ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಲ್ಯಾಣಸ್ವಾಮಿ
೧೯೨
ಬಿಳಿಯವರೇ. ಅವರ ಜತೆಗೆ ಏಳೆಂಟು ಜನ ಈ ಊರಿನವರು-ಚಾಕ
ರಿಗೆ."
"ಥೂ!"ಎಂದು ಉಗುಳಿದ ಸೊಮಯ್ಯ.
ಕಲ್ಯಾಣಸ್ವಾಮಿ ಕೇಳಿದ:
"ಎಲ್ಲಿದೆ ಅವರಸೈನ್ಯ?"
"ಸೈನ್ಯ ಇದ್ದ ರಲಿನೆ? ಸಿಪಾಯಿಗಳೇಣನೋ ಅರುವತ್ತು ಎಪ್ಪತ್ತು ಜನ
ಇರಬೇಕು. ಖಜಾನೆ,ಜೈಲು,ಬಾವುಟ ಗುಡ್ಡಗಳ ರಕ್ಷಣೆ ಮಾಡ್ತಿರಬೇಕು ."
"ಸರಿ!" ಎನ್ನುತ್ತ ಕಲ್ಯಾಣಸ್ವಾಮಿ,ಅಸ್ಪಷ್ಟವಾಗಿ ಆಗಲೆ ರೂಪು
ಗೊಂಡಿದ್ದ ಯೋಜನೆಯನ್ನು ನಿರ್ದಿಷ್ಟಗೊಳಿಸುತ್ತ ಅನುಜ್ಞೆ ಗಳನ್ನಿತ್ತ :
"ರಾಮಗೌಡರೆ!ಐನೂರು ಜನರ ಜತೆ ನೀವು ಸೆರೆಮನೆಯ ಕಡೆಗೆ.
ಕೈದಿಗಳನ್ನೆಲ್ಲಾ ಬಿಡುಗಡೆ ಮಾಡಿ!ನಮ್ಮ ಮೂವರು ಬಂದಿಗಳನ್ನು ಅಲ್ಲಿ
ರಿಸಿ! ನಂಜಯ್ಯನವರೆ! ಬಂದರಕ್ಕೆ ನೀವು! ಇಂಗ್ಲಿಷಿನವರನ್ನು ಬೆನ್ನ
ಟ್ಟೋದು ಎಷ್ಟುರಮಟ್ಟಗೆ ಸಾಧ್ಯ ಅಂತ ಪರಿಶೀಲನೆ ಮಾಡಿ! ಚೆಟ್ಟ-ಕರ್ತು!
ನೀವು ಶಸ್ತ್ರಾಗಾರಕ್ಕೆ!ಅದನ್ನು ವಶಪಡಿಸಿಕೊಲಳ್ಳಿ!ಅಣ್ಣಿಗೌಡರೆ! ನಿಮ್ಮ
ದಳ ಕಲೆಕ್ಟರ ಕಚೇರಿಗೆ__ಖಜಾನೆಗೆ! ಉಳಿದವರು ಬಂಗರಸರು ಮತ್ತು ನನ್ನ
ಜತೆ ಬನ್ನಿ-ಬಾವುಟ ಗುಡ್ಡಕ್ಕೆ! ದೀವಟಗೆಯ ಭಟನೆ-ಬಾವುಟದ ಕರಿ
ಯಪ್ಪ!ನಮ್ಮೆದುರು ಮುಂದೆ ಸಾಗಿ!"
ಸೈನ್ಯ ಐದು ವಿಭಾಗಗಳಾಗಿ ಐದು ದಿಕ್ಕುಗಳಲ್ಲಿ ಹಂಚಿ ಹೋಯಿತು.
ಬಾವುಟ ಗುಡ್ಡದ ಕಡೆಗೆ ಮುಂದುವರಿಯುತ್ತ ಕಲ್ಯಾಣಸ್ವಾಮಿ
ಬಂಗರಾಜನಿಗೆಂದ:
"ಹೀಗಾಗಬಹುದು ಅನ್ನೋ ಸಂದೇಹ ನನಗಿದ್ದೇ ಇತ್ತು. ಕೊನೆಗೂ
ಆ ಜನ ಕೈಗೆ ಸಿಗಲಿಲ್ಲ."
"ಅದೇನಿದ್ದರೂ ಮಂಗಳೂರು ಗೆದ್ದಹಾಗಾಯ್ತು."
"ನಿಜ. ಆದರೆ ಆ ಜನರಿಗೆ ಉಪ್ಪುನೀರ; ಕುಡಿಸ್ಪೇಕೂಂತ ನಮ್ಮ
ವರಿಗಿದ್ದ ಆಸೆ ಈಡೇರಲಿಲ್ಲ."
....ಗುಡ್ಡದ ಮೇಲೆ ಈಸ್ಟ್ ಇಂಡಿಯಾ ಕಂಪೆನಿಯ ಧ್ವಜವನ್ನು ರಕ್ಷಿ
ಸುತ್ತ ನಿಂತಿದ್ದ ಇಬ್ಬರು ಸಿಪಾಯಿಗಳಲ್ಲಿ ಒಬ್ಬ, ಏರು ಬರುತಿದ್ದ ಸೇನೆ
ಯನ್ನು ಕಾಣುತ್ತಲೆ ಗೊತ್ತು ಗುರಿಯಿಲ್ಲದೆ ಅವರ ಮೇಲೆ ಗುಂಡು ಹಾರಿಸಿದ.