ಪುಟ:Kalyaand-asvaami.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ದಂಗೆಗಾರರ ದಂಡನೆಗೆ ತುಕ್ಕಡಿ ಸಿದ್ಧವಾಗಲಿ"

ಅವಸರ ಅವಸರವಾಗಿ ಆ ಸಿದ್ಧತೆಯೂ ನಡೆಯಿತು.

ಕತ್ತಲಾಯಿತು. ಅರಮನೆಯಲ್ಲಿ ಕಂದೀಲುಗಳನ್ನು ಹೆಚ್ಚಿದರು.

ಕಂಡೊ ಕಾಣದಂತೆ ಬೀಸುತಿದ್ದೆ ತಂಗಾಳಿಯೊಡನೆ ಸರಸವಾಡಲು ಬಯಸಿ,ತಂಬಾಕದ ಕೊಳವೆಯನ್ನು ಮತ್ತೆ ಚೀಪುತ್ತಾ, ತನ್ನ ನಾಯಿ ಯೊಡನೆ ಕೋಟೆಯು ಪ್ರಾಕಾರಗಳುದ್ದಕ್ಕೂ ಲೀಹಾರ್ಡೀ ನಡೆದ.

ನಾಯಿ ಒಮ್ಮೆಲೆ ನಿಂತು, ಕಾಡಿನೆಡೆಗೆ ನೋಡಿ ಬಗುಳಿತು.

ಡನಡವನೆ ಹೊಡೆದುಕೊಂಡಿತು ಲೀಹಾರ್ಡಿಯ ಹೃದಯ ಬೆಂಕಿ ಕಾಡನ್ನು ದಹಿಸುತಿತ್ತು, ఎಷ್ಟೊ ಮೈಲುಗಳಾಚೆ,

ಲೀಹಾರ್ಡೀಯ ಮೈಯಲ್ಲಿ ನಡುಕಹುಟ್ಟಿತು. ತಂಗಾಳಿಯನ್ನು ಆದರ ಪಾಲಿಗೇ ಬಿಟ್ಟು ಅವಸರ ಅವಸರವಾಗಿ ಆತ ಅರಮನೆ ಸೇರಿದ.