ಪುಟ:Kalyaand-asvaami.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆಸ್ತರು ಒಳಗಿದ್ದರೂ ಅವು ಮಿಾನುಹಿಡಿಯುವ ದೋಣಿಗಳಾಗಿರ ಲಿಲ್ಲ. ಮೀನು ಹಿಡಿಯುವ ಬೆಸ್ತರಾಗಿರಲಿಲ್ಲ ಅವರು. ಸಪ್ತಸಾಗರಗಳನ್ನು ದಾಟಿ ఎంದೋ ಬಂದಿದ್ದ ಆ ಸಮರ್ಥರಿಗೆ, ಬಲೆಬೀಸುವುದು ಚೆನಾಗಿ ತಿಳಿದಿತ್ತು.

ಅದರೆ, ఆ ಬಲೆಯೊಳಗೆ ಸಿಲುಕುತಿದ್ದುದು ಮಿನುಗಳಲ್ಲ, ರಾಷ್ಟ್ರಗಳು.

ಎತ್ತರದ ಪತ್ತೆ ಮಾರುಗಳು ಮೂರು. `ತ್ರೆಯ ಹೊತ್ತುನದಿ ಮುಖದೊಳಗಿಂದ ಅವು ಅತ್ತ ಬಂದುವು.

ದಂಡೆಯುದ್ದಕ್ಕೂ ಕಾವಲಿಗಿದ್ದ ಸೈನಿಕರು ನಿದ್ದೆ ಹೋಗಿದ್ದರು. ನಡುವೆ ಎಚ್ಚರಗೊಂಡವರಿಗೇನೋ ಎತ್ತರದ ಹಾಯಿಗಳು ಕಾಣಿಸಿದುವು.

ಇನ್ನೊಬ್ಬನನ್ನು ಕೇಳಿದ

“ ಎನೋ ಅದು ?” ಆತ ಉತ್ತರವಿತ್ರ :

  • ಬಂದರದ ವರ್ತಕರದಿರಬೇಕು. ಸಾಮಾನು ಬಂದಿದೆಯೋ ಎನೋ?”

నిದೆ ಬಂದಿದ್ದವನಿಗೆ ಸಾಕಾಗಿತ್ತು ಆ ಆಶಾಸನೆ.

ಪುಟ್ಟ ದೋಣಿಗಳು ನೀರಿಗಿಳಿದುವು. ದೋಣಿಗಳೊಳಗೆ ಜನರು

ಸದ್ದಿಲ್ಲದ - ಆದಷ್ಟುಮಟ್ಟಿಗೆ ಸದ್ದಿಲ್ಲದ -ಚಲನೆ,

ದಡ ಸೇರಿದುವು, ಬರಿದಾದುವು. ಹಿಂತೆರಳಿದುವು. ಪುನಃ ಮೊದಲಿನಂತೆಯೇ.

ಯಾವ ಅವಸರವೂ ಅವರಿಗಿದ್ದಂತೆ ತೋರಲಿಲ್ಲ. ಅವಸರವಿದ್ದರೂ ತೋರಿಸಿಕೊಳ್ಳಲಿಲ್ಲ ಯಾರೂ, ರಾತ್ರೆಯೆಲ್ಲ ತಮ್ಮದೇ ಎನ್ನುವ ಆತ್ಮವಿಶ್ವಾಸ කුරක් ತಮ್ಮ ಕೆಲಸದಲ್ಲಿ ಅವರು ನಿರತರಾದರು.

ತಿಂಗಳಬೆಳಕಿತ್ತು ನಿಜ, ಆದರೆ, ನೋಡಬಾರದ ಜನ ನಿದ್ದೆಹೋಗಿ ದ್ವಾಗ ಯಾವ ಹೆದರಿಕೆ ಅವರಿಗೆ? ಅಲ್ಲದೆ, ದಡದ ಉದ್ದಕ್ಕೂ ತೆಂಗಿನ ಮರಗಳಿದ್ದುವು. ಮರಗಳ ಕೆಳಗೆ ಕತ್ತಲೆ ಇತ್ತು, ಕತ್ತಲೆಯಲ್ಲಿ ನಿಂತ