ಪುಟ:Kalyaand-asvaami.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ ಎರಡು ಸಾವಿರವೆ? ಮೂರೆ?ಉಳುವವರ ಕುಲಕ್ಕೆ ಅಳಿವಿಲ್ಲ,ಭೂಮಿ ತಾಯಿ ಬಂಜೆಯಲ್ಲ.ಒಂದು ತಲೆ ಕಡಿದು ಬಿದ್ದರೆ ಅದರ ಬದಲು ನೂರು ತಲೆಗಳು ಚಿಗುರುತವೆ!' ಎಣೆ ಇಲ್ಲದ ಅತ್ಯ ವಿಶ್ವಾಸವಿದ್ದ,ತನ್ನ ಬಾಹುಗಳಲ್ಲಿ ತನಗೇ ನಂಬಿಕೆ ಇದ್ದ ಧೀರ ಮಾತ್ರ ಹಾಗೆ ಮಾತನಾಡುವುದು ಸಾಧ್ಯವಿತ್ತು. ತರಗತಿಗಳ ಕೆಳಗಿಂದ ಓತಿ ಹರಿಯಿತು. ಬಾಲ್ಯದಿಂದಲೇ ಒಂದನ್ನೊಂದು ಅಫ್ಪುಹಿಡಿದೇ ಬೆಳೆದ, ಮುದಿಯಾಗಿದ್ದ ಎರಡು ಮರಗಳು ಕಿರ್ ಕಿರೆಂದುವು-ಕಾಡಿನೊಳಗಿಂದ ಓಡಿ ಬಂದ ಗಾಳಿಯ ಸೆರಗು ತಮಗೆ ತಗುಲಿದಾಗ.ಹತ್ತಿರದಲ್ಲೆಲ್ಲೋ ಜುಳುಜುಳೆನ್ನುತಿತ್ತು ಕಿರುತೊರೆ. ಆದರೆ ಮಾಚಯ್ಯ ಈ ನಾದಲೋಕದಲ್ಲಿ ಇರಲೇ ಇಲ್ಲ.ಆತನ ಮೆದುಳಿನಲ್ಲಿ ಗುಂಯ್ ಗುಡುತ್ತಿದ್ದುದು ರಾಮಗೌಡ ಬಳಸಿದ ಪದ ಗುಂಫನವೇ. ಮಾಚಯ್ಯ ಮೆಲ್ಲಮೆಲ್ಲನೆ ನುಡಿದ: "ನನಗೆ ಬುದ್ಧಿ ಬಂದಾಗಿನಿಂದ ನಾನು ಯುದ್ಧ ಮಾಡ್ತಾನೇ ಇದೇನೆ ಗೌದರೆ.ಆ ಯುದ್ಧಗಳಿಗೆಲ್ಲಾ ಅರ್ಥವಿತ್ತೋ ಇಲ್ಲವೊ.ಹೊಡಿಯೋದು ಕಡಿಯೋದೊಂದೇ ನನಗೆ ಗೊತ್ತಿರೋ ಕಸಬು ನೋಡಿ.ಆದರೆ ಈ ಸಲ ಹಾಗಲ್ಲ.ಈವರೆಗೂ ಇರದಿದ್ದ ಅನುಭವ ಈಗ ಆಗ್ತಾ ಇದೆ. ನಾನು ಹುಟ್ಟಬೆಳೆದದ್ದು ವ್ಯರ್ಥವಲ್ಲ,ಈ ಬದುಕಿಗೆ ಒಂದು ಅರ್ಥವಿದೆ-ಅನಿಸ್ತಿದೆ.ಪವಿತ್ರಯುದ್ಧ,ಧರ್ಮಯುದ್ಧ,ಅಂತ ಹೇಳೋದು ಇದಕ್ಕೇ ಅಲ್ಲವಾ?ಇಂಥಾ ಯುದ್ಧದಲ್ಲಿ ಸಾಯಬೇಕಾಗಿ ಬಂದರೂ ಸಂತೋಷದಿಂದ ನಾನು ಪ್ರಾಣ ಬಿಡ್ತೀನಿ." ರಾಮಗೌಡನ ದೃಷ್ಟಿ ಬಳಿಯಲ್ಲಿದ್ದ ಸಹಯೋಧನಿಗಾಗಿ ತುಂಬು ಒಲವನ್ನು ಸೂಸಿತು ಮಾತನಾಡಬೇಕೆಂದು ಅವನಿಗೆ ತೋರಲಿಲ್ಲ. ...ಅತ್ತೆ ಸೊಸೆ ನಿಂತಲ್ಲೇ ನಿಂತಿದ್ದರು ಬಹಳ ಹೊತ್ತು,ಹೊಲಗಳ ಏರಿ ಕಾಡಿನ ಅಂಚನ್ನು ತಲಪುವ ಜಾಗದ ವರಗೂ ದೃಷ್ಟಿ ಹರಿಸುತ್ತಾ. ಗಂಗವ್ವಸಿಗೇನೂ ಕಾಣಿಸುತ್ತಿರಲಿಲ್ಲ.ಆದರೂ ಅಭ್ಯಾಸ ಬಲದಿಂದ ಕಣ್ಣುಗಳು ಅತ್ತ ಸರಿಯುತ್ತಿದ್ದುವು. "ಇಬ್ಬರೂ ಒಂಟ್ಹೋದ್ರಾ?"ಎಂದು ಆಕೆ ಸೊಸೆಯನ್ನು ಕೇಳಿದಳು. "ಹೂಂ ಅತ್ತೆಮ್ಮ,"ಎಂದಳು ಗಿರಿಜಾ.