ಪುಟ:Kalyaand-asvaami.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಹೂಂ ತಾಯಿ. ಇಲ್ಲಿಗೆ ಬರೋ ವಿಷಯ ಡಂಗುರವಾಗ್ಟಾರದೂಂತ ಕುದುರೆಗಳ್ನ ತರ್ಲಿಲ್ಲ." ಅಪಾಯವೂ ತುಂಬಿದ್ದ ಭಾರೀ ಸುದ್ದಿಯೇ. ಉಕ್ಕುತ್ತಿದ್ದ ಭೀತಿಯನ್ನು ಹಿಂದಕ್ಕೆ ಅದುಮುತ್ತ ಗಂಗವ್ವನೆಂದಳು: " ಮಗನ ಜತೇಲಿ ಮೂವರು ಸ್ನೇಹಿತರೂ ಬಂದವರೆ." " ನುಂಜಯ್ಯನೋರು, ಚಿಟ್ನ, ಕರ್ತು ಇರಬೇಕು. ಅಲ್ಲವಾ?" "ಹೂಂ. ಅವರೇನೇ." ' ಮೂರು ವಾರಗಳ ಹಿಂದೆ ನಾವೆಲ್ಲಾ ಕೂಡಿದ್ವಿ ತಾಯಿ." " ಹಾಗಾ?" ರಾಮಗೌಡ, ಮುಖದ ಮೇಲೆ ಮತ್ತೆ ಅಣಿಮುತ್ತುಗಳಾಗಿ ಮೂಡಿದ್ದ ಬೆವರನ್ನು ಅಂಗೈಯಿಂದಲೆ ಒರೆಸಿ, ಹೆಂಗಸರ ಕಡೆಗೊಮ್ಮೆ ನೋಡಿ, ಇಳಿ ಧ್ವನಿಯಲ್ಲಿ ಮಾಚಯ್ಯನಿಗೆ ಹೇಳಿದ: " ಸೋಮಯ್ಯನವರ ಮನೆ ಇಲ್ಲಿಂದ ಎಷ್ಟುದೂರ?" " ಒಂದು ಹರದಾರಿ ಆಗಬಹುದು." " ಅಷ್ಟೆಯೊ? ಹಾಗಾದರೆ ನಡೆಯಿರಿ. ಈಗಲೆ ಹೋಗಿಬಿಡುವ." ಹೊರಡಲೆಂದು ಅವರು ಏಳುತಿದ್ದುದನ್ನು ಕಂಡು ಗಂಗವ್ವ ಹೇಳಿದಳು: " ಪುಟ್ಟಬಸ್ಯ ವಾಪಸಾದ್ಕೂಡ್ಲೆ ನೀವು ಬಂದ ವಿಷಯ ಹೇಳ್ತೀನಿ. ಆಮೇಕೆ ಇಬ್ಬರೂ ಊಟಕ್ಕೆ ಇಲ್ಲಿಗೇ ಬಂದ್ಬಿಡಿ." " ಊಟಕ್ಕೇನು ತಾಯಿ? ಖಂಡಿತ ಬರ್ತೀವಿ." ....ಹೊಲಗಳನ್ನು ಅವರು ದಾಟುತಿದ್ದಂತೆ ಮಾಚಯ್ಯ ಹೇಳಿದ: " ಮನೆಗೆ ಬಂದೋರಿಗೆ ಊಟ ಹಾಕೋದರ ಹೊರತು ಬೇರೆ ಯೋಚನೆಯೇ ಇಲ್ಲ ಹೆಂಗಸರಿಗೆ." ರಾಮಗೌಡ ಉತ್ತರವಿತ್ತ: " ಎಲ್ಲಾ ಕಡೆಯಲ್ಲೂ ಅಷ್ಟೇ. ಊರಿನಲ್ಲಿ ನಮ್ಮ ತಾಯಿಯನ್ನೇ ನೀವು ನೋಡಿದಿರಲ್ಲ? ನನ್ನ ಸ್ನೇಹಿತರು ಅಂದರಾಯ್ತು, ಮಕ್ಕಳ ಹಾಗೇ ಕಾಣ್ತಾಳೆ." ಕಾಡಿನ ಕಾಲುಹಾದಿ ಬಂತು. ನಾಲ್ಕು ಮಾರು ದೂರದಲ್ಲೇ ಅದು