ಪುಟ:Kalyaand-asvaami.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾತಂತ್ರ ದೀವಟಿಗೆ గిల --

" ಹೊಳೆಯಲ್ಲಿ ನಿಂತು ಅಡ್ಡಬೀಳ್ತಾನಂತೆ !” ఎంದು ಸೈನಿಕನೊಬ್ಬ ನಕ್ಕ,

ಆ ಮಾತು ಕೇಳಿಸದವನಂತೆ ಹೆಗ್ಗಡೆಯೆಂದ;

  • ನಾನು ಯಾರು ತಿಳೀತೊ?”

... ఇల్ల,”

-- ಒಳ್ಳೆದು. ನಮಗೆ ಈ ಕೊಡಲೆ ಮಂಗಳೊರಿಗೆ ಹೋಗ್ವೇಕಾಗಿದೆ.

ಸರಕಾರದ ಹತ್ತಿರ ಜರೂರು ಕೆಲಸವಿದೆ.”

ఆ ಮುಖಂಡ ನುಣ್ಣಗೆ ಮಾಡಿದ್ದ ತಲೆಯನ್ನು ಸವರಿಕೊಂಡು.

ಅದನ್ನು ನೋಡಿ ಹೆಗ್ಗೆಡೆಯೆಂದ;

"ಯಾಕಪ್ಪಾ? ಮೊದಿನ ಹೇಳ್ಲಲ್ವೆ?"

“ ಹೇಳಿದ. ಅದರೆ, ಅಮೇಲೆ?"

  • ಎನು ಹೇಳಿದ? ಎನು ಅಮೇಲೆ?”

"ನಾಲ್ಕು ದೋಣಿಗೊ ಸೇರಿ ನೊರು ವರಹ ಕೊಡ್ತೇರಂತೆ."

"ನಾಲ್ಕು ದೋಣಿಗೂ ಸೇರಿ ನೂರು ವರಹ ಕೊಡ್ರೀರಂತೆ.”

  • ನೋಡಿದೆಯಾ? ಹೌದೇನೋ ಮೊದಿನೆ?"

"ಮೊದಿನ ಎಲ್ಲೋ ಮುಖ ಮರೆಸಿದ್ದ".

“ಬಾಕೀದು ಒಳಗೆ ಹಾಕ್ಬೇಕೊಂತ ಮಾಡಿದನೋ ಎನೋ!ಹುಂ!ನಾವು ಯಾರು ತಿಳೀತೋ? ತೆಂಕುಂಬಳೆಯ ರಾಜರು – ಸುಬ್ರಾಯ ಹೆಗ್ಗೆ! ಒಬ್ಬೊಬ್ಬರಿಗೆ ಒಂದೊಂದು ಸಾವಿರ ವರಹ ಕೊಡ್ರೇವೆ!”

ಕ್ಷೀಣವಾದ ಸ್ವರದಲ್ಲಿ ఆంಬಿಗ ಹೇಳಿದ;

' ಅಗಲಿ ಒಡೆಯ., ಎಷ್ಟು ಜನ ದಾಟ್ತಾರೆ?”

  • ಎಲ್ಲರೂ!”

"ಒಂದೇ ಸಲ ಅಗೋದಿಲ್ವಲ್ಲಾ"

  • ಅರೇ! ಎರಡು ಸಲ ದಾಟ್ಟಿಯಾ, ಮೂರು ಸಲ ದಾಟ್ಟು!”
  • ಅಪ್ಪಣೆ.”

ಎಲ್ಲರೂ ಒಮ್ಮಲೆ ದೋಣಿಗಳಿಗೆ ಏರಲು ಹೊರಟರು. ಹೆಗ್ಗಡೆ ಗದರಿ ಹೇಳಿದ:

  • ಕತ್ತೆ ಜಾತಿ! ಬುದ್ಧಿ ಇಲ್ಲದ್ದು! ಮುಳುಗಿ ಸಾಯ್ದಿರೇನು ಎಲ್ಲರೂ? ಒಂದೊಂದು ದೋಣಿಗೆ ನೂರು ನೂರು ಜನ ಹತ್ತಿದರೆ ಸಾಕು.,”