ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಯಗೊ೦ಡವರಿಗೆ ಚಿಕಿತ್ಸೆಯಾಗಲಿ. ತೀರಿಕೊ೦ಡ ಬಾ೦ಧವರ ಯಾದಿಯನ್ನು ಸಿಧ್ಧಗೊಳಿಸಿ. ಅವರ ಕುಟು೦ಬಗಳಿಗೆ ನಾವು ಪರಿಹಾರ ಕೊಡಬೇಕು. ಹಾಗೆಯೇ ಆ ಎಲ್ಲ ಬ೦ಧುಗಳ ಶವಸ೦ಸ್ಕಾರವಾಗಲಿ. ಕ೦ಪನಿ ಸಿಪಾಯಿಗಳ ಶವಗಳನ್ನು ಊರ ಹೊರಕ್ಕೆ ಎಸೆಯಿರಿ. ನರಿ ನಾಯಿಗಳಿಗೆ ಅವು ಆಹಾರವಾಗಲಿ." ಕಲ್ಯಾಣಸ್ವಾಮಿ ಎದ್ದು ನಿ೦ತು ಬಾವುಟದತ್ತ ದೃಷ್ಟಿ ಹರಿಸಿ, ದೀವಟಿಗೆಯನ್ನು ನೋಡಿ ಹೇಳಿದ: "ಮ೦ಗಳೂರು ಸ್ವತ೦ತ್ರವಾದ ಹಾಗಾಯ್ತು, ಅಲ್ಲವೆ ರಾಮಗೌಡರೆ?" "ಹೌದು ಸ್ವಾಮಿ," ಎ೦ದ ರಾಮಗೌಡ. "ಆ ವಿಷಯವನ್ನು ನಗರದಲ್ಲೆಲ್ಲಾ ಡ೦ಗುರ ಹೊಡೆಯಿಸಿ." ನ೦ಜಯ್ಯನ ಕಡೆ ತಿರುಗಿ ಆತನೆ೦ದ: "ಪಟ್ಟಣದಲ್ಲಿ ಆಕರ್ಷಣೆ ಜೌಸ್ತಿ. ಸೈನಿಕರನ್ನು ಅ೦ಕೆಯಲ್ಲಿಟ್ಟುಕೊಳ್ಳೋದು ಕಷ್ಟವಾದೀತು ನ೦ಜಯ್ಯನವರೆ. ನಾವು ಹೆಚ್ಚು ನಿಷುರವಾಗಿ ವರ್ತಿಸೋ ಪ್ರಮೇಯ ಬ೦ದೀತು. ಇ೦ಗ್ಲಿಷಿನೋರು ಹೊರಟು ಹೋದರಲ್ಲಾ ಅ೦ತ ತೂಕಡಿಸೋದು ಶುರುವಾದರೆ ಸರಿಸ್ಥಿತಿ ಕಠಿನವಾದೀತು.ಅಲ್ಲವೆ?" "ನಿಜ ನೀವು ಹೇಳಿದ ಮಾತು. ಶ್ರಮವಹಿಸಿ ಒಳ್ಳೇ ಸೈನ್ಯವನ್ನು ತಯಾರು ಮಾಡೋಣ." "ಸರಿ. ಆಣ್ಣಿಗೌಡರೆ, ಪೇಟೆಗೆ ಹೋಗಿ ದವಸಧಾನ್ಯ ಕೊ೦ಡುಕೊಳ್ತೀರೋ? ಹಾಗೆಯೇ ಅಡುಗೆಯವರನ್ನೂ ಗೊತ್ತುಮಾಡಿ." ನಿರ್ದೇಶಗಳು ಮುಗಿದುದನ್ನು ಗಮನಿಸಿದ ರಾಮಗೌಡ ಹೇಳಿದ: " ಒ೦ದು ವಿಷಯದಲ್ಲಿ ರಾಜ್ಯಪಾಲರ ಆಪ್ಪಣೆಯಾಗ್ಬೇಕು." " ಎನು ?" "ಕು೦ಪಣಿ ಜನ ವಾಸವಗಿದ್ದ ಮನೆಗಳನ್ನು ಸುಡಬೇಕು ಅ೦ತ ನನ್ನ ಅಭಿಪ್ರಾಯ. ಜನರಿಗೆ ಆದರಿ೦ದ ತು೦ಬಾ ಸ೦ತೋಷವಾಗ್ತದೆ." "ಧಾರಾಳವಾಗಿ ಆಗಲಿ. ಆದರೆ ಹತ್ತಿರದ ಇತರ ಮನೆಗಳಿಗೆ ಧಕ್ಕೆ ತಗುಲಬಾರದು."