ಪುಟ:Kalyaand-asvaami.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕಲ್ಯಾಣಸ್ವಾಮಿ

ಮಗನ ಮಾತು ಕೇಳಿ ಆಗ ತನಗೆ ಹೆಮ್ಮೆ ಎನಿಸಿತ್ತು; ಭಯವೂ ಆಗಿತ್ತು


ಅನಂತರ ವೀರಮ್ಮನಿಗೆ ಮದುವೆಯಾಯಿತು. ಶ್ರೀಮಂಗಲನಾಡಿ ನಲ್ಲಿದ್ದ ಗಂಡನ ಮನೆಗೆ ಆಕೆ ಹೊರಟುಹೋದಳು.


 ಅದು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು.


ಹತ್ತಿರದ ಹಳ್ಳಿಯಿಂದ ಹೊಲೆಯರು ಬಂದು ಸಾಗುವಳಿಯ ಕೆಲಸದಲ್ಲಿ ನೆರವಾದರು.ಪುಟ್ಟಬಸವನಿಗೆ ಅಕ್ಷರಾಭ್ಯಾಸವಾಯಿತು. ವಾರಕ್ಕೊಮ್ಮೆ ನಾಲ್ಕು ಮೈಲಿಗಳ ದೂರದಿಂದ ಐಗಳೊಬ್ಬರು ಬಂದು ಆತನಿಗೆ ಪಾಠ ಹೇಳಿದರು.ಕವಣೆ ಬೀಸುವುದನ್ನು. ಮರವೇರುದನ್ನು, ಬೇಟಿಯಾಡುವುದನ್ನು ಗುರುಗಳಿಲ್ಲದೆಯೆ ಆತ ಕಲಿತ.


ಪುಟ್ಟಬಸವ ಹದಿನೈದರ ಹರೆಯದವನಾಗಿದ್ದಾಗ ಅಜ್ಜಿ ತೀರಿಕೊಂಡಳು.


ಆ ಬಳಿಕ ಮಗನೂ ತಾನೂ ಜತೆಯಾಗಿ ಕಳೆದ ದಿನಗಳು...


ತಂದೆಯಂತೆಯೆ ಹರವಾಗಿದ್ದ ಹಣೆ, ಜಡವಾಗಿಯೆ ಇದ್ದು ಒಮ್ಮಿಂದೊಮ್ಮೆಲೆ ತೀಕ್ಷ್ಣವಾಗುತ್ತಿದ್ದ ಕಣ್ಣುಗಳು, ಮಾಟವಾಗಿದ್ದ ಮೂಗು, ಎದ್ದು ತೋರುತಿದ್ದ ಗಲ್ಲ, ಎಣ್ಣೆಗಪ್ಪು ಮೈ. ಅಂಗಾಂಗಗಳೆಲ್ಲ ಹೃಷ್ಟಪುಷ್ಟವಾಗಿದ್ದುವು. ಆದರೂ ಲವಲವಿಕೆ ಇರಲಿಲ್ಲ ಹುಡುಗನಲ್ಲಿ.

ಅಜ್ಜಿ ಇದ್ದಷ್ಟು ಕಾಲವೂ ಮೊಮ್ಮಗನಿಗೆ ಹೇಳುತಿದ್ದಳು:


ನೀನು ಮನೆ ಬಿಟ್ಟು ಎಲ್ಲಿಗೂ ಓಗ್ಬಾರ್ದು;ಆಂ?"


ಗಂಗವ್ವ ಆ ಭಯವನ್ನು ಸೆರಗಿನಲ್ಲಿ ಕಟ್ಟಿಕೊಂಡೇ ಇದ್ದಳು. ಹರೆಯದ ಹೊಲೆಯರೊಡನೆ, ನೆರಹಳ್ಳಿಯ ಹೈದರೊಡನೆ, ಆತ ಮಾತನಾಡುತ್ತಿದ್ದಾಗಲೆಲ್ಲ ತಾಯಿ ಮರೆಯಲ್ಲಿ ನಿಂತು ಕಿವಿಗೊಡುತಿದ್ದಳು. ಅರಸರ, ಯುದ್ಡದ, ವೈರಿಗಳ ಮಾತೇನೋ ಇರುತ್ತಿತ್ತು. ಆದರೆ ಅದೆಲ್ಲಾ ಹಿರಿಯರು ಆಡುತಿದ್ದ ಮಾತುಕತೆಯ ಪ್ರತಿಧ್ವನಿ ಮಾತ್ರ....


ಮದುವೆಯಾಯಿತೆಂದರೆ ಮಗ ಎಲ್ಲಿಗೂ ಹೊರಡಲಾರ,ಎಂಬುದು ಗಂಗವ್ವನ ನಂಬಿಕೆಯಾಗಿತ್ತು. ಪುಟ್ಟಬಸವನಿಗಿನ್ನೂ ಇಪ್ಪತ್ತು ತುಂಬು ವುದಕ್ಕಿಲ್ಲ-ಆಗಲೆ ಆತ ಮದವಣಿಗನಾದ. ಆತನ ಕೈ ಹಿಡಿದುದು,