ಪುಟ:Kalyaand-asvaami.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
== ಕಲ್ಯಾಣಸ್ವಾಮಿ ==

ಆಕಲ್ಯಾಣಸ್ವಾಮಿ ಕೃಪೆ ಇದ್ದಿದ್ರಿಂದ್ಲೇ ನೀನು ಹೀಗೆ ಬೆಳೀತಾ ಇದೀಯೆ' ಎಂದರು ಆಮೇಲೆ ನಮ್ಮಜ್ಜಿ ಇರೋ ವರೆಗೂ ಒಮ್ಮೊಮ್ಮೆ ನನ್ನನ್ನು ಕಲ್ಯಾಣಪ್ಪ ಅಂತ ಆಕೆ ಕರೆಯೋದಿತ್ತು," ರಾಮಗೌಡ ಥಟ್ಟನೆ ಕುಳಿತಲ್ಲಿಂದೆದ್ದ. ಯುವಕನ ಉತ್ಸಾಹದಿಂದ ಪುಟ್ಟಬಸವನೆಡೆಗೆ ಜಿಗಿದ. ಆತನ ಎರಡೂ ಕೈಗಳನ್ನೆತ್ತಿ ಆ ಅಂಗೈಗಳಲ್ಲಿತನ್ನ ಮುಖವಿರಿಸಿದ. ಎದೆ ಉದ್ವೇಗದಿಂದ ಏರಿ ಇಳಿಯಿತು. ಕಣ್ಣುಗಳಲ್ಲಿ ಕಂಬನಿ ತುಂಬಿತು. ಗಂಟಲಿನಿಂದ ಗೊಗ್ಗರ ಧ್ದನಿ ಹೊರಟಿತು; "ಕಲ್ಯಾಣಸ್ವಾಮಿ! ಕಲ್ಯಾಣಸ್ವಾಮಿ!" ಈ ಭಾವಪ್ರ ದಶ‌ನ ಪೂವಾ‍ಲೋಚನೆ ಇಲ್ಲದೆಯೇ ನಡೆದ ಘಟನೆ ರಾಮಗೌಡ ಮುಖವೆತ್ತಿ ಪುಟ್ಟಬಸವನ ಬಲಮಗ್ಗುಲಲ್ಲಿ ನೇರವಾಗಿ ನಿಂತು, ಎಳೆಯ ಮಗುವಿನಂತೆ ಹಷಾ‍ತಿರೇಕದಿಂದ ನುಡಿದ; "ಕಲ್ಯಾಣಸ್ವಾಮಿ ನಮ್ಮ ನಾಯಕರು! ಅರಸರ ಪರವಾಗಿ ನಮ್ಮ ನ್ನೆಲ್ಲ ನಡಸಿಕೊಂಡು ಹೋಗೋ ರಾಜ್ಯಪಾಲರು!" ಆ ಕ್ಷಣ, ಆ ಮಾತೇ ಉಳಿದವರ ಹೃದಯಗಳಲ್ಲೂ ಮಾದನಿ ಗೊಂಡಿತು. ರಾಮಗೌಡ ಮತ್ತೊಮ್ಮೆ ಪುಟ್ಟಬಸವನ ಅಂಗೈಗಳನ್ನು ಮುದ್ದಿಸಿ, ಕನಾಯತಿನ ಬಯಲನ್ನು ಬಿಟ್ಟೋಡುವ ಹುಡುಗನಂತೆ ಅಡ್ಡಾದಿಡ್ಡಿಯಾಗಿ ಕಾಲಿಡುತ್ತ, ತಾನು ಹಿಂದೆ ಕುಳಿತಿದ್ದೆಡೆಗೇ ಬಂದ. ನಂಜಯ್ಯ ತುಸು ಕಂಪಿಸುತಿದ್ದ ಸ್ವರದಲ್ಲಿ ನುಡಿದ; "ಇಂಥ ದಿನ ಹೀಗೆ ಬದಗಿ ಬಂದೀತೊಂತ ನಾನು ಭಾವಿದದಿರ್ಲಿಲ್ಲ. ಒಳ್ಳೇದಾಯ್ತು!" ಆ ಹೊಸ ಪರಿಸ್ಧಿತಿಗೆ ಕಾರಣನಾದ ರಾಮಗೌಡನನ್ನು ಕರೆದು ತಂದ ಹೆಮ್ಮೆಗೆ, ತಾನೊಬ್ಬನೇ ಹಕ್ಕುದಾರನೆಂದು ಮಾಚಯ್ಯ, ಎದೆ ಮುಖಗಳನ್ನು ಉಬ್ಬಿಸಿ ಕುಳಿತ. ಒಂದು ಘಟ್ಟ ಮುಗಿಯಿತೆಂಬಂತೆ ನೀಳವಾಗಿ ಪುಟ್ಟಬಸವ ಉಸಿತು ಬಿಟ್ಟ. ....ಆಡುಗೆ ಮನೆಯಲ್ಲಿ ಸೊಸೆಗೆ ನೆರವಾಗುತ್ತ ಕುಳಿತಿದ್ದ ಗಂಗವ್ವ, ಮೆಲ್ಲನೆ ನಡೆದು ಜಗಲಿಗೆ ಬಂದಳು. ಮಗನೂ ಆತನ ಸ್ನೇಹಿತನೂ ಅಲ್ಲಿಯೇ