ಪುಟ:Kalyaand-asvaami.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಯದಲ್ಲಿ ಕ್ಷೋಭೆಯ ಕಿಡಿ

ಇದ್ದುದನ್ನು ಗಮನಿಸಿ ಆಕೆ ಅಂದಳು: "ಇನ್ನು ಒಂದು ಘಳಿಗೇಲಿ ಊಟ ತಯಾರಾಗ್ತೇತೆ.ನೀವೆಲ್ಲಾ ಮೈ ತೊಳೆಕೊಂಡು ಬರೋಹಂಗಿದ್ರೆ ಓಗ್ಬನ್ನಿ." "ಹೂನಮ್ಮಾ,"ಎಂದ ಪುಟ್ಟಬಸವ. ರಾಮಗೌಡನೆಂದ: "ಇವತ್ತು ನಾನೂ ಇಲ್ಲೇ ಊಟಕ್ಕೇಳ್ತೀನಿ ತಾಯಿ" ಆತ ಮಾಚಯ್ಯನ ಜೊತೆಗೆ ಬಂದವನೆಂಬುದನ್ನು ಆ ಸ್ವರದಿಂದಲೇ ಗುರುತಿಸಿ ಗಂಗವ್ವನೆಂದಳು: "ಹೂ ಕಣಪ್ಪಾ .ನಿಮಗೂ ಅಡುಗೆ ಮಾಡಿವ್ನಿ." ನಂಜಯ್ಯ ಪುಟ್ಟಬಸವನನ್ನು ಕುರಿತು ಹೇಳಿದ: "ಏಳಿ ಸ್ವಾಮಿಯವರೆ.ಇನ್ನು ಯೋಚಿಸಬೇಕಾದ್ದು ಏನೂ ಉಳೀಲಿಲ್ಲ.ನಡೀರಿ.ಸ್ನಾನಕ್ಕೆಓಗಾನ" ಯಾರು?ಯಾವ ಸ್ವಾಮಿಯವರು? ಗಂಗವ್ವನಿಗೊಂದೂ ಗೊತ್ತಾಗಲಿಲ್ಲ.