ಪುಟ:Kalyaand-asvaami.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಅಮರೆ ಸುಳ್ಯದಲ್ಲಿ ಕ್ಷೋಭೇಯ ಕಿಡಿItalic text


ಯದವರಲ್ಲ ಆಗತ್ಯ ಬಿದ್ವಾಗ ಒಂದಕ್ಕಿಂತ ಹೆಚ್ಚು ಹೆಸರು ಇಟ್ಟುಕಳ್ಳೋದರಲ್ಲಿ ಎನು ತಪ್ಪು? ಯಾರು ಎನ್ನುವುದು ತಿಳೀದೆ ಇಂಗ್ಲಿಷರು ಗಾವರಿ ಯಾಗ್ಬೇಕು. ಪ್ರಜೆಗಳ ದೃಪ್ಟಿಯಿಂದಲೂ ಅದು ಆಗತ್ಯನೇ. ಇದೆಲ್ಲಾ ಒಬ್ಬಿಬ್ಬರು ಸರದಾರರ ಆಟ ಎನ್ನುವ ಅಭವ್ರಾಯಕ್ಕೆ ಯಾಕೆ ಎಡೆ ಕೊಡ್ಬೇಕು? ಯೋಚಿಸಿ ನೋಡಿ....."

 ಮತ್ತೆಯೂ ಮೌನ ನೆಲೆಸಿತು.

ರಾಮಗೌಡನ ವಿಷಯದಲ್ಲಾಗಲೆ ಅದರಭಾವವನ್ನು ತಳೆದಿದ್ದ ನಂಜಯ್ಯ, ನಸುನಕ್ಕು, ಪುಟ್ಟಬಸವನನ್ನು ನೋಡುತ್ತ ಕೇಳಿದ: "ಬೇರೆ ಯಾವುದೂ ಹೆಸರಿಲ್ವಾ ನಿಮಗೆ?' "ನೀವೆಲ್ಲಾ ತಮಾಷೆ ಮಾಡ್ತಿದೀರೋ ಹ್ಯಾಗೆ?' ಎಂದ ಪುಟ್ಟ ಬಸವ ಸಿಟ್ಟಾಗುತ್ತಾ. " ಪುಣ್ಯಾತ್ಮ! ಅಗತ್ಯ ಬಿತ್ತೂಂತ ಸದಾಶಿವ ಕತ್ತೆ ಕಾಲು ಹಿಡಿದ ಆನ್ನೋದು ಕೇಳಿಲ್ಲಾ? ಆ ಇಂಗ್ಲಿಷರೋನು ತಾನು ವ್ಯಾಪಾರಕ್ಕೆ ಬಂದೋ ನೂಂತ ಸುಳ್ಳು ಹೇಳ್ಕೊಂಡೇ ಅಲ್ವಾ ಈ ದೇಶಕ್ಕೆ ಕಾಲಿಟ್ಟದ್ದು? ನೀವು ಸುಮ್ನಿರಿ ಪುಟ್ಟಬಸಪ್ಪನವರೆ. ರಾಮಗೌಡರು ತಿಳಿವಳಿಕೆಯಿಂದ್ಲೇ ಒಳ್ಳೇ ಮಾತು ಆಡಿದಾರೆ. ನಿಮಗೆ ನಾವೇ ಇನ್ನೊಂದು ನಾಮಕರಣ ಮಾಡ್ತೀವಿ," ಚಿಟ್ಟ-ಕತು‌‌‌‍ ಇಬ್ಬರಿಗೂ ನಗು ಬಂತು. ಪುಟ್ಟಬಸವನ ಸಿಟ್ಟುಗೊಂಡಿದ್ದ ಮುಖ ಶಿಥಿಲವಾಗಿ, ಮತ್ತೆ ಮಂದಹಾಸ ಮೂಡುವುದನ್ನೇ ಮಾಚಯ್ಯ ನಿರೀಕ್ಷೀಸಿದ. ರಾಮಗೌಡ, ತಾನಿನ್ನು ಗೆದ್ದಂತೆಯೇ ಎಂಬ ಮುಖಭಾವವನ್ನು ತೋಪ‌‌‌ಡಿಸಿದ. ಪುಟ್ಟಬಸವನ ಬಿಗಿದಿದ್ದ ತುಟಿಗಳು ಮತ್ತೆ ಆರಳಿದುವು. "ನಾನು ಸೋತುಹೋದೆ. ಆದರೆ ದಯವಿಟ್ಟು ಪೂತಿ‌‌‌ಯಾಗಿ ನನ್ನ ಮಾನ ಕಳೀಬೇಡಿ! ನನಗೆ ನಮ್ಮವರೇ ಇಟ್ಟಿರೋ ಇನ್ನೊಂದು ಹೆಸರಿದೆ. ಇದು ಸಾಕಾಗುತ್ತೋ ನೋಡಿ." "ಯಾವುದು?" ಎಂದ ನಂಜಯ್ಯ. "ನಾನು ಚಿಕ್ಕೋನಿದ್ದಾಗ ನಮ್ಮ ಸ್ವಾಮಿಯೋರು ಇಲ್ಲಿ ಗೆದಯಮಾಡಿಸಿದ್ರು. ನನ್ನನ್ನು ನೋಡಿ ಅವರು, 'ಕಲ್ಯಾಣಪ್ಪ ಇಲ್ಲಿ ಬಾ ಮಗೂ-' ಅಂದರು. 'ನನ್ನ ಹೆಸರು ಪುಟ್ಟಬಸ್ವಾಂತ'-ಎಂದೆ. 'ಇರಲಿ ಬಿಡಪ್ಪ.