ಪುಟ:Kalyaand-asvaami.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕತ್ತಲು ಕವಿದ ಕೊಡಗು ಯಿಲ್ಲದೆ ಮುoದುವರಿಯಿತು. ಅರಸನೊಬ್ಬನೆ ಆಗ ನಾಲು ನಾಡು ಅರಮನೆಯೊಳಗಿದ್ದ.ಯುದ್ಧ ರoಗಗಳಲ್ಲಿದ್ದರು ವೀರರಾದ ಆಪ್ತರು. ಆಗ ಅತನಿಗೆ,ಧೀರರಿಗೆ ಸಲ್ಲದoತ ದ್ರೂಹಿಗಳಿಗೆ ಸಲಹ ನೀಡಿದವನು,ಅಪ್ಪಾರಂಡ ಬೋಪು ದಿವಾನ."ಈಗ ಒಪ್ಪಂದ ಮಾಡಿಕೊಳ್ಳೋದೆ ಮೇಲು ಮಹಾರಾಜರೇ" "ಇಂಗ್ಲೀಷರನ್ನು ತಡೆದು ನಿಲ್ಲಿಸುವ ವೀರರು ಇಲ್ಲದೆ ಹೋದರೇನು ಈ ಕೊಡಗಿನಲ್ಲಿ?" "ಹಾಗಲ್ಲ ಮಹಾರಾಜರೇ.ಸದ್ಯಕ್ಕೆ ಅವರ ಸೇನೆಬಲಿಷ್ಠವಾಗಿದೆ. ಪರಿಸ್ಥಿತಿಗೆ ತಕ್ಕಂತೆ ತಂತ್ರ ಬದಲಾಯಿಸೋದೆ ಮುತ್ಸದ್ಧಿ ಜನ. ತನ್ನ ಅಸಹಾಯಕತೆಗಾಗಿ ರರೇಗುತ್ತಾ ವೀರರಾಜ ನುಡಿದ: "ಆ ತರಬೇತಿಗಳ ವಿಷಯದಲ್ಲಿ ಯಾವಾಗಲೂ ಪಕ್ಷಪಾತವನ್ನೇ ತೋರಿಸುವವರು ನೀವು.ಇದು ನಿಮಗೆ ತಿಳಿಯದೆ ದಿವಾನರೆ?" "ಮಹಾರಾಜರು ಆಜ್ಞೆ ಮಾಡುವುದೇ ಆದರೆ ಯುದ್ಧರಂಗದಲ್ಲಿ ಈಗಿಂದೀಗ ಪ್ರಾಣ ಬಿಡೋದಕ್ಕೂ ನಾನು ತಯಾರು ಆದರೆ ದೇಶ ಇಂಗ್ಲೀಷರ ವಶವಾಗ್ತದೆ.ಇದು ಖಂಡಿತ."ಎಂಥ ಕಷ್ಟ ಪ್ರಾಪ್ತವಾಯ್ತು!" "ನನ್ನ ಮಾತು ಕೇಳಿ ಮಹಾರಾಜರೇ.ಈಗ ಒಪ್ಪoದ ಮಾಡಿ ಕೊಳ್ಳೋಣ." "ನಿಮ್ಮಿಷ್ಟದಂತೆಯೇ ಮಾಡಿ ದಿವಾನರೇ.ಆದರೆ ಒಂದು ವಿಷಯ ನೆನಪಿಡಿ.ಈ ಒಪ್ಪಂದದಿಂದ ಕೊಡಗಿನ ಸ್ವಾತಂತ್ರ್ಯಕ್ಕೆ ಚ್ಯುತಿ ಬಂದದ್ದೇ ಆದರೆ,ಅದಕ್ಕೆ ನೀವೇ ಹೊಣೆಗಾರರಾಗ್ತೀರಿ." ಅಪ್ಪಾರಂಡ ಬೋಪು ದಿವಾನ ಮರುಮಾತನಾಡಲಿಲ್ಲ.ಮುಂದುವರಿದು ಬರುತಿದ್ದ ಇಂಗ್ಲೀಷ್ ಸೇನೆಯನ್ನು ಇದಿರುಗೊಳ್ಳಲು ನಾಲ್ಕುನೂರು ಜನ ಸೈನಿಕರೊಡನೆ ಆತ ಹೊರಟ.ಶರಣು ಮಂತ್ರ ಬಾಯಲ್ಲಿ.ಕೈಯಲ್ಲಿ ಬಿಳಿಯ ಬಾವುಟ.ಕುಶಾಲುನಗರದಲ್ಲಿ ನಡೆಯಿತು ಯಾವ ಶರತವಶರತವೂ ಇಲ್ಲದ ಶರಣಾಗತಿ. ವಿಜಯಿಯಾದ ಫ್ರೇಸರ್ ಮಡಿಕೇರಿಗೆ ಮುನ್ನಡೆದ.