ಪುಟ:Kalyaand-asvaami.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಟ್ಟಿನಲ್ಲಿ, ಸಾರಿಗೆ ಸಂಪರ್ಕಗಳಿದ್ದಲ್ಲಿ ಮಾತ್ರ ಆಂಗ್ಲರ ಆಳ್ವಿಕೆ, ದುರ್ಗಮವಾದ ಕುಗ್ರಾಮಗಳು, ದಟ್ಟಡವಿ ಬೆಟ್ಟ ತಪ್ಪಲುಗಳು, ಪರಕೀಯರ ಹೊಲಸು ಸ್ಪರ್ಶದಿಂದ ಅಪವಿತ್ರವಾಗದೆಯೆ ಉಳಿದವು.

ಆ ಪವಿತ್ರ ಪ್ರದೇಶಗಳೇ ನೂರಾರು ಸ್ವಾತಂತ್ರ್ಯವೀರರಿಗೆ ಆಶ್ರಯ ನೀಡಿದುವು.

ವೀರರಾಜ ಕಾಶಿ ಸೇರಿದ, ನೆರವಿಗೆ ಬರುವ ಧೀರರು ಇರಲಿಲ್ಲ, ಎಂದಲ್ಲ. ಆದರೆ ಅವರೆಲ್ಲ ಕಂಗೆಟ್ಟಿದ್ದರು. ಕಣ್ಣೀರಿನ ಕಥೆ ಕೊಡಗಿನದೊಂದೇ ಏನು? ಎಲ್ಲ ಕಡೆಗಳಲ್ಲೂ ಅದೇ ರಾಗ, ಅದೇ ಪಲ್ಲವಿ.

"ನೀವು ತಾಳ್ಮೆಯಿಂದಿರಿ. ವ್ಯಾಪಾರಕ್ಕೆಂದು ನಾವೇ ಬರಮಾಡಿ ಕೊಂಡ ಧೂರ್ತ, ಇಲ್ಲಿಯೇ ಬೀಡು ಬಿಟ್ಟ ರಾಜ್ಯ ರಾಜ್ಯಗಳನ್ನೆ ಕೊಳ್ಳುತೆದ್ದಾನೆ. ನಾವೆಲ್ಲ ಒಂದಾಗಬೇಕು ಈಗ, ಸಮಯ ನೋಡಿಕೊಂಡು ಏಟು ಬಿಗಿಯಬೇಕು."

“ ಏಟು ಹತ್ತು ಕಣಗಳಿಂದ, ಹತ್ತು ಬಾಹುಗಳಿಂದ, ದಾರ ಬಿಚ್ಚಿದ ಅವರ ಗೂಡಾರ, ಗಾಳಿಯಲ್ಲಿ ಚಿಂದಿ ಚಿಂದಿಯಾಗಿ ಹ್ಯಾಗಿ ಹಾರಬೇಕು ಅಂತೀರಿ!"

"ಎಷ್ಟೊಂದು ಜನ ದ್ರೋಹಿಗಳು ನಮ್ಮಲ್ಲೇ! ಥೂ!"

"ಒಗ್ಗಟ್ಟು! ಅದೊಂದೇ ಭಾರತೀಯರ ಬೀಜ ಮಂತ್ರವಾಗಬೇಕು. ನಮ್ಮೆಲ್ಲ ಶಕ್ತಿಯನ್ನು ಒಂದುಗೂಡಿಸುವುದು ಸಾಧ್ಯವಾದರೆ ಈಗಲೇ ಈ ಕ್ಷಣದಲ್ಲೇ...”

“ನಮ್ಮ ಯಾದವೀಕಲಹದಿ೦ದಲೇ ಈ ಗತಿ ಒದಗಿತು ನಮಗೆ!"

...ವೀರರಾಜ ತನ್ನ ಆಪ್ತರಿಗೆ ಸುದ್ದಿ ಕಳುಹಿಸಿದ. ಅದನ್ನು ಹೊತ್ತ ದೂತ ತಿಂಗಳುಗಟ್ಟಲೆಯ ಪ್ರವಾಸದ ಬಳಿಕ ಊರು ಸೇರಿದ.

ಅರಸನ ಆ ಬರೆವಣಿಗೆಯಲ್ಲಿದ್ದ ಮುಖ್ಯಾಂಶವಿಷ್ಟೆ:

"ನೀವು ಧೈರ್ಯದಿಂದಿರಬೇಕು. ತಾಳ್ಮೆಯಿಂದಿರಬೇಕು. ಎಲ್ಲ ವಿಷಯಗಳಿಗೂ ಬರೆಯಿರಿ, ಬರೆದು ತಿಳಿಸಿರಿ,”

ಏನೆಂದು ಬರೆಯುವುದು? - ಬರೆದು ತಿಳಿಸುವುದು? ಬೇಸಗೆ, ಮಳೆ, ಚಳಿ - ಒಂದಾದ ಮೇಲೊಂದು ಬಂದು ಹೋಗುತ್ತಿವೆಯೆಂಥೆ?

ಹೇಮಂತನನ್ನು ಹಿಂಬಾಲಿಸುವ ವಸಂತ...