ಪುಟ:Kalyaand-asvaami.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕತ್ತಲು ಕವಿದೆ ಶೊಡಗು

"ಸೋಕೆ ಬ್ರಿಟಿಷ್ ಸರಕಾರದವರು ಯಾವಾಗಲೂ ಸಂತೋಷಪಡ್ತಾರೆ!" ತಲೆಯಾಡಿಸುತ್ತ ಮುಷ್ಟಿಯಲುಗಿಸುತ್ತ ಸೋಮಯ್ಯನೆಂದ: "ನೀಚರು! ವಂಚಕರು! ಪಾಪಿಗಳು!" ಗುಂಪಿನಲ್ಲಿದ್ದೊಬ್ಬ ನೆಂದ: "ಆಮೇಲೆ ಏನಾಯ್ತು? ಮಹಾರಾಜರು ಈಗೆಲ್ಲಿದಾರೆ? ನಮ್ಮ ಸೈನ್ಯ ಎಲ್ಲಿದೆ? ಏಳುಸಾವಿರ ಸೀಮೆಯವರು, ಮಡಿಕೀರಿನಾಡಿನವರು, ಎಲ್ಲಾ ಏನು ಹೇಳ್ತಾರೆ?" ಸೋಮಯ್ಯನೂ ಧ್ವನಿ ಕೂಡಿಸಿದ. "ನೀವು ಮೊದಲೇ ಇಲ್ಲಿಗೆ ದೂತರನ್ನು ಕಳಿಸ್ಬೇಕಾಗಿತ್ತು. ಹೀಗೆಲ್ಲಾ ಆಗಿಗೋ ಸಮಾಚಾರ ಸ್ವಲ್ಪವಾದರೂ ನಮಗೆ ತಿಳಿದಿದ್ದರೆ...." ನಾಭಿಯಿಂದಲೆ ಹೊರಟಂತಿದ್ದ ಆಳವಾದ ಸ್ವರದಲ್ಲಿ ಕರಿಯಪ್ಪನೆಂದ: "ಈಗಲೂ ತಡವೇನೂ ಆಗಿಲ್ಲ. ಸ್ವಾತಂತ್ರ್ಯ ಸಂಪಾದನೆಯ ಕೆಲಸದಲ್ಲಿ ತಡ ಆನ್ನೊದೇ ಇಲ್ಲ. ಹೇಳಿ, ಏನಾಯ್ತೊಂತ, ಏನೇನು ತಯಾರಿ ಆಗಿದೇಂತ, ಸೂಕ್ಷ್ಮವಾಗಿ ಹೇಳಿ." ನಂಜಯ್ಯ ಸಮ್ಮನಿದ್ದುದನ್ನು ಗಮನಿಸಿದ ಪುಟ್ವಒಸವ ಮಾತ ನಾಡಿದ. ಕೆಂಡಗಳ ಮೇಲಿದ್ದ ಬೂದಿಯನ್ನು ಬದಿಗೆ ಸರಿಸುತ್ತ ತಂಪಾಗಿ ಬೀಸಿದ ಗಾಳಿಯಂತಿತ್ತು ಆತನ ಧ್ವನಿ. ತೂಗಿ ತೂಗಿ ನಿಧಾನವಾಗಿ ಉಚ್ಚರಿಸುತಿದ್ದ ಪದಗಳು. ಪ್ರತಿಯೊಂದೊ ಪರಿಣಾಮಕಾರಿ. ಕವಣೆ ಬೀಸಿ ಬೀಸಿ ಗುರಿಗೇ ತಗುಲುವಂತೆ ಕಲ್ಲೆಸೆದ ಹಾಗೆ. "ಕೇಳಿ. ಮುಂದಿನಡೆಲ್ಲ ಚುಟುಕು ಕಥೆಯೇ. ವಿವರನಾಗಿ ಹೇಳೋ ದಕ್ಕೆ ಇದೆಯಾದರೂ ಏನು? ಊರಿಗೇ ಬೆಂಕಿ ಬಿದ್ದು ಮನೆ ಮಠ ಉರಿದ್ಮೇಲೆ ಏನು ಉಳಿಯಿತೂಂತ ಹೇಳೋಕೆ ಹೆಚ್ಚು ಹೊತ್ತು ಬೇಕೆ? ಸರಪಳಿ ಹಾಕಿ ಬಿಗಿದ ಮನುಷ್ಯನನ್ನು ಕೆಳಕ್ಕೆ ಕೆಡವೋದು ಮಹಾ ಕೆಲಸವೆ? ಬಾಯಿಗೆ ಬಟ್ಟೆ ತುರುಕಿ, ಹುತ್ತರಿ ಹಾಡು ಹೇಳು ಅಂದರೆ-"