ಪುಟ:Kalyaand-asvaami.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾತಂತ್ರ್ಯ ದೀವಟಗೆ

                                                          ೧೯೩
  
    ಒಂದೇ ಗುಂಡು.  ಕುದುರೆಗಳ ಮುಂಭಾಗದಲ್ಲಿ ನಡೆದು ಬರುತಿದ್ದ ಒಬ್ಬ
    ಸೈನಿಕನ ಹೊಟ್ಟೆಯನ್ನು ಅದು ಹೊಕ್ಕಿತು.  ಆತ ಉರುಳುತಿದ್ದಂತೆಯೆ,
    ಸೋಮಯ್ಯನ ಕೋವಿ ಆ ಸಿಪಾಯಿಯನ್ನು ಬಲಿ ತೆಗೆದುಕೊಂಡಿತು.
           ಕಲ್ಯಾಣಸ್ವಾಮಿ ಆಜ್ಞೆಯಿತ್ತ:
           " ಗಾಯಗೊಂಡವನನ್ನು ಎತ್ತಿ ಕೊಳ್ಳಿ !"
           ಬಳಿಕ ತನ್ನಷ್ಟಕ್ಕೆ ಆತ ಇಳಿ ಧ್ವನಿಯಲ್ಲಿ ನುಡಿದ:
           "ಈ ದೇಶದವನಾಗಿದ್ದು ಪರಕೀಯರ ಚಾಕರಿ ಮಾಡುವ ಮನುಷ್ಯ!
      ಎಂಥ ಮೂರ್ಖ ಈತ!"
           ಬೇರೆ ಸಿಪಾಯಿಗಳ ಸುಳಿವೇ ಅಲ್ಲಿರಲಿಲ್ಲ.
           ಕಲ್ಯಾಣಸ್ವಾಮಿಯ ಭಟರು,ಕಂಪೆನಿಯ ಬಾವುಟವನ್ನು ಕೆಳಕ್ಕೆಳೆದು
       ಹರಿದು ತುಳಿದು, ದೀವಟಗೆಯ ಸೊಡರಿನಿಂದು ಉರಿಹಚ್ಚಿ ಸುಟ್ಟರು.
            ಕರಿಯಪ್ಪ ಸುಳ್ಯದಿಂದಲೇ ಹೊತ್ತು ತಂದಿದ್ದ ಬಾವುತಟ್ಟ,ಆ ಧ್ವಜ
       ಸ್ತಂಭದ ಮೇಲೇರಿತು.
          ಕುದುರೆಗಳ ಮೇಲಿಂದ ಎಲ್ಲರೂ ಇಳಿದರು-ಸೈನಿಕರು ಸಾಲುಗಟ್ಟಿ
      ನಿಂತರು.  ಗಾಯಗೊಂಡವನ ಶುಶ್ರೂಷೆ ಸಾಗಿತು ಒಂದೆಡೆ.  ಆದರೆ,
      ಕೆಲವೇ ನಿಮಿಷಗಳಿಗಿಂತ ಹೆಚ್ಚುಕಾಲ ಆತ ಬದುಕಲಿಲ್ಲ.
           ಬಾಡಿದ ಮುಖಡದಿಂದ ಕಲ್ಯಾಣಸ್ವಾಮಿ ಹೇಳಿದ:
           " ನಮ್ಮ ಮೊದಲ ಬಲಿದಾನ!"
           ಸೈನಿಕರ ಕಡೆ ತಿರುಗಿ ಆತ ಕೇಳಿದ:
           "ಏನಪ್ಪಾ? ಯಾರಿಗಾದರೂ ಈತನ ಪರಿಚಯ ಉಂಟೆ?ಯಾವೂ
      ರವನು ಈತ? ಎಲ್ಲಿ ನಮ್ಮನ್ನು ಸೇಂ ಡ?"
          ಎಲ್ಲಿ ಯಾವತ್ತು ಸೇರಿಕೊಂಡನೊ ಯಾರಿಗೂ ಗೊತ್ತಿ ರಲಿಲ್ಲ.....
         ....ಹಲನರ ದೃಷ್ಟಿಗಳು ಹಿಂದೆಂದೂ ಕಾಣದೆ ಇದ್ದ ಕಡಲಿನ ಕಡೆಗೆ
    ಸರಿದುವು.  ಕಲ್ಯಾಣಸ್ವಾಮಿ ಕೆಳಗೆ ಸುತ್ತಲೂ ದಿಟ್ಟಿಸಿ ನೋಡಿದ.  ಆಳ
    ದಲ್ಲಿ ಮರಗಳೆಡೆಯಲ್ಲಿ ಊರು ಮಲಗಿತ್ತು.  ಮಲೆಯಾಳದಲ್ಲಿ ಆತನೊಮ್ಮೆ
    ಕಂಡಿದ್ದ ಅರಬ್ಬಿ ಸಮುದ್ರವೇ, ಇಲ್ಲಿ ಪಶ್ಚಿಮದಲ್ಲಿತ್ತು.
        ಬಿಸಿಲೇರಿದ್ದರೂ ತಣ್ಣನೆಯ ಗಾಳಿ ಬೀಸಿತು.
        ಕಲ್ಯಾಣಸ್ವಾಮಿ ಪ್ರಕೃತಿಯ ರಮ್ಯತೆಗೆ ಮನಸೋಲಲಾರದೆ, ಅಸು
        13