ಪುಟ:Kalyaand-asvaami.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೋಮಯ್ಯನೋರು ಊರಾಲ್ಲಿವಾರಾ ?”

“ಹೊಂ. ಮೊನ್ನೆ ದಿವಸ ಹಳ್ಳಿಯ ಮುಖ್ಯಸ್ಥರೆಲಾ ಇಲ್ಲಿಗೆ ಬಂದಿದ್ರು," ಎಂದು ಗಿರಿಜವ್ವ ಉತ್ತರವಿತ್ತಳು.

ಮಹತ್ವದ ಘಟ್ಟನೆ ఇల్లి ఆగిದೆ ಎನ್ನುವಂತೆ ರಾಮಗೌಡನನ್ನೊಮ್ಮ ನೋಡಿ, ಮಾಚಯ್ಯನೆಂದ:

"ಸರಿ ನಾವು ಅವರಲ್ಲಿಗೆ ಹೋಗ್ತೀವಿ" ಬಂದವರನ್ನು ಊಟ್ಟಕ್ಕೆ ಇಲ್ಲಿಯೇ ಏಳಲು ಹೇಳಬೇಕು ಎಂದಿತು ಗಿರಿಜೆಯ ಗೃಹಿಣಿ ಮನಸ್ಸು. ಅತ್ತೆಯನ್ನು ಕೇಳಬೇಕೆನ್ನುವಷ್ಟರಲ್ಲಿ ಗಂಗವ್ವ ತಾನಾಗಿಯೇ ನುಡಿದಳು

"ಯಾಕಪ್ಪಾ, ಇಲ್ಲಿಯೇ ವಸ್ತಿ ಮಾಡುವಿರಂತೆ."

  • ಇರಲಿ ತಾಯಿ, ವಸ್ತಿಗೇನು? ಅಣ್ಣ ವಾಪಸಾಗೂಸ್ಲೆ ಇಲ್ಲಿಗೇ ಬಂದ್ಬಿಡ್ತಿನಿ ಅಗದಾ ?’ ಅವರಿಬ್ಬರೂ ಕಾರ್ಯರ್ಥವಾಗಿಯೆ ಬಂದಿದರೆಂಬುದನ್ನು ಗಮನಿಸಿದ

ಗಂಗವ್ವನೆಂದಳು :

... "ನಿಮ್ಮಿಷ್ಟ.”

ಮಗನನ್ನು ಕುರಿತಾದ ಯೋಚನೆ ಅಕೆಯಿಂದ ಇನ್ನೊ ಒಂದು ಪ್ರಶ್ನೆ ಕೇಳಿಸಿತು :

ಎನಪ್ಪಾ, ಘಟ್ಟದ ಕೆಳಗಿನ ಸುದ್ದಿ?

ಮಾಚಯ್ಯ ನಸುನಕ್ಕು ನುಡಿದ

"ಭಾರೀ ಸುದ್ದೀನೆ ತಾಯಿ ಎಲ್ರೊ ಅಣ್ಣಾವರು ಬಯೋದನ್ನೇ ಕಾದಿದಾರೆ"

ಅದನ್ನು ಕೇಳಿ, ಅಭಿಮಾನದ ಜತೆಯಲ್ಲೇ ಅಳುಕಿನ ಭಾವ - ಆ ಅತ್ತೆ ಸೊಸೆ ಇಬ್ಬರಿಗೂ. ఆ ದಿನ ಮನೆಯ ಎದುರು ನಡೆದ ಸಭೆಯಲ್ಲಿ ತನ್ನ ಬಿದ್ದುದನ್ನೆಲ್ಲ ಅವರಿಗೆ ತಿಳಿಸಬೇಕೆಂದು ಗಂಗವ್ವನಿಗೆ ಬಯಕೆಯಾಯಿತು. ಅಷ್ಟರಲ್ಲೇ, ಮಾಚಯ್ಯ ಮಗನ ಜತೆಯಲ್ಲೇ ಇದ್ದವನೆಂಬುದೂ ಅಕೆಯ ನೆನಪಿಗೆ ಬಂತು. ಮಗನೊ ಅತನ ಸ್ನೇಹಿತರೊ ಕುದುರೆ ಸವಾರರಾಗಿ ಬಂದಿದ್ದರು. ಈತ ಇಬ್ಬರು?

"ಅಷ್ಟು ದೊರದಿಂದ ನೀವು ನಡಕೊಂಡೇ ಬಂದ್ರೇನಪ್ಪಾ.?: