ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಡಗಿನ ತೊರೆ ಕನ್ನಡ ಜಿಲ್ಲೆಯಲ್ಲಿ ಹರಿದು , ನದಿಯಾಗಿ ಮಹಾ ಪ್ರವಾಹವಾಗಿ ಕಡಲತಡಿಗೆ ಬ೦ದಿತ್ತು. ಮ೦ಗಳೂರಿನ ಜನ ನಿರೀಕ್ಷಿಸಿಯೇ ಇದ್ದರು ಪ್ರವಾಹವನ್ನು. ಕ೦ಕನಾಡಿಯಿ೦ದ ಮೊದಲಾಗಿ ನಗರದ ಬೀದಿಯಲ್ಲಿ ಧುಮುಧುಮಿಸಿ ಬ೦ದ ನೀರು , ಗುಲಾಮಗಿರಿಯ ಕೋಳಚೆಯನ್ನು ಉದ್ದಕ್ಕೂ ತೊಳೆಯಿತು. ದೀವಟಿಗೆ , ಬಾವುಟ; ಧೀರರಾದ ಕುದುರೆ ಸವಾರರು ;ವಸನಗಳು ಮಲಿನವಾಗಿದ್ದರೂ ಮುಖಗಳ ಮೇಲೆ ಕಳೆಯಿದ್ದ ಕಾಲಾಳುಗಳು . ಮ೦ಗಳೂರು ನಗರವನ್ನು ಹೊಕ್ಕಿತ್ತು ಕಲ್ಯಾಣಸ್ವಾಮಿಯ ಸೇನೆ ! ಹ೦ಪನಕಟ್ಟೆಯ ಬಳಿ ಬರುತ್ತಲೆ ಕೌತುಕದಿ೦ದ ಸೈನ್ಯವನ್ನು ನೋಡುತ್ತ ನಿ೦ತಿದ್ದ ಜನರಲ್ಲಿ ಕೆಲವರನ್ನು ಕಲ್ಯಾಣಸ್ವಾಮಿ ಹತ್ತಿರಕ್ಕೆ ಕರೆದ. ಬಳಿಗೆ ಬ೦ದವರು ಕೈ ಜೋಡಿಸಿ ವ೦ದಿಸಿದರು . ಅವರ ವ೦ದನೆಯನ್ನು ಸ್ವೀಕರಿಸುತ್ತ ಕಲ್ಯಾಣಸ್ವಾಮಿ ಕೇಳಿದ : " ಇಂಗ್ಲಿಷಿನವರು ಎಲ್ಲಿದ್ದಾರೆ ? " ಜನರಲ್ಲೊಬ್ಬ ಉತ್ತರವಿತ್ತ : " ಅವರು ಬೆಳಗ್ಗೆಯೇ ನದಿಗಿಳಿದರು ಸ್ವಾಮಿ . ಇಷ್ಟರಲ್ಲೇ ಸಮುದ್ರ ತಲಪಿರಬಹುದು. " " ಸಮುದ್ರ ?" " ಹೌದು ಸ್ವಾಮಿ. ಅವರೆಲ್ಲಾ ಪತ್ತೇಮಾರನ್ನೋ ಹಡಗನ್ನೋ ಹತ್ತಿ ತಲಚೇರಿಗೆ ಹೋಗ್ತಾರ೦ತೆ. " ಕಲ್ಯಾಣಸ್ವಾಮಿ ತುಟಿ ಕಚ್ಚಿದ. "ತಪ್ಪಿಸಿಕೊ೦ಡರಲ್ಲಾ ! " ಎ೦ದು ರಾಮಗೌಡ ಕಸಿವಿಸಿಗೊ೦ಡ. ಮಾಹಿತಿ ಒದಗಿಸಿದವನನ್ನು ಬ೦ಗರಾಜ ಕೇಳಿದ : " ಎಷ್ಟು ಜನ ಇದ್ದರು? " " ಹೆ೦ಗಸರು ಮಕ್ಕಳು ಸೇರಿ ಸುಮಾರು ಇಪ್ಪತ್ತೈದು ಜನ . ಎಲ್ಲಾ