ಪುಟ:Kalyaand-asvaami.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕತ್ತಲು ಕವಿದ ಕೊಡಗು


ಕರಗ್ತೇತೆ.ಈಗ ಉಸಿರು ಹಿಡಿದಿರ್ಬೇಕಲ್ಲಾ ಅಂತ ಒಂದಿಷ್ಟುತಿಂತೀವೆ." ರೊಟ್ಟಿ ಬಿಸಿಯಾಗಿತ್ತು ನಿಜ. ಆದರೆ ಪುಟ್ಟಬಸವನಿಗೂ ಅದ ಅಗತ್ಯವಿರಲಿಲ್ಲ.

ಗಿರಿಜವ್ವ, ಎತ್ತಿಕೊಂಡಿದ್ದ ತಟ್ಟೆಯನ್ನು ಹಾಗೆಯೇ ಒಳಕ್ಕೊಯ್ದಳು.

ಗಂಡಸರೆಲ್ಲ ಜಗಲಿಯ ಮೇಲೆ ಕುಳಿತರು.ಒಳಗಿನಿಂದ ವೀಳೆಯದೆಲೆ ಆಡಿಕೆ ಬಂದರೂ ಯಾರೂ ಅವುಗಳ ಗೋಜಿಗೆ ಹೋಗಲಿಲ್ಲ. ನಂಜಯ್ಯ ಒಂದೆರಡು ಆಡಿಕೆ ಹೋಳುಗಳನ್ನಷ್ಟೆ ಆಯ್ಪು ಬಾಯಿಯೊಳಕ್ಕೆ ತುರುಕಿಕೊಂಡ.

ಗಂಗವ್ವನ ಪಾಲಿಗೆ ಸಾವಿನ ಮನೆಯ ವಾತಾವರಣವೇರ್ಪಟ್ಟಿತ್ತು, ಅಲ್ಲಿ.ಮಗನು ಮನೆಗೆ ಮರಳಿದ ಸಂಭ್ರಮಕ್ಕೆ ಆಸ್ಪದವೇ ಇಲ್ಲದ ಹಾಗೆ ಕೆಟ್ಟ ಸುದ್ದಿಯ ಸೂತಕ ಮುಟ್ಟಿತ್ತು.ರಾಜರಿಗೆ ರಾಜ್ಯಕ್ಕೆ ಮಾತ್ರವಲ್ಲ,ತನ್ನ ಸಂಸಾರಕ್ಕೂ ಒದಗಿತ್ತು ಆಪತ್ತು.ಪುಟ್ಟಬಸವನ ತಂದೆಯ ದಿಂದಲೂ ಅರಮನೆಯ ಮರಕ್ಕೆ ಅಡರಿಯೇ ಬೆಳೆದಿತ್ತು,ಅವರ ವಂಶದ ಬಳ್ಳಿ.

ಆ ಬೇಸರವೋ ಆಂಟು ಬುಡ್ಯ.ಗಿರಿಜೆಯ ಮುಖವೂ ಕಪ್ಪಿಟ್ಟಿತು. ಯುದ್ದ....ಸೋಲು, ಮತ್ತೆ ಯುದ್ದ ಮತ್ತೆ.........ಗಂಡ ಬಹಳ ದಿನ ಮನೆಯಲ್ಲಿ ಇರುವುದಿಲ್ಲನೆಂಬ ಶಂಕೆಯೊಂದು ಆಕೆಯ ಮನಸ್ಸಿನಲ್ಲಿ ಮೂಡಿ ಕೆಲ ನಿಮಿಷಗಳಲ್ಲೇ ಬಲಗೊಂಡಿತು....

ಮಧ್ಯಾಹ್ನ ಹಬ್ಬದಡುಗೆಯಾಗಬೇಕು ಎಂದಿದ್ದಳು ಗಂಗವ್ವ-ರೊಟ್ಟಿ ತಟ್ಟುತ್ತ ಒಲೆಯ ಮುಂದೆ ಕುಳಿತಿದ್ದಾಗ.ಬೆಳಗ್ಗೆ ಅತ್ತೆ ಮತ್ತು ಸೊಸೆ,ಆಗಬೇಕಾದ ಭಕ್ಷ್ಯಭೋಜ್ಯಗಳ ವಿಷಯ ಮಾತನಾಡಿದ್ದರು.ಈಗ-

ಗಿರಿಜವ್ವ ಅತ್ತೆಯ ಬಳಿ ಸಾರಿದಳು.

"ಅಡುಗೆ ಏನೇನು ಮಾಡಾನ ಅತ್ತೆಮ್ಮ?"

ಸ್ವಲ್ಪ ಹೊತ್ತು ಸುಮ್ಮನಿದ್ದು ಗಂಗವ್ವ ಉತ್ತರನಿತ್ತಳು:

"ನಿನ್ನ ಗಂಡನ್ನ ಕೇಳು".

ಪುಟ್ಟಬಸವ,ಹೆಂಡತಿಯ ಪ್ರಶ್ನೆಗೆ ನೇರವಾಗಿ ಉತ್ತರ ಕೊಡದೆ ನಂಜಯ್ಯನ ಕಡೆಗೆ ತಿರುಗಿದ: