ಪುಟ:Kalyaand-asvaami.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕತ್ತಲು ಕವಿದ ಕೊಡಗು
ಭೂಮಿಯನ್ನೆಲ್ಲಾ ಅಳೆದು ಮಣ್ಣಿನ ಗುಣಕ್ಕೆ ಸರಿಯಾಗಿ ಕಂದಾಯ ನಿಗದಿ ಮಾಡಿ!"
ಹಾಗೆ ಆ ಅಳತೆಯ ಕೋಲು ಲಿಂಗರಾಜ ಕೋಲಾಯಿತು; ನಿಗದಿಯಾದ ಕಂದಾಯ ಲಿಂಗರಾಜನ ಶಿಸ್ತು ಎಂದಾಯಿತು.
ರೈತರಿಗೂ ಭೂಮಾಲಿಕರಿಗೂ ಇರುವ ಸಂಬಂಧವನ್ನು ನಿರ್ದಿಷ್ಟಗೊಳಿಸಿ ಐವತ್ತೆರಡು 'ಹುಕುಂ'ಗಳನ್ನು ಆ ರಾಜ ಹೊರಡಿಸಿದ.
ಮಡಿಕೇರಿಯ ಅರಮನೆ ಸಿದ್ಧವಾಯಿತು. ಓಂಕಾರೇಶ್ವರ ದೇವಸ್ಥಾನದ ಸ್ಥಾಪನೆಯಾಯಿತು.
ಉತ್ತಮವಾದ ಗುರಿಕಾರ, ಕುದುರೆ ಸವಾರ, ಆ ಅರಸು. ಒಂದು ವರ್ಷಕ್ಕಿರುವ ದಿನಗಳ ಸಂಖ್ಯೆಗಿಂತಲೂ ಹೆಚ್ಚು ಹುಲಿಗಳನ್ನು ಕೊಂದ ವೀರ
ಆತನದು ಕೊಡಗು ದೇಶದಪ್ರಗತಿಯನ್ನು ಸಾಧ್ಯಗೊಳಿಸಿದ ದಕ್ಷತೆಯ ರಾಜ್ಯಭಾರ.
ಕಂಪನಿಯ ಸರಕಾರದವರು ಬೇಟೆಯಾಡಲೇನೋ ಕೊಡಗಿಗೆ ಆಗಲೂ ಬಂದರು. ಆದರೆ ಅವರಿಗೆ ಗೊತ್ತಿತ್ತು-- ಲಿಂಗರಾಜನ ಕಾಲದಲ್ಲಿ ಕೊಡಗನ್ನು ಆಕ್ರಮಿಸುವುದು ಆಗದ ಮಾತೆಂಬುದು.
...ತಂದೆಯ ಅನಂತರ ಪಟ್ಟಕ್ಕೆ ಬಂದ ವೀರರಾಜ ದಕ್ಷತೆಯಲ್ಲಿ ಲಿಂಗರಾಜನಿಗಿಂತ ಕಡಿಮೆಯವನಾಗಿರಲಿಲ್ಲ. ಬಿಸಿರಕ್ತದ ಯುವಕ. ಆದರೆ ಇಂಗ್ಲಿಷರ ದೃಷ್ಟಿಯಲ್ಲಿ ಆತ ಹಲವು ದುರ್ಗುಣಗಳ ಪ್ರತಿಮೂರ್ತಿಯಾಗಿದ್ದ. ಆ ದುರ್ಗುಣಗಳಲ್ಲಿ ಅತ್ಯಂತ ಪ್ರಧಾನವಾಗಿದ್ದುದು ಆತನ ಸ್ವಾಭಿಮಾನ, ಸ್ವಾತಂತ್ರ್ಯಪ್ರಿಯತೆ.
ತಾತ ವೀರರಾಜೇಂದ್ರನ ದಿನಗಳಿಂದ ತನ್ನವರೆಗೆ ಕಾಲ ಪ್ರವಾಹ ಹರಿದ ಗತಿಯನ್ನು ಆತ ನಿರೀಕ್ಷೀಸಿದ್ದ. ಆಂಗ್ಲ್ರನ್ನು ಆತ್ಮೀಯ ಸ್ನೇಹಿತರೇಂದು ಕರೆದು ಅಪ್ಪಿಕೊಳ್ಳುವ ಅಗತ್ಯ ಚಿಕ್ಕವೀರರಾಜನಿಗೆ ತೋರಲಿಲ್ಲ. ಬರಿಯ ವ್ಯಾಪರಿಗಳಾಗಿರಲಿಲ್ಲ ಆ ಬಿಳಿಯ ಜನ. ಭಾರತದ ವಿಸ್ತೃತ ಭಾಗಗಳನ್ನೇ ಕಂಪನಿ ಸರ್ಕಾರ ಆಕ್ರಮಿಸಿತ್ತು. ತಕ್ಕಡಿಯ ತಟ್ಟೆಗಳನ್ನು ಕಳಚಿ, ಉಳಿದ ಬಡಿಗೆಯನ್ನೆ ದಂಡಾಯುಧವಾಗಿ ಬೀಸುತ್ತಿದ್ದರು ಬ್ರಿಟಿಷರು.