ಪುಟ:Kalyaand-asvaami.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಕೋಡಗಿನ ಜನರ ಬಾಯಿಗಳಿಗೆಲ್ಲ ಬ್ರಿಟಿಷರು ಬಟ್ಟೆ ತುರುಕಿದರು; ಬಳಿಕ ಬಳಿಯಲ್ಲೆ ನಿಂತು, "ನಾವು ನಿಮ್ಮ ಮಿತ್ರರು. ನಿಮಗೆ ಹಾಡುವ ಸ್ವಾತಂತ್ರ್ಯ ನೀಡಿದೇವೆ. ನೀವು ಹಾಡಬಹುದು!" ಎಂದರು. ಸ್ವರ ಹೊರಟಿತೋ ಇಲ್ಲವೋ; ಹೊರಗಿನವರಿಗೆ ಅದು ಕೇಳಿಸಿತೋ ಇಲ್ಲವೋ.... ಬಾಳೊ ಬಾಳೊ ಚಂದಾದಿ ಪುತ್ತರಿರ ಚೊಲ್ಲಾಲೆ ನಾಲ್ ಮೂಂದ್ ಪಾಡನ ಆಲ್ಲತೊಂದು ಅಲ್ಲಲ.... ಯಾವ ಸುಗ್ಗಿಯ ಸಂಭ್ರಮ? ಯಾವ ಹುತ್ತರಿಯ ಹಾಡು? ಅರಸುಮನೆತನಕ್ಕೆ ಸಂಬಂಧಿಸಿದ ಪ್ರತಿಯೊಬ್ಬರನ್ನೂ ಬಂಧಿಸಿ ಒಯ್ದರು, ಮೈಸೂರಿಗೆ- ಬೆಂಗಳೂರಿಗೆ. ಜನರನ್ನು ಬಂಡಾಯಕ್ಕೆಂದು ಅಣಿಗೊಳಿಸುತಿದ್ದ ಜಂಗಮ ವೀರ ಬ್ರಿಟಿಷರಿಗೆ ಸೆರೆಸಿಕ್ಕಿದ... ಕೊಡಗು ಸೇನೆಯನ್ನೆ ವಿಸರ್ಜಿಸುವ ಯೋಜನೆ ಲೀಹಾರ್ಡಿಗಿತ್ತು. ಆದರೆ, ಆ ಯೋಧರನ್ನೆಲ್ಲ ಅವರವರ ಊರುಗಳಿಗೆ, ನಾನಾ ಕಡೆಗಳಿಗೆ,ಹೋಗಲು ಬಿಡುವುದು ಸಾಧ್ಯವಿತ್ತೆ? ಅಂತಹ ವರ್ತನೆಯೆಂದರೆ ಆಪಾಯಕ್ಕೆ ಆಹ್ವಾನ.... ಹೀಗೆ, ಸಮಸ್ಯೆಯ ಎಲ್ಲ ಮುಖಗಳನ್ನೂ ಪರಿಶೀಲಿಸಿದ ಬಳಿಕ ಲೀಹಾರ್ಡಿ, ಸೈನ್ಯದ ವಿವಿಧ ತುಕ್ಕಡಿಗಳನ್ನು ಮಡಿಕೇರಿಯಲ್ಲಿಯೇ ಇರಿಸಿ ಕೊಂಡ. ಆದರೊ ಆತನಿಗೆನಿಸುತಿತ್ತು: "ನಾನು ಕುಳಿತಿರುವುದು ಜ್ವಾಲಾಮುಖಿಯ ಮೇಲೆಯೇ ಹೊಗೆ ಯಾಡುತ್ತಿರುವ ಆಗ್ನಿ ಪರ್ವತ, ಮಡಿಕೇರಿಯ ಈ ಬೆಟ್ಟ." ಜನರೊಡನೆ ಲೀಹಾರ್ಡಿಗೆದ್ದ ಕೊಂಡಿ. ವಿನೀತ, ಕಿಂಕರ ಬೋಪು ದಿವಾನ. ಈ ದಿವಾನನ ಸ್ನೇಹಿತರು.... ಸಂಬಂಧಿಕರಲ್ಲಿ ಹಲವರು, ಆಳುವವರ ನಡೆಗೋಲುಗಳು. ಊರೂರುಗಳನ್ನು ಬಿಗಿಯಿತು ಬೇಹುಗಾರರ ಬಲೆ.