ತಾನು ಬಂದ ಉದ್ದೇಶವನ್ನು ರಾಮಗೌಡ ತಿಳಿಸಿದಾಗ, ಪುಟ್ಟಬಸವ ಒಮ್ಮೆಲೆ ಉತ್ತರವೀಯಲ್ಲಿಲ್ಲ. ಆತನ ಸ್ನೇಹಿತರೂ ಯೋಚಿಸುತ್ತ ಮೌನವಾಗಿ ಕುಳಿತರು. ಇವರು ಅಣಕುತ್ತಿರಬಹುದೆಂದು ಭಾವಿಸಿದ ರಾಮಗೌಡನಿಗೆ ಕಸಿವಿಸಿಯಾಯಿತು. "ಯಾಕೆ ಸುಮ್ಮನಿದ್ದೀರಲ್ಲ? ಇದು ಅಸಾಧ್ಯ ಎಂತಲೋ?" ಪುಟ್ಟಬಸವನ ಕಣ್ಣುಗಳು ಮಿನುಗಿದುವು. ತುಟಿಗಳ ಮೇಲೆ ಮೆಲ್ಲನೆ ಮುಗುಳುನಗೆ ಮೂಡಿತು. "ನಿಮ್ಮದು ತಪ್ಪು ಗ್ರಹಿಕೆ ಗೌಡರೆ. ಈವರೆಗೂ ನಮ್ಮ ಕಣ್ಣಮುಂದೆ ಇದ್ದದ್ದು ಕೊಡಗು ಮಾತ್ರ. ಈಗ, ದೊಡ್ಡ ಚೌಕಟ್ಟಿನೊಳಗಿರೋ ಬೇರೆ ಚಿತ್ರವನ್ನ ಕಲ್ಪಿಸಿಕೋತಾ ಇದೇನೆ." ರಾಮಗೌಡನ ಮುಖ ಅರಳಿತು. ಆತನೆಂದ: "ಮಾಚಯ್ಯನವರನ್ನು ಕೇಳಿ. ನಮ್ಮ ಜನರಲೆಲ್ಲಾ ಅಶಾಂತಿ ಹೊಗೆಯಾಡ್ತಿದೆ . ಒಂದೇ ಒಂದು ಕಿಡಿ ಸಾಕು. ಭಗ್ ಅಂತ ಬೆಂಕಿ ಹತ್ತಿಕೊಳ್ಳೋದು ಖಂಡಿತ. ಒಬ್ಬ ನಾಯಕ ಬಂದು, ಈ ದಾರಿ - ಹೀಗೆ - ಅಂತ ಹೇಳಿದರೆ ಸಾಕು. ಜನರು ಮುಂದಕ್ಕೆನುಗ್ತಾರೆ." ....ಅದು ನಿಜವಾದ ವರದಿ ಎನ್ನುವುದಕ್ಕೆ ಸಾಕಷ್ಟು ಆಧಾರಗಳಿದ್ದುವು. ಅಮರ ಸುಳ್ಯವನ್ನೀಗ ಕನ್ನಡ ಜಿಲ್ಲೆಗೆ ಸೇರಿಸಿದ್ದರು. ಮೊದಲಾದರ ಅಮರ ಸುಳ್ಯದಲ್ಲಿ ಆಚರಣೆಯಲ್ಲಿದ್ದುದು ಲಿಂಗರಾಜನ ಶಿಸ್ತು, ಲಿಂಗ ರಾಜನ ಕೋಲು. ರೈತರು ರಾಜರಿಗೆ ಒಪ್ಪಿಸುತಿದ್ದುದು ಧಾನ್ಯ ರೂಪದ ಕಂದಾಯ. ಆದರೆ ಈಗ ಕುಂಪಣಿ ಸರಕಾರ ಕಂದಾಯವನ್ನು ಹಣದ ರೂಪದಲ್ಲಿ ಕೇಳಿತ್ತು. ಹಣವನ್ನು ಒದಗಿಸಲು ಟಂಕಸಾಲೆ ಇತ್ತೆ ಜನರಲ್ಲಿ? ಅವರಿಗಿದ್ದ ಹಾದಿಯೊಂದೇ - ಸಾಹುಕಾರರಿಗೆ ಧಾನ್ಯವನ್ನು ಮಾರುವುದು. ಸುಲಿಯುವ ಅವಕಾಶ ದೊರೆತಾಗ ಸುಮ್ಮನಿರುವರೆ ವರ್ತಕರು ? ಹೇರಳ ಧಾನ್ಯಕ್ಕೆ ಅವರು ನೀಡಿದುದು ಅಲ್ಪವೇ ಬೆಲೆ. ಬೆಳೆಸಿದ ಭತ್ತವೆಲ್ಲ,ಅಕ್ಕಿ
ಪುಟ:Kalyaand-asvaami.pdf/೮೪
ಗೋಚರ