ಪುಟ:Kalyaand-asvaami.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ೦ಕದ ಪರದೆ ಇಳಿಯಿತು

ನಂಜಯ್ಯನೆಂದ : " ಖಂಡಿತ ಹೇಳ್ತೀವೆ. ಸುಳ್ಯಕ್ಕೆ ಹೋಗೋ ಹಕ್ಕು ನಮ್ಮದು!”

ಗೌಡ ಇದಿರಾಡಲಿಲ್ಲ.
“ ಆಗಲಿ, ಇಲ್ಲಿಯೇ ಇರುವವರಂತೂ ಯಾರೂ ಇಲ್ಲವಲ್ಲ, ಈ ವಾರ ವಲ್ಲದಿದ್ದರೆ ಮುಂದಿನ ವಾರ, ನಾವೆಲ್ಲರೂ ಮಡಿಕೇರಿಯ ಕಡೆ ಹೋಗುವವರೆ.”
" ನಾನು?” ಎಂದು ಕೇಳಿದ ಅಣ್ಣಿಗೌಡ.
" ಕೋಶಾಧಿಕಾರಿ ಮುಖ್ಯ ಠಾಣ್ಯದಲ್ಲೇ ಇರಬೇಕು,” ಎಂದ ಬಂಗ ರಾಜ. 
ನಿರ್ಧಾರದ ಧನಿಯಲ್ಲಿ ಕಲ್ಯಣಸ್ವಾಮಿಯೆ೦ದೆ: 

" ఎల్లವೂ ತೀರ್ಮಾನವಾದ೦ತಾಯಿತು ಹಾಗಾದರೆ. ನ೦ಜಯ್ಯ ನವರೆ, ಏಳೋಣ. ಹೋಗಬೇಕಾದ ದಂಡು ಸಿದ್ಧವಾಗಲಿ, ಊಟವಾದ ಮೇಲೆ ಹೊರಟುಬಿಡಬೇಕು, ನಾಳೆ ಬೆಳಗಾಗೋದರೊಳಗೆ ಸೇನೆ ಪುತ್ತೂರು ದಾಟಿತ್ತದೆ.”

“ ಸರಿ ಸ್ವಾಮಿಯವರೆ," ಎ೦ದ ನಂಜಯ್ಯ. ... ಹೊತ್ತಲ್ಲದ ಹೊತ್ತಿನಲ್ಲಿ ಕಹಳೆಯ ಧ್ವನಿಯಾಯಿತು. ದಂಡಿನ ಸೈನಿಕರು ಚುರುಕಾದರು. ರಣೋತ್ಸಾಹ ಪ್ರತಿಯೊಬ್ಬರು ಒ೦ದೇ ಸಮನಾಗಿ ಆವರಿಸದಿದ್ದರೂ ಆಗಿಂದಾಗಲೆ ಸುಳ್ಳದ ಕಡೆ ಹೊರಡಲು ಸಿದ್ಧ ರಾಗಿದ್ದವರಿಗೇನೂ ಕೊರತೆ ಇರಲಿಲ್ಲ, ಕುದುರೆಗಳು, ಕಾಲಾಳುಗಳು. ಕೊತ್ತಳಿಗೆ ಭಟರೀಗಲೂ ಹೇರಳವಾಗಿಯೆ ಇದ್ದರೂ ಶಸ್ಸಾಸ್ತ್ರಗಳೂ ಸಾಕ ಷ್ಟಿದ್ದುವು. ಮಂಗಳೂರಿನಿಂದಲೇ ಓಡಿಹೋಗಿದ್ದ ಇಂಗ್ಲಿಷರು ಇನು ತಮ್ಮನ್ನಿದಿರಿಸುವ ಧೈರ್ಯ ತೋರಬಹುದೆಂದು ಯಾರೂ ಭಾವಿಸಲಿಲ್ಲ. ಯಮಭಯ೦ಕರರು ತಾವು....ಏ೦ದುಕೊ೦ಡರು ಸೈನಿಕರು ಕಲ್ಯಾಣ ಸ್ಪನ ದಂಡಿಗಿದಿರಾಗುವ ಎಂಟೆದೆ ಇತ್ತು ಯಾರಿಗೆ ? ಅಷ್ಟರ ಮೇಲೂ ఆ ಸಾಹಸವನ್ನು ಮೂರ್ಕರು ಮಾಡಿದ್ದೇ ಆದರೆ--ಒ೦ದೇ ಏಟು, ಪುಡಿಯಾಗಬೇಕು ವೈರಿ ಪಡೆ!
ಬಿಸಿಲನ್ನೂ ಪರಿಗಣಿಸದೆ ಹೊರಟು ನಿಂತ ಯೋಧರ ಪಡೆಯನ್ನು ದ್ವೆಶಿಸಿ, ಕಲ್ಯಾಣಸ್ವಮಿಯೆ೦ದ: 

" ಇವತ್ತು ನಮ್ಮ ಸ್ವಾತಂತ್ರಸೇನೆ ಇನ್ನೊಂದು ಹೆಜ್ಜೆ ಇಡ್ತಿದೆ.