ ఇంగిಷರದoಡು ಅಲ್ಲಿಲ್ಲವೆ೦ದೇನೋ ಬ೦ಗಾರಜ ತಿಳಿಸಿದ್ದ.ಆದರೆ ಫಿರ೦ಗಿಗಳು ಮದ್ದು ಗು೦ಡುಗಳು? ತಂತ್ರದ ಸಮರದಲ್ಲಿ ನಿಷ್ಣಾತರಾದ ఆ೦ಗ್ಲರು, ಎಂತಹ ವ್ಯೂಹ ರಚನೆಯನ್ನು ಮಾಡಿರುವರೊ? ಯಾವ ಸಂದುಗೊಂದಿಗಳಲ್ಲಿ?


ಆದರೆ, ಆ ಕಾತರದೊಡನೆಯೆ ಹೆಣೆದುಕೊಂಡಿತ್ತು, ಗುರಿ ಸೇರುವ ತವಕ, ಅವರನ್ನು ಕಾಡುತಿತ್ತು, ಆಗದ ಅನುಭವವನ್ನು ಜೀಗನೆ ಪಡೆಯುವ ಹ೦ಬಲ.


ಬೆಳಗಿನ ಹೊತ್ತು ಮಂಗಳೂರು ಸೇರುವುದೇ ಸರಿಯೆಂದು, ಊರು ಹರದಾರಿ ದೂರವಿದ್ದಾಗಲೆ ದಂಡು ತಂಗಿತು. ಸುಖಭೋಜನವಿರಲಿಲ್ಲ; ಸುಖನಿದ್ದೆಯೂ ಇರಲಿಲ್ಲ. ಅನಿರೀಕ್ಷಿತವಾಗಿ ಧಾಳಿ ಸಂಭವಿಸಬಹುದೆಂದು ಅರ್ಧಕ್ಕರ್ಧ ಪಡೆ ಜಾಗೃತವಾಗಿಯೇ ಇತ್ತು.ಒಬ್ಬ ನಿದ್ದೆ ಹೋದಾಗ ಇನ್ನೊಬ್ಬನಿಗೆ ಎಚ್ಚರ ತಿಂಗಳ ಬೆಳಕು ಮುಗಿದ ಬಳಿಕ, ಕತ್ತಲೆಯನ್ನೂ ಇರಿದು ಕಾಣುವ ಯತ್ನ.


ನಡುವಿರುಳಿನ ಹೊತ್ತಿಗೆ ಮಂಗಳೂರಿನಿಂದ ಬೇಹುಗಾರ ತನಿಯಪ್ಪ ಬಂದ. ಆತ ಹೇಳಿದುದನ್ನೆಲ್ಲ ಕೇಳಿದ ಅನಂತರವೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯಿತು.


ಇಂಗ್ಲಿಷರ ಸೈನ್ಯದ ಚಲನವಲನವೇ ಮಂಗಳೂರಲ್ಲಿ ಇಲ್ಲವೆಂದರೆ? ರಕ್ಷಣೆಯ ಯಾವ ಸನಾಹವೂ ನಡೆಯುತ್ತಿಲ್ಲವೆಂದರೆ?ś