ಪುಟ:Kalyaand-asvaami.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ "ಹಾಗೆ ಕೇಳಿದೇಂತ ತಪ್ಪು ಭಾವಿಸ್ಬೇಡಿ ಗೌಡರೆ. ಪರಿಸ್ಥಿತಿ ಸ್ಪಷ್ಟವಾದಷ್ಟೂ ಕಾರ್ಯಾಚರಣೆ ಸುಲಭವಾಗ್ತದೆ. ಹೌದೋ ಅಲ್ಲವೋ?" ಆತ್ಮೀಯವಾಗಿದ್ದ ಆ ಸ್ವರ ಕಿವಿಗೆ ಬಿದ್ದಾಗ ಗೌಡ ಪ್ರಸನ್ನನಾದ. ನಂಜಯ್ಯ ಕೇಳಿದ: "ಸುಮಾರು ಯಾವತ್ತು ಶುರು ಮಾಡ್ಬೇಕೂಂತ ನಿಮ್ಮ ಅಭಿಪ್ರಾಯ?" "ಆದಷ್ಟು ಬೇಗನೆ. ತಡಮಾಡಬೇಲಾದ್ದೇ ಇಲ್ಲ. ಎಲ್ಲಾ ತಯಾರಾಗಿದೆ ನೋಡಿ." ಚೆಟ್ಟ ಬಾಯಿತೆರೆದ: "ನಮ್ಮಲ್ಲಿ ಶಸ್ತ್ರಾಸ್ತ್ರ ಏನೇನಿದೆ, ಲೆಕ್ಕ ಹಾಕಿದೀರಾ?" ರಾಮಗೌದಡನೆಂದ: "ಈ ಪ್ರಶ್ನೆಯ ಅರ್ಥವೂ ನನಗೆ ಗೊತ್ತಿದೆ ತಮ್ಮಾ. ಅವರಲ್ಲಿ ಫಿರಂಗಿಗಳಿವೆ,ನಮ್ಮಲ್ಲಿಲ್ಲ- ಎಂತ ಅಲ್ಲವೋ ನೀವು ಹೇಳೋದು? ನೋಡಿಕೊಳ್ಳೋಣ! ಸದ್ಯಕ್ಕೆ ನಮ್ಮಲಿ ಕುದುರೆಗಳು ಕೂಡಾ ಹೆಚ್ಚೆಲ್ಲ. ಕಾಲಾಳು ಪಡೆಯೇ. ಎದಷ್ಟು ಜನಕ್ಕೆ ಕೋವಿ- ಖಡ್ಗ, ಉಳಿದವರಿಗೆ ಬಡಿಗೆದೊಣ್ಣೆ...." ನಂಜಯ್ಯ ಮಾತು ಸೇರಿಸಿದ: "ಶಸ್ತ್ರಾಸ್ತ್ರಕ್ಕೇನ್ರಿ! ವೈರಿಗಳ ಹತ್ತಿರ ಇದ್ದರೆ ನಮ್ಮಲ್ಲಿದ್ದ ಹಾಗೆಯೇ.ಒಂದೊಂದು ಯುದ್ದದಲ್ಲೂ ಸಂಪಾದಿಸ್ತಾ ಹೋಗ್ತೇವೆ!" "ಸರಿ ಹೇಳಿವಿರಿ!" ಎಂದ ರಾಮಗೌಡ.ಕದನವಿಶಾರದ ನಂಜಯ್ಯನ ವಿಷಯದಲ್ಲಿ ಗೌರವ ತಳೆಯುತ್ತಾ. ಮಾತು ಮತ್ತೆ ಅಮಅಸುಳ್ಯದ ಪರಿಸ್ಥಿತಿಯ ಕಡೆಗೆ ತಿರುಗಿತು. ರಾಮಗೌಡ ಕೇಳಿದ: "ಅಲ್ಲಾ, ಕೊಡಗಿನಲ್ಲಿ ದಿನಾವರು ಎಷ್ಟು ಜನ?" ನಂಜಯ್ಯ,ಗೌಡನನ್ನೇ ದಿಟ್ಡಿಸಿ ಹೇಳಿದ: "ನೀವು ಮಡಿಕೇರಿಗೆ ಯಾವತ್ತೂ ಬಂದಿಲ್ಲ, ಅಲ್ವೆ?" "ಇಲ್ಲ." "ಮುಖ್ಯವಾಗಿರೋ ದಿವಾನರು ಯಾವಾಗಲೂ ಒಬ್ಬರೇ. ಆದರೆ,