ಪುಟ:Kalyaand-asvaami.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಕಲ್ಯಣಸ್ವಾಮಿ

ನಿಂತರು. ರಾಜರ ಪರಿವಾರ ಕಣಿವೆಯ ಹಾದಿಯಾಗಿ ಇಳಿದು, ಇರುವೆಯ ಸಾಲಿನಂತೆ ಮತ್ತೆ ಕಾಡಿನ ಬಿಲ ಸೆರಿತು.

    ...ಇತ್ತ ಫ್ರೇಸರ್ ಹೆಚ್ಚು ಸರಾಗವಾಗಿ ಉಸಿರಾಡತೊಡಗಿದ. ಬೊಪುದಿವಾನನ್ನೆ ಮುಂದಿರಿಸಿಕೊಂಡು ಕೊಡಗಿನ 'ಪ್ರಮುಕ'ರ ಸಭೆಯೊಂದನ್ನು ಕರೆಸಿದ ಆತ. ಇಂಗ್ಲಿಷರು ಅಲ್ಲಿಯೆ ಇದ್ದು ಅಳಬಕೆಂಬುದು ಪ್ರಜೆಗಳ ಅಪೆಕ್ಶ-ಎಂದು ಕೆಲವರಿಂದ ಭಷಣ ಕೊಡಸಿದ!
   
      ಫ್ರೇಸರನೆಂದ:
      "ನಿಮ್ಮ ಅಭಿಪ್ರಾಯವನ್ನು ಮೀರುವುದು ನಮಗೆ ಇಷ್ಟವಿಲ್ಲ. ಒಂದು ಇಸ್ತಿಹಾರು ಹೊರಡಿಸಿ, ನಿಮ್ಮ ಒತರಕ್ಶಣೆಗಾಗಿ ಲೀಹಾರ್ಡಿಯವರನ್ನು ಇಲ್ಲಿ ಬಿಟ್ಟು ನಾವು ಮೈಸೂರಿಗೆ ಹೊಗುತ್ತೆವೆ."
       ಕಂಪಣಿ ಸರಕಾರದ ಇಸ್ತಿಹಾರು ಸಿಧವಾಯಿತು.
       ಎಂತಹ ಒಕ್ಕಣೆ!
     'ಕೊಡಗು ದೆಶದ ನಿವಾಸಿಗಳು, ಬ್ರಿಟಿಷ್ ಸರಕಾರದ ಅಧೀನ ದಲ್ಲಿರಬೆಕಂದು ಎಕಮತಸ್ತರಿಗಾಗಿ ಇಶ್ಟಪಡುವುದರಿಂದ, ವೀರ ರಾಜೆಂದ್ರ ಒಡೆಯರಿಂದ ಆಳಲ್ಪಡುತ್ತಿಡ್ದ ಈ ದೇಶವನ್ನು ಘನಉಳ್ಳ, ಕುಂಪಣಿ ಸರಕಾರದ ತಾಜೆಗೆ ವರ್ಗ ಮಾಡಲು ಇಂಡಿಯ ದೇಶದ ಗವರ್ನೆರ್ ಸಾಹೇಬರರು ಸಂತೋಷಪಡುತ್ತರೆ.
     'ಈ ದೇಷದ ನಿವಾಸಿಗಳನ್ನು ಪುನಹ ಸ್ವದೇಶೀ ರಾಜರ ಆಳ್ವಿಕೆಗೆ ಬಿಟ್ಟು ಕೊಡುವುದಿಲ್ಲವಾಗಿಯು ಇವರ ಮುಲ್ಕಿ ಮತ್ತು ಮತ ಸಂಬಂದವಾದ ಎಲ್ಲಾ ಪದ್ದತಿಗಳನ್ನು ಬಹುಮಾನದಿಂದ ಅಂಗೀಕರಿಸಲ್ಪಡುವುದಾಗಿಯು ಮತ್ತು ಇವರ ಭದ್ರತೆ ಸುಖಕ್ಷೆಮಗಳನ್ನು ಹೆಚ್ಛಿಸಲು ಬ್ರಿಟಿಷ್ ಸರಕಾರದವರು ಯಾವಗಲು ಸಂತೊಷ ಪಡುವ ರಾಗಿಯು ಇದರ ಮೂಲಕ ಖಂಡಿತವಾಗಿ ತಿಳಿಸಲ್ಪಟ್ಟಿದೆ.
   ಮಡಿಕೇರಿ                               ಚೆ.ಎಸ್.ಫ್ರೇಸರ್'
     *       *       *       *      *      *       *     *
     ಕಂಟಪಾಟವಾಗಿದ ಇಸ್ತಿಹಾರಿನ ಒಕ್ಕಣೆಯನ್ನು ನೆರದಿದ್ದವರೆದುರು ಹೇಳಿ ಮುಗಿಸಿ ನಂಜಯ್ಯನೆಂದ:
     "ಕೇಳಿದಿರೇನ್ರಪೋ. ನಮ್ಮ ಭದ್ರತೆ ಸುಖಕ್ಷೆಮಗಳನ್ನು ಹೆಚ್ಚಿ