ಪುಟ:Kalyaand-asvaami.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕದ ಪರದೆ ಇಳಿಯಿತು

    "ಇನತ್ತಿಗೆ ನಾಲ್ಕು ದಿವಸ. ಬಹಳ ಹುಷಾರಿಯಿಂದ ನಿಧಾನ

ವಾಗಿ ಬತ್ ದ್ದಾರೆ."

   ಕಡಿದಾಗ ಕಾಡುಹಾದಿ.ಮುನ್ನಡೆ ಸುಲಭವಾಗಿರಲಿಲ್ಲ.ಸುಳ್ಯದಾಆಕ್ರ

ಮಣವೆ ಸದ್ಯಃ ಅವರಿಗಿದ್ದ ಗುರಿ.

    "ಇತ್ತೀಚಿನ ವಾರ್ತೆಯೇನು? ಎಲ್ಲಿಗೆ ತಲಸಿರಬಹುದು ಅವರ

ದಂಡು?"

    "ಸಂಪಾಚೆಯಲ್ಲಿ ಅವರು ತಳ ಊರಿದ್ದನ್ನು ನಾನು ಕಂಡೆ.ಆಮೇಲೆ

ನನಗೆ ಗೊತ್ತಾದ ಪ್ರಕಾರ,ಲೀಹಾರ್ಡಿಗೂ ಬೋಪುಗೂ ಅಲ್ಲಿ ವಾಗ್ವಾದ ವಾಯ್ತಂತೆ. ಲೀಹಾರ್ಡಿ ಬೋಪುವನ್ನು ತುಚ್ಛವಾಗಿ ಬಯ್ದನಂತೆ. ಸಿಪಾಯರ ಒಂದು ತಂಡದೊಡನೆ ಮಡಿಕೇರಿಗೆ ವಾಪಸು ಹೋದನಂತೆ."

        "ಆಹ್ಹಾ !" ಎಂದ ನಂಜಯ್ಯ.
        ರಾಮಗೌಡನೆಂದ:
        "ಅವರ ಸುಳ್ಯ ಹತ್ತಿರ ಬಂದ ಹಾಗ ಮಡಿಕೇರಿಯ ಚಿಂತೆ ಹತ್ತಿ 

ತೇನೋ! ವೀರನೇ ಇರಬೇಕು ಈ ಲೀಹಾರ್ಡಿ!"

         ಮುಂದುವರಿಸುತ್ತ ದೂತನೆಂದ:
         "ಬೋಪುವಿನ ಸೈನಿಕರು ಜನರಿಗೆ ಕೊಡೋ ಹಿಂಸೆಗೆ ಮಿತಿಯೇ

ಇಲ್ಲ. ಕಂಟಕಾಯಿಯ ಜನ ಅಂತ ಸಿಕ್ಕಿದವರನ್ನೆಲ್ಲಾ ಅವರು ದಂಡಿ ಸ್ತಿದಾರೆ."

         ಕಲ್ಯಾಣಸ್ವಾಮಿ ಕೇಳಿದ:
        "ಅವರ ದಂಡಿನ ಸಂಖ್ಯೆ ಎಷ್ಟು?"
        "ಮುನ್ನೂರು ನಾನ್ನೂರು ಇದ್ದಾತು."
        "ಬಹಳ ದೊಡ್ಡ ಸಂಖ್ಯೆಯೇ!" ಎಂದು ನಕ್ಕ ನಂಜಯ್ಯ.
        "ಆದರೆ ಅವರಲ್ಲಿ ಐವತ್ತರಷ್ಟು ಜನ ಕುದುರೆ ಸವಾರರೇ ಇದ್ದಾರೆ.

ಪ್ರತಯೊಬ್ಬ ಸೈನಿಕನಲ್ಲೂ ಕೋವಿ ಇದೆ."ರಾಮಗೌಡನ ಮುಖ ಚಿಂತಾಲಕ್ರಾಂತವಾಯಿತು.ಆತನೆಂದ: "ಅಮರ ಸುಳ್ಯ ಅವರ ವಶವಾಗೋದು ಖಂಡಿತ." ಆವರೆಗೂ ಮ ನವಾಗಿದ್ದ ಅಣ್ಣಗೌಡ ಒಮ್ಮೆಲೆ ನುಡಿದ: "ಯಾಕಾದೀತು? ಸುಳ್ಯವನ್ನು ರಕ್ಷಿಸೋ ಶಕ್ತಿ ನಮಗಿಲ್ವೇನು?"