ಪುಟ:Kalyaand-asvaami.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಗಿರಿಜಾ , ಇತರರಿಂದುಮುದುಕಿಗೇನೂ ತಿಳಿಯದಂತೆಯೂ ನೋಡಿಕೊಂಡಳು.

ಮುದುಕಿಯ ಯೋಚನೆಗಳೋ ಕಡಿಕಡಿದು ಬಂದುವು . ಒಂದಕ್ಕೊಂದು ಸಂಬಂಧವಿರಲಿಲ್ಲ. ಮೆದುಳು ಸುಸೂತ್ರವಾಗಿ ಕೆಲಸ ಮಾಡಿತ್ತಲೇ ಇರಲಿಲ್ಲ.

ಮೂರು ತಿಂಗಳ ಮೇಲಾಯಿತು ಮಗ ಹೋಗಿ . ಇನ್ನೂ ಬರಲಿಲ್ಲವೆಂದರೆ? ಆಕೆ ಮಗನನ್ನು ಕುರಿತು ಆಕ್ಷೇಪಿಸಿದಳು :

'ಮನೇಲಿ ಹೆಂಡತಿ ಬಸುರಿ ಅನೋ ಗ್ಯಾನನಾದರೂ ಬೇಡವ ಇವನಿಗೆ. ?'ಮಗನ ವಿಷಯದಲ್ಲಿ ಕಾತರವೂ ಇತ್ತು ಆಕೆಗೆ .'ಪುತ್ತಬಸ್ಯ ಎಲಿದ್ದಾನೆ , ಊಟ ಉಪಚರ ಸರಿಯಾಗಿ ಆಗ್ತೇತೋ ಇಲ್ಲೋ.'

ಗರ್ಭಿಣಿ ಸೊಸೆಯ ನೆನಪಾದೊಡನೆ ಆಕೆ ಅನ್ನುತಿದ್ದಳು :

'ಬೆಚ್ಗೆ ಕಂಬಳಿ ಹೊವ್ಕೋ ಗಿರಿಜಾ , ಮಳೆಲಿ ಹಂಗೇ ಕೂತಿರ್ಬೇಡ.'

.....ರಾತ್ರೆ ಪ್ರತಿ ದಿನವೂ ಬಾಗಿಲ ಬಳಿ ಕುಳಿತು ನಿತ್ಯದ ಪಲ್ಲವಿಯನ್ನು ಹಡಿದ ಬಳಿಕ ನಿದ್ದೆ ಹೋಗುವ ಯತ್ನ....

ಅತ್ತೆಯ ಬಳಿಯಲ್ಲೆ ಇದ್ದ ಗಿರಿಜಾ ಉಗುಳು ನುಂಗಿ ಮೆಲ್ಲನೆ ಅಂದಳು ;

"ಏಳಿ ಅತ್ತೆಮ್ಮ . ಮಲಕ್ಕೊಳ್ಳಿ. ರಾತ್ರಿ ಭಾಳ ಆಯ್ತು."

ಗಂಗವ್ವ ಅಂದಳು ; "ನಡಿ ಮಗೂ , ಒಗಾನ.

ಸೊಸೆ ಎದ್ದು ನಿಂತು , ಒಳಕ್ಕೆ ಹೋಗಲು ಅತ್ತೆಗೆ ನೆರವಾದಳು .

ನೆಲದ ಜವುಗು ತಾಗದಿರಲೆಂದು ಹೊಣ ಹುಲ್ಲಿನ ಮೇಲೆ ಆಸಿದ್ದ ಚಾಪೆಗಳು ಅವರ ಹಾದಿ ನೋಡುತಿದ್ದವು . ಕೆಂಡವಿಲ್ಲದ ಬರಿಯ ಆಗ್ಗಿಷ್ಟಿಕೆಯೊಂದು ನಡುಮನೆಯಲಿತ್ತು .

ಮಲಗಿಕೊಳ್ಳುತ್ತ ಅತ್ತೆ ಅಂದಳು ; ಇವತ್ತು ಅಮಾವಾಸ್ಯೆ , ಮೇಲಿನ ಹುಣ್ಣಿಮೆ ದಿವಸ ಪುಟ್ಟಬಸ್ಯಾ ಊರಿಗೆ ಬರಬೌದು,ಅಲ್ಲವಾ?"

"ಹೊಂ , ಅತ್ತೆಮ್ಮ ,"ಎಂದಳು ಗಿರಿಜಾ ಕ್ಷೀಣಸ್ವರದಲ್ಲಿ.

ಅದರೆ ತನ್ನ ಸ್ವಾಮಿ ಇನ್ನೆಂದೂ ಬರಲಾರನೆಂಬುದು ಆಕೆಗೆ ಗೊತಿತ್ತು . ರಾಷ್ಟ್ರದ ಸ್ವಾತಂತ್ರ್ಯಾಕಗಿ ಜನತೆಯ ಕಲ್ಯಾಣಕ್ಕಗಿ ದೇಹವಿಟ್ಟು ಆ ಸ್ವಮಿ , ಬರಲಾಗದ ಊರಿಗೆ ತೆರಳಿದ್ದನೆಂಬುದು ಆ ಗಿರಿಜೆಗೆ ಗೊತ್ತಿತ್ತು.