ಪುಟ:Kalyaand-asvaami.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾತಂತ್ರ್ಯ ದೀವಟಗೆ ೧೯೯

 "ಸಾವಿರ ಜನ ಬರೋಕೆ ಹೊರಟಿದ್ವು. ಫಿರಂಗಿಯಿಂದ ಗುಂಡು ಹಾರಿಸಿದ್ರು. ನಾಲ್ಕು ದೋಣಿ ನಾಶವಾಯ್ತು. ಹೆಗ್ಗಡೇರು ಮುಳುಗಿ ಸತ್ಹೋದರು."
  "ಛೆ! ಹೀಗೂ ಆಯ್ತೆ?" ಎಂದ ಕಲ್ಯಾಣಸ್ವಾಮಿ. ನಂಜಯ್ಯ, ಮಾತನಾಡಿದವನನ್ನು ಪ್ರಶ್ನಿಸಿದ:
  "ಇವತ್ತು ಬೆಳಗ್ಗೆ ಆಂದಿಯಾ?"
  "ಹೂಂ."
  ಇತರರ ಕಡೆ ತಿರುಗಿ ನಂಜಯ್ಯನೆಂದ:
  "ಇಂಗ್ಲಿಷ್ನೋರು ಪತ್ತೇಮಾರ್ ಹತ್ತೋದಕ್ಕೂ ಈ ದೋಣಿಗಳು ಬರೋದಕ್ಕೂ ಸರಿಹೋಗಿಬ್ರೇಕು. ಒಯ್ಯುತಿದ್ದ ಫಿರಂಗಿಯನ್ನೇ ಇವರ ಮೇಲೆ ಹಾರಿಸಿದಾರೆ    ಅನ್ನೋದು ಸ್ಪಷ್ಟ."
  "ಇಷ್ಟು ಒಳ್ಳೆಯ ದಿವಸದಲ್ಲಿ ಇಂಥ ಕೆಟ್ಟ ಸುದ್ದಿ !" ಎಂದ ಕಲ್ಯಾಣಸ್ವಾಮಿ.
  ಆತ ಆ ಇಬ್ಬರ ಕಡೆ ತಿರುಗಿ ಹೇಳಿದ:
  "ನೀವು ನಮ್ಮ ಸೈನ್ಯದಲ್ಲಿ ಇರ್ತೀರೇನಪ್ಪಾ?"
  ಅವರಲ್ಲ ಆಗಲೆ ಮಾತನಾಡಿದವನು ಉತ್ತರವಿತ್ತ:
  "ಅಪ್ಪಣೆ ಕೊಟ್ಟರೆ ನಾವು ಊರಿಗೆ ಓಗ್ತೀವಿ."
  "ಸರಿ. ರಾತ್ರೆ ಇಲ್ಲಿ ಊಟಮಾಡ್ಕೊಂಡು ಬೆಳಗ್ಗೆ ಎದ್ಹೋಗಿ."
   ಕರಿಯಪ್ಪ ಕರೆದರೂ ಅವರಿಬ್ಬರೂ ಮಿಸುಕಲಿಲ್ಲ.  ಕಲ್ಯಾಣಸ್ವಾಮಿ ಪುನಃ ಹುಬ್ಬೇರಿಸಿ ಅವರತ್ತ ನೋಡಿದಾಗ ಆ ಮನುಷ್ಯನೆಂದ: 
  "ರಾಜರನ್ನು ಕೇಳಿ, ಬರಬೇಕಾದ್ದು ಇಸಕೊಂಡು ಹೋಗಾನ ಅಂತ ಬಂದ್ವಿ."
   ಎಲ್ಲರೂ ಮತ್ತೆ ಕಿವಿ ನಿಗುರಿಸಿದರು.
   "ಏನು ಇಸಕೊಂಡು ಹೋಗೋದು?"
   "ಒಬ್ಬೊಬ್ಬರಿಗೆ ಒಂದೊಂದ್ಸಾವಿರ ವರಹ ಕೊಡ್ತೀನಿ ಅಂತ ಹೆಗ್ಗಡೇರು ಹೇಳಿದ್ರು."
   "ಅಹ್ಹಾ!" ಎಂದ ನಂಜಯ್ಯ.
   ಆಶ್ಚರ್ಯ ಪಡುತ್ತ  ಕಲ್ಯಾಣಸ್ವಾಮಿ ಕಣ್ಣರಳಿಸಿ ಕೇಳಿದ;