ಪುಟ:Kalyaand-asvaami.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ ಭಟನೆಯ ಉಸಿರು ಬಿಟ್ಟವರ ಬೆನ್ನಿನ ಮೇಲೆ ರಾಮಪ್ಪಯ್ಯನ ಬಂಟರು ಬರೆ ಎಳೆದರು. ಆತ್ಮರಕ್ಷಣೆಗೆಂದು ಕೈಎತ್ತಿದವರನ್ನು,ಹೆಡೆಮುರಿ ಕಟ್ಟಿ, ಧೊರೆಯ ಕಾಲಬುಡಕ್ಕೆ ತಂದೊಪ್ಪಿಸಿದರು. ಕಂಬಕ್ಕೊರಗಿಸಿ ನಿಲ್ಲಿಸಿ,ಹುರಿಹಗ್ಗದಿಂದ ಬಿಗಿದು, ಕುಟ್ಟಿದ ಮೆಣಸಿನ ಪುಡಿಯನ್ನು ಕಣ್ಣಿಗೆ ಎರಚಿದರು.ಮೀಸೆಗಳನ್ನು ಕಿತ್ತುಹಾಕಿದರು. ಅಸಹ್ಯ ಮಾತುಗಳಿಂದ ಮತ್ತೂ ಹೆಚ್ಚಿನ ನೋವು ಉಂಟು ಮಾಡಿದರು.

   ಅಟ್ಲೂರಿನಲ್ಲಿದ್ದ ಆತನ ಮನೆಯೇ--ಅಲ್ಲ ಅರಮನೆಯೇ--ಆ ಧೊರೆಯ ದುರ್ಗವಾಯಿತು."ಗುರುವ!" ಎಂದರೆ ಸಾಕು."ಉಳ್ಳಯ್ಯಾ!" ಎಂದು ಓಡಿಬರುತಿದ್ದ ಸಶಸ್ತ್ರ ಚಾರಕ. ಹಾಗೆಯೇ ತನಿಯ ತುಕ್ರ.... ಎಷ್ಟೊಂದು ಜನ!ಸುಬ್ಬಯ್ಯನಂತೂ ಚಿಗುರು ವೀಳೆಯದೆಲೆಗೆ ಸುಣ್ಣ  ಹಚ್ಚಿ ಕೊಡುವುದಕ್ಕೆಂದೇ ನೇಮಕಗೊಂಡಿದ್ದ.
   ನಾಳೆ ಏನಾಗುವುದೋ ಎಂದು ತತ್ತರಿಸುತಿದ್ದರೆ,ಧಿಮಾಕಿನಿಂದ ಆರ್ಭಟ ಅಟ್ಟಹಾಸಗಳನ್ನು ಮಾಡುತ್ತಾ ರಾಮಪ್ಪಯ್ಯ ಹೊತ್ತು ಕಳೆದ.
   ಅತ್ಯಂತ ಆಸಹನೀಯವಾಗಿ ಜನರಿಗೆ ಕಂಡುದು ಅಣಿಗೌಡನ ಪ್ರಕರಣ.
   ಅದು ತೋಳ ಕುರಿಅಮರಿಯ ನ್ಯಾಯ.
   'ನೀನಲ್ಲದಿದ್ದರೆ ನಿನ್ನಪ್ಪ ಇರಬೇಕು.ಬಿಟ್ಟುಕೊಡು ಆಸ್ತಿಯನ್ನು!' ಎಂದು ರಾಮಪ್ಪಯ್ಯ.
   ಅಣ್ಣಿಗೌಡ ಜಪ್ಪಯ್ಯ ಎನ್ನಲಿಲ್ಲ.ದಿಟ್ಟತನದಿಂದ ಆತನೆಂದ:
   'ಭೂಮಿತಾಯಿ ತನ್ನ ಸಂತಾನಕ್ಕೆಲ್ಲ ಸಾಕಾಗುವಷ್ಟು ಕೊಟ್ಟಿದ್ದಾಳೆ.ನಾನು ಮೈಬಗ್ಗಿಸಿ ಬೆವರು ಸುರಿಸಿ ಮಾಡಿದ್ದು ನನ್ನದು. ಅದು ನನ್ನ ಅನ್ನ. ಅದನ್ನು ಕಸಿದುಕೊಳೋದಕ್ಕೆ ನೀವು ಯಾರು?'
    ರಾಮಪ್ಪಯ್ಯ ಅಬ್ಬರಿಸಿದ:
    'ನಾನೆ? ನಾನು ಹತ್ತೂರ ಧೊರೆ! ಅಮರ ಪಡ್ನೂರು ಕಡಬ ಸುಳ್ಯಗಳಿಗೆಲ್ಲ ಯಾರೂಂತ ಕೇಳಿ ಬಲ್ಲೆ? ಹಾಕು ಮಗನೇ, ರುಜು ಹಾಕು! ಇಪತ್ತಿನಿಂದ ನಿನ್ನ ಯಾವತ್ತೂ ಆಸ್ತಿ ನನ್ನದು.'
    'ಹಾಕೋದಿಲ್ಲ. ನ್ಯಾಯ ಈ ಊರಲ್ಲಿ ಸತ್ತೇಹೋಯ್ತೋ?'
    'ಗುರುವ! ಲಗಾವ್!'