ಪುಟ:Kalyaand-asvaami.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೮ ಕಲ್ಯಾಣಸ್ವಾಮಿ

 ಕಲ್ಯಾಣಸ್ವಾಮಿ ಮುಗುಳುನಕ್ಕು ಹೇಳಿದ:
   "ನಾವು ಅಭಯ ಒದಗಿಸ್ಬೇಕು,ಅಲ್ಲವೆ?"
   "ಹೌದು."
   "ಆಗಲಿ."
   ಕಮ್ತಿ ತನ್ನೊಡನೆ ಬಂದಿದ್ದ ಚಾಕರರನ್ನು ಕರೆದ. ಆ ಚಾಕರರು ಹೊತ್ತು ತಂದಿದ್ದ ಹರಿವಾಣಗಳು ಒಳಗೆ ಬಂದುವು. ಹೊರಿಸಿದ್ದ ರೇಶಿಮೆಯ ವಸ್ತ್ರವನ್ನು ತೆಗೆದೊಡನೆ ನೋಡುತ್ತಿದ್ದವರ ಕಣ್ಣುಗಳು ಕೋರೈಸಿದುವು; ನವರತ್ನ ಖಚಿತ ಆಭರಣಗಳು,-ಹಾರ,ಉಂಗುರ,-ಆಮೂಲ್ಯ ವಜ್ರದ ಹರಳುಗಳು,ಪೀತಾಂಬರಗಳು; ಒಬ್ಬೊಬ್ಬ ಪ್ರಮುಕ ಸಾಹುಕಾರನಿಂದಲೂ ಒಂದೊಂದು ಸಾವಿರ ಹೊನ್ನು....
   ಕಲ್ಯಾಣಸ್ವಾಮಿ ಕೇಳಿದ:
   "ಇದೇನು ಕಮ್ತಿಯವರೆ?",
   "ಇದು ನಮ್ಮ ಅಲ್ಪಕಾಣಿಕೆ ತಮಗೆ."
   "ನನಗೆ? ರಾಜ್ಯಕ್ಕೆ ಅನ್ನಿ;ರಾಜ್ಯದ ಬೊಕ್ಕಸಕ್ಕೆ."
   "ರಾಜ್ಯದ ಬೊಕ್ಕಸಕ್ಕೆ."
   "ಒಳ್ಳೇದು. ಚಚ್ರಿಸಬೇಕಾದ ವಿಷಯವೇನಾದರು ಇದ್ದಾಗ ನಿಮ್ಮನ್ನು ಬರಮಾಡಿಕೊಳ್ತೀವಿ.ಇನ್ನು ನೀವು ಹೋಗಬಹುದು."
   ವ್ಯಕ್ತಿ, ಸಮರ್ಥನೇ-ಎಂಬುದನ್ನು ಮನದಟ್ಟು ಮಾಡಿಕೊಂಡು, ವತ್ರಕರ ನಿಯೋಗ ಹಿಂತಿರುಗಿತು.
  ....ಸಂಜೆ ಕರಿಯಪ್ಪ ಅರೆಬೆತ್ತಲೆಯಾಗಿದ್ದ ಇಬ್ಬರನ್ನು ಹಿಡಿದು ತಂದು ಕಲ್ಯಣಸ್ವಾಮಿಯ ಬಳಿಗೆ ಒಯ್ದ. ಆಡಳಿತದ ಸಮಸ್ಯೆಗಳನ್ನು

ಸಹೋದ್ಯೋಗಿಗಳ ಜತೆ ಚಚ್ರಿಸುತ್ತ ಕುಳಿತಿದ್ದ ಕಲ್ಯಾಣಸ್ವಾಮಿ ತಲೆಯೆತ್ತಿ ಕೇಳಿದ:

  "ಯಾರಿವನು? ಏನು ಸಮಾಚಾರ?"
  "ಇವರು ಸುಬ್ರಾಯ ಹೆಗ್ಗಡೆ ಕಡೆಯೋರಂತೆ," ಎಂದ ಕರಿಯಪ್ಪ.
   ಎಲ್ಲರ ಕಿವಿಗಳೂ ನಿಗುರಿದುವು. ಎಲ್ಲರೂ ಆ ಇಬ್ಬರ ಕಡೆಗೆ ನೋಡಿದರು.
  ಈಸಿಕೊಂಡು ದಂಡೇ ಸೇರಿ ಈಗ 'ರಾಜರ' ಬಳಿಗೆ ಬಂದಿದ್ದ ಮನುಷ್ಯರು.