ಪುಟ:Kalyaand-asvaami.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ ಪುನಃ ನೋಡಿದ. ಬಿಳಿಯ ಹಾಯಿಗಳು ఆస్ట్చ్ళ ವಾಗಿ ಕಾಣಿಸುತಿದ್ದುವು. ದಂಡೆಯ ಕಡೆಗೇನೂ ಅವು ಬರುತ್ತಿರಲಿಲ್ಲ. ಅಷ್ಟೊಂದು దూరదిండా ఆ దుటిFసిసిందో) ಏನನ್ನೂ ಗುರುತಿಸು ವುದು ಸಾಧ್ಯವಿರಲಿಲ್ಲ.

ಶಿಬಿರದಿಂದ ಅ ಮೂವರೆಡೆಗೆ ನೆಡೆದು ಬಂದು ಅಣ್ಣಿಗೌಡನೆಂದ:

"ಊರ ವರ್ತಕರು ಬಂದಿದ್ದಾರೆ. ಪೌರಕಂದಾಯದ ವಿಷಯ ಮಾತ ನಾಡೋದಕ್ಕೆ ಬನ್ನಿಂತ ನಾವೇ ಹೇಳಿಕಳಿಸಿದ್ದೆವು.”

"ಹೌದು, ನಡಿರಿ", ಎಂದ ಕಲ್ಯಾಣಸಾಮಿ.

ಶಿಬಿರದ ರಕ್ಷಣೆಯ ಸೈನಿಕನೊಬ್ಬನನ್ನು ಕರೆದು, ದುರ್ಬಿನನ್ನು ಗಿತ್ತು, ಆತ ಆಜ್ಞಾಪಿಸಿದ;

“ ಆ ಮೂರು ಚುಕ್ಕೆಗಳನ್ನು ನೋಡ್ರಿರು.”

ವರ್ತಕತೊಡನೆ ಭೇಟಿ ಮುಗಿದಾಗ, ಆಗಲೆ ಮುಂಚ್ಚಂಜೆಯಾಗಿತ್ತು. ಅಲ್ಲಿಂದ ನೇರವಾಗಿ ಕಲ್ಯಾಣಸಾಮಿ, ತಾನು ನಿಲಿಸಿ ಹೋಗಿದ್ದ ಸೈನಿಕನೆಡೆಗೇ ಬಂದ,

ಆ ಸೈನಿಕ ವರದಿ ಇತ್ತ; - “ ಏನೂ ಕಾಣಿಸೋದಿಲ್ಲ ಸ್ವಾಮಿಯವರೇ, ಬರೇ ಚುಕ್ಕೆ ಬಿಳೇ ಹಾಯಿಗಳೇ.”

“ ಮೀನು ಹಿಡಿಯುವ ದೋಣಿಗಳಿರಬಹುದು",ಎಂದ ಕಲ್ಯಾಣಸ್ವಾಮಿ, ತನ್ನನ್ನು ತಾನೇ ಸಮಾಧಾನಪಡಿಸುತ್ತ.