ಪುಟ:Kalyaand-asvaami.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬೆಳಗಿನ ಜಾವ ಹೇಳಿದ್ದನಲ್ಲ ಪುಟ್ಟಬಸವ?

“ ಯಾಕೆ? ಏನಾಯ್ತು ಮಹಾರಾಜರಿಗೆ?”

ಪುಟ್ಟಬಸವ ನಡುವೆ ಬಾಯಿ ಹಾಕಿ ಹೇಳಿದ :

" ಇಲ್ಲಿಗಿನ್ನೂ ಸುದ್ದಿ ಬಂದೇ ಇಲ್ಲ, ನಂಜಯ್ಯನವರೆ."

" ಹಾಗೇನು?" ಎಂದ ನಂಜಯ್ಯ, ಆಶ್ಚರ್ಯದಿಂದ,ಖೇದದಿಂದ.

ತನ್ನ ಪ್ರಶ್ನೆಗೆ ಉತ್ತರ ಬರಲಿಲ್ಲವೆಂದು ತಾಯಿ ಮತ್ತೂ ಅಂದಳು :

"ಎನಪ್ಪಾ ಅದು? ಹೇಳಬಾರದಾ?"

ಪುಟ್ಟಬಸವನೆಂದ :

ಕೊಡಗು ರಾಜ್ಯ ಇಂಗ್ಲಿಷರ ವಶವಾಯ್ತು ಅವ್ವಾ. ಆಗಲೆ ಎರಡು ವರ್ಷ ಆಗೋಯ್ತು, ಮಹಾರಾಜರು ಪರಿವಾರ ಸಮೇತ ಕಾಶಿಗೆ ತೀರ್ಥ ಯಾತ್ರೆ ಹೊರಟುಹೋದರು.”

“ ಅಯ್ಯೋ ಶಿವನೇ!”

ದಂಗು ಬಡಿದಹಾಗಾಯಿತು, ಗಂಗವ್ವನಿಗೆ ಮುಂದೇನನ್ನೂ ಯೋಚಿಸುವುದಾಗಲೇ ಇಲ್ಲ ಅವಳಿಂದ.

ಆವಿಯೇಳುತಿದ್ದ ಬಿಸಿ ರೊಟ್ಟಿಗಳನ್ನು ತಟ್ಟೆಯಲ್ಲಿಟ್ಟು ತಂದ ಗಿರಿಜಾ ಮೂಕಳಾಗಿ ಅಲ್ಲಿಯೆ ನಿಂತಿದ್ದಳು. ಆಕೆಗೆ ಮಾತು ಕೇಳಿಸಿತು.

ಕೈಯಲ್ಲಿದ್ದ ರೊಟ್ಟಿ ಮುಗಿದೊಡನೆ ಕುಡಿಯಸೋದರರೆದ್ದರು. ಅವರ ಮುಖದ ಮೇಲೆ ಗೆಲುವೇ ಇರಲಿಲ್ಲ, ಆವರ ನೆರಿಗೆಗೊಂಡಿದ್ದ ಹಣೆಗಳಲ್ಲಿ, ಹುಬ್ಬುಗಳಲ್ಲಿ, ಬೇಸರ ಕುಣಿಯುತಿತ್ತು.

ಅವರು ಎದ್ದುದನ್ನು ನೋಡಿ, ತಾಯಿ ಆಡಬೇಕಾಗಿದ್ದ ಮಾತನ್ನು ಪುಟ್ಟಬಸವ ನುಡಿದ:

“ಬಿಸಿ ರೊಟ್ಟಿ ಇನ್ನೂ ಒಂದೆರಡು ತಿನ್ನಬಾರದಾ? ಯಾಕೆ ಎದ್ದಿರಿ?"

“ಇಲ್ಲಣ್ಣ ಸಾಕು. ತಿಂದದ್ದು ಜೀರ್ಣವೇ ಆಗೋದಿಲ್ಲ" ಎಂದ ಚೆಟ್ಟ.

ನೀರು ಕುಡಿಯಲೆಂದು ತಂಬಿಗೆಯನ್ನು ಎತ್ತುತ್ತಾ ನಂಜಯ್ಯ ಹೇಳಿದ :

“ ನನಗೂ ಸಾಕು. ಮನಸ್ಸಿಗೆ ಸ್ವಾಸ್ಥ್ಯ ಇದ್ದರೆ ಕಲ್ಲು ತಿಂದರೂ