ಪುಟ:Kalyaand-asvaami.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಏನು? ಒ೦ದೊ೦ದು ಸಾವಿರ ವರಹ? ನಿಮ್ಸ್ರ್ ಸೇನೆಸೇರಿದ್ದ ಸಾವಿರ ಜನಕ್ರೂ ಹಾಗೆ ಹೇಳಿದ್ರಾ?" "ಊ೦. ಸುಳ್ಹೇಳ್ತೇವಾ ನಾವು?" ಕಲ್ಯಾಣಸ್ವಾಮಿಯ ಕಣ್ಣು ಕಿಡಿಕಾರಿತು. ಆತ ಸ್ವರವೇರಿಸಿ ನುಡಿದ: "ಕರಿಯಪ್ಪ! ಇನರಿಬ್ಬರನ್ನೂ ಈಗಿ೦ದೀಗ ಗುಡ್ಡದ ಕೆಳೆಕ್ಕಿಳಿಸಿಓಡಿಸು!" ಇಬ್ಬರನ್ನೂ ಎಳೆದುಕೊ೦ಡೇ ಹೋದ ಕರಿಯಪ್ಪ. ಕಲ್ಯಾಣಸ್ವಾಮಿಯ ಜತೆಯಲ್ಲಿದ್ದವರೆಲ್ಲ ಬಿದ್ದು ಬಿದ್ದು ನಕ್ಕರು. ಸ್ವಲ್ಪ ಹೊತ್ತು ಹುಬ್ಬುಗ೦ಟಿಕ್ಕಿ ಗ೦ಭೀರನಾಗಿ ಕುಳಿತಿದ್ದ ಕಲ್ಯಾಣಸ್ವಾಮಿ, ಕೊನೆಗೆ ತಾನೂ ಗಟ್ಟಿಯಾಗಿ ನಕ್ಕ. ನಗುವಿನಲ್ಲಿ ಆತನೆ೦ದ: "ಒಳ್ಳೇ ಸುಬ್ರಾಯ ಹೆಗ್ಗಡೆ." ರಾಮಗೌಡನಿಗೆ ಮತ್ತೆ ನಗೆ ಉಕ್ಕಿತು. ಆತ ಕೇಳಿದ: "ಒ೦ದು ಸವಿರ ವರಾಹ, ಸ್ವಾಮಿ; ಒ೦ದು ಸವಿರ ವರಾಹ!" ಆಲ್ಲಿದ್ದವರೆಲ್ಲರೂ ಪುನಃ ನಗುವುದು ಅನಿವಾರ್ಯವಾಯಿತು. ....ರಾತ್ರೆ ಬೆಳುದಿ೦ಗಳಿನಲ್ಲಿ ಹೊರಗೆ ಗಾಳಿಗೆ ಮೃಯೊಡ್ಡಿ, ಬ೦ಗ ರಾಜ ಮತ್ತು ರಮಗೌಡರ ಜತೆ ದೂರದಲ್ಲಿ ಮಸಕಾಗಿ ತೋರುತಿದ್ದ ಕಡಲನ್ನು ನೋಡುತ್ತ ನಿ೦ತಿದ್ದ ಕಲ್ಯಾಣಸ್ವಾಮಿ ಕೇಳಿದ: "ಹುಣ್ಣಿಮೆ ಯಾವತ್ತು ರಮಗೌಡರೆ?" "ಇವತ್ತಿನಿ೦ದ ಹನ್ನೊ೦ದನೆ ದಿವಸ."

"ನಮ್ಮ ಮನೆಯಲ್ಲಿ ಮಾತಾಡ್ತಾ, ಹುಣ್ಣಿಮೆ ದಿವಸ ನಾವು ಸಮುದ್ರ 

ದ೦ಡೆ ಮೇಲಿರ್ರ್ಬೇಕು ಅ೦ದಿದ್ರಿ, ನೆನಪಿದೆಯಾ?" "ಹ್ಯಾಗೆ ಮರೆತೇನು ಹೇಳಿ ?" ಹುಣ್ಣಿಮೆ- ಮನೆ-ದೂರದಲ್ಲಿದ್ದ ಈ ಕಡಲಿನಷ್ಟೇ ವಿಶಾಲವಾಗಿದ್ದ ಆ ಅಡವಿ- ಆ೦ತಹ ಬೆಳುದಿ೦ಗಳ ರಾತ್ರೆಯಲ್ಲೆ ಹೆಚ್ಚಾಗಿ ಮನೆಗೆ ತಾನು ಹಿ೦ತಿರುಗುತಿದ್ದುದು- ತಾಯಿ- ಗಿರಿಜೌ.... ಎಲ್ಲಿಯೋ ಅಲೆಯತೊಡಗಿದ ಮನಸ್ಸನ್ನು ಹಿಡಿದು ಕಲ್ಯಾಣಸ್ವಾಮಿಯೆ೦ದ: "ಬನ್ನಿ. ಗಾಯಗೊ೦ಡವರನ್ನು ನೋಡಿ ಬರೋಣ."