ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಒಂದೇ ಹಾಡು ಯಾವಾಗಲು-ಅದೊಂದೇ ಹಾಡು. ಗಿರಿಜಾ , ಬಸಿರಲ್ಲಿ ಪುಟ್ಟ ಬಸವನ ಅಂಶವನ್ನು ಹೊತ್ತಿದ್ದಳು ; ಹೃದಯದಲ್ಲಿ ಆಳವರಿಯದ ಅಂತ್ಯವಿಲ್ಲದ ನೋವನ್ನು.

ಸ್ವಲ್ಪ ಸಮಯದ ಹಿಂದೆ ಸುದ್ದಿ ಕೇಳಿದ್ದುದು ಆಕೆಯೊಬ್ಬಳೇ,-ಅತ್ತೆಯಲ್ಲ.ಆಗ ಸಾಯಬೇಕೆನಿಸಿತ್ತು ಅವಳಿಗೆ , ತಾನೂ ನೇನುಹಾಕಿಕೊಂಡು. ಆದರೆ ಆಕೆಯ ಬಸಿರಲ್ಲಿತ್ತು ವಂಶವೃಕ್ಷದ ಕುಡಿ. ತನ್ನೊಡನೆ ಅದನ್ನು ಚಿವುಟಿ ಹಾಕುವ ಮನಸಗಲಿಲ್ಲ ಆ ಜೇವಕ್ಕೆ.

ಆಕೆಯೇನೋ ಸಯದೆ ಉಳಿದಳು. ಆದರೆ ತನ್ನ ಅತ್ತೆ , ನಿಜ ಸಂಗತಿ ತಿಳಿದಾಗ ಎದೆಯೊಡೆದು ಪ್ರಾಬಿಡಲಾರಳೆಂದು ಹೇಳುವುದು ಸಾದ್ಯವಿಲ್ಲ?

ಹಣೆಯ ಕುಂಕುಮವನ್ನು ಗಿತರಿಜಾ ಅಳಿಸಿದಳು , ಆ ವಿಷಯವಾಗಿ ಆಕ್ಷೇಪವೆತ್ತು ವಂತಿರಲಿಲ್ಲ ಕಣ್ಣು ಹಕಿದ ಮುದುಕಿ....

ಎಷ್ಟು ತಠಿನವಾಗಿದ್ದ ವಾರ್ತೆ! ಆಕೆ ಬಹಳ ದಿನ ನಂಬಲೇ ಇಲ್ಲ ಅದನ್ನು. ಕೊನೆಗೆ ಒಬ್ಬೊಬ್ಬರಾಗಿ ಆ ಹಳ್ಳಿಯವರು-ಅಲ್ಲಿ ಬದುಕಿ ಉಳಿದವರು-ಬಂದಿದ್ದರು. ಪ್ರತಿಯೊಬ್ಬರೂ ಅದೇ ವಾರ್ತೆಯನ್ನು ತಂದಿದ್ದರು.

ಸೋಮಯ್ಯನೂ ಬರಲ್ಲಿಲ್ಲ. ಒಟ್ಟು ಹದಿನಾಲ್ಕು ಜನರಿಗೆ ಗಲ್ಲಾಯಿತಂತೆ-ಹದಿನಾಲ್ಕು ಜನರಿಗೆ...

ಚಟ್ಟಯನ್ನೂ ಕಾರ್ತುವನ್ನೂ ದೋಣಿಯಲ್ಲಿ ತುಂಬಿ, ದೂರದ ಸಿಂಗಾಪುರ ಎನ್ನುವ ಯಾವುದೋ ಊರಿಗೆ ಒಯ್ದರಂತೆ..

ತಾನು ಕಂಡಿದ್ದ ಚನ್ನಯ್ಯ, ರಾಮಗೌಡ,..... ಪ್ರತಿಯೊಬ್ಬರನ್ನೂ ಕೊಂದೇಬಿಟ್ಟರು.

ಇನ್ನೆಷ್ಟೋಜನರಿಗೆ ಎಷ್ಟೆಷ್ಟೋ ವರ್ಷಗಳ ಕಾರಾಗೃಹ ವಾಸವಂತೆ....

ಅಯ್ಯೋ! ಹೀಗೂ ಆಗಬೇಕಾಗಿತ್ತೆ? ಇಂಥ ಶಿಕ್ಷೆಯನ್ನು ಕೊಡಬೇಕಾಗಿತ್ತು ದೇಚರು? ಯಾವ ತಪ್ಪಿಗೆ ಅಂತ ಈ ದಂಡನೆ?

...... ಬಸಿರಲ್ಲಿದ್ದ ಮಗು . ಗಂಡೇ. ಪುಟ್ಟಬಸವನ್ಂಥ ವೀರನಿಗೆ ಪುತ್ರಸಂತಾನವೇ. ಸಂದೇಹವೇನು?

ಆ ಜೀವಕ್ಕೋಸ್ಕರ ತನ್ನ ಬದುಕು.....

ಆದುದೇನೆಂಬುದನ್ನು ಅತ್ತೆಗೆ ಹೇಳಲೇಬಾರದೆಂದುಕೊಂಡಳು.