ಪುಟ:Kalyaand-asvaami.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಲೊಡೆಯಿತು. ಒಂದು ಕ್ಷಣ ಅಲ್ಲಿ ನಿಂತು, ಯಾವ ದಿಕ್ಕಿಗೆ ತಿರುಗಬೇಕೆಂಬುದನ್ನು ಮಾಚಯ್ಯ ನೆನಸಿಗೆ ತಂದುಕೊಂಡ ಬಲಿಕ, ಅವರು ಮುಂದುವರಿದರು. ನಡೆಯುತಿದ್ದಂತೆ ಮಾಚಯ್ಯನೆಂದ: " ಪುಟ್ಟಬಸವರಾಜರ ತಾಯಿ ತುಂಬಾ ಕಷ್ಟ ಅನುಭವಿಸಿದ ಜೀವ. ಅವರು ಬಸಿರಲ್ಲಿದ್ದಾಗಲೇ...." ಆಸಕ್ತಿಯಿಂದ ರಾಮಗೌಡ ಆ ಕತೆಗೆ ಕಿವಿಗೊಟ್ಟ. ಆ ತಾಯಿಯ ವಿಷಯದಲ್ಲೂ ಮಗನ ವಿಷಯದಲ್ಲೂ ಆತನ ಗೌರವ ಹೆಚ್ಚಿತು. ಮಾಚಯ್ಯ ಮಾತು ನಿಲ್ಲಿಸಿ, 'ಹೂಂ'ಗುಟ್ಟುವುದು ಅನಗತ್ಯವಾದಾಗ, ರಾಮಗೌಡನೆಂದ: " ಇಲ್ಲಿಗೆ ಬಂದ್ಮೇಲಂತೂ ನಮ್ಮ ಕೆಲಸ ಗಂಡಾಗ್ತದೇಂತ ನನ್ನ ನಂಬಿಕೆ ಹೆಚ್ಚಿದೆ ಮಾಚಯ್ಯನವರೆ." " ಪುಟ್ಟಬಸನರಾಜರನ್ನು ಮೊದಲು ಭೇಟಿ ಮಾಡಿ. ಆಮೇಲೆ ಹೇಳಿ...." ಸ್ವಲ್ಪ ದೂರ ಮೌನವಾಗಿ ನಡೆದ ರಾಮಗೌಡ ಹೇಳಿದ: " ನಾನಾಗಲೀ ನಮ್ಮ ಜನರಾಗಲೀ ಈವರೆಗೆ ಯುದ್ಧ ಮಾಡಿದವರೇ ಅಲ್ಲ. ನಮ್ಮಗೆ ಯುದ್ಧದ ಅಗತ್ಯ ಇದ್ದರಲ್ಲವೊ? ಹೊಲದಲ್ಲಿ ಬೇಸಾಯ ಮಾಡಿ ನಮ್ಮಷ್ಟಕ್ಕೆ ನಾವು ಇರುವವರು. ಆ ಸ್ವತಂತ್ರ್ಯಕ್ಕೆ ಸಂಚಕಾರ ಬಂದಾಗ ಹ್ಯಾಗೆ ಸುಮ್ಮನಿರೋಕಾಗ್ತದೆ ಹೇಳಿ? ಗೌಡರೆಲ್ಲಾ ಪುಕ್ಕಲು ಜನರೂಂತ ಆ ಕುಂಸಣಿಯವನು ಭಾಏಸಿದ್ದಾನೋ ಏನೋ. ಅದು ಈಗ ಇತ್ಯರ್ಥವಾಗೇ ತೀರ್ಬೇಕು. ನಮ್ಮ ಗದ್ದೆಯಲ್ಲಿ ಬೆಳೆಯೋದು ನಮ್ಮ ಸೊತ್ತೇ. ಅದನ್ನು ಇನ್ನೊಬ್ಬರಿಗೆ ನಾವು ಯಾಕೆ ಕೊಟ್ಟೀವು....?" ರಾಮಗೌಡನ ಬಾಯಿಂದ ಆ ಮಾತುಗಳನ್ನು ಮಾಚಯ್ಯ ಹಿಂದೆಯೂ ಕೇಳಿದ್ದ. ಮಂತ್ರಶಕ್ತಿಯ ಪ್ರಯೋಗವಾದಂತ, ಕೇಳುವ ಜನರ ಮೇಲೆ ಆ ಪದಗಳ ಪ್ರಭಾವ ಬೀರುತ್ತಿದ್ದುವು. ಒಂದೇ ಸೂತ್ರದಿಂದ ಶ್ರೋತೃಗಳ ನ್ನೆಲ್ಲ ಬಿಗಿಯುವ ಸಾಮರ್ಥ್ಯವಿತ್ತು ಆತನ ವಾಕ್ ಸರಣಿಗೆ. ಸುಳ್ಯದಲ್ಲಿ ರಾಮಗೌಡ ಅಂದಿದ್ದ: 'ನಿಮಗೆ ಎಷ್ಟು ಜನ ಬೇಕು ಮಾಚಯ್ಯನವರೇ? ಸಾವಿರವೆ?